ಗ್ರಾಮಾಂತರ ಸ್ಥಳೀಯ

ನೀರೆಬೈಲೂರು: ಶ್ರೀ ಕೊಡಮಣಿತ್ತಾಯಿ ಬ್ರಹ್ಮ ಬೈದರ್ಕಳ ಗರಡಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ನಾರಾಯಣ ಶೆಟ್ಟಿ

ಉಡುಪಿ: ಶ್ರೀಕೊಡಮಣಿತ್ತಾಯಿ ಬ್ರಹ್ಮ ಬೈದರ್ಕಳ ಗರಡಿ, ನೀರೆಬೈಲೂರು ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಉಡುಪಿಯ ನೋಟರಿ ಮತ್ತು ವಕೀಲರಾದ ನಾರಾಯಣ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಕಳೆದ ಅವಧಿಯಲ್ಲಿ ಹದಿನೇಳು ವರ್ಷಗಳ ಕಾಲ ಅಧ್ಯಕ್ಷರಾಗಿ ಈ ಗರಡಿಯ ಸೇವೆ ಸಲ್ಲಿಸಿದ್ದಾರೆ.

ಕಲ್ಯಾಣಪುರ ಮಿಲಾಗ್ರೆಸ್ ಕಾಲೇಜಿನಲ್ಲಿ 35 ವರ್ಷಗಳಿಗಿಂತ ಹೆಚ್ಚು ಕಾಲ ಹಿಂದಿ ಪ್ರೊಫೆಸರ್ ಆಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ ಇವರು ಕಲ್ಯಾಣಪುರ ಸಂತೆಕಟ್ಟೆ ರೋಟರಿ ಕ್ಲಬ್ ನ ಸ್ಥಾಪಕ ಅಧ್ಯಕ್ಷರು ಕೂಡಾ ಆಗಿದ್ದಾರೆ.

ಕಾರ್ಯದರ್ಶಿಯಾಗಿ ರವೀಂದ್ರ ಹೆಗ್ಡೆ ಮತ್ತು ಕೋಶಾಧಿಕಾರಿಯಾಗಿ, ರಾಜೇಂದ್ರ ಶೆಟ್ಟಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ವ್ಯವಸ್ಥಾಪನ ಸಮಿತಿಯ ಇನ್ನಿತರ ಸದಸ್ಯರು: ಶ್ರೀಮತಿ ಮೈನಾ ಹೆಗ್ಡೆ, ನೀರೆ ಪೆರಿಮಾರುಗುತ್ತು ಭಂಡಾರದ ಮನೆ, ರತ್ನಾಕರ ಶೆಟ್ಟಿ, ಗೋಪಾಲ ಪೂಜಾರಿ, ರಾಜೇಂದ್ರ ಶೆಟ್ಟಿ, ರವೀಂದ್ರ ಹೆಗ್ಡೆ, ಸುರೇಶ್ ಪರವ, ಸುಶೀಲಾ ಶೆಟ್ಟಿ, ರಾಮ್ ಪ್ರಕಾಶ್ ಶೆಟ್ಟಿ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಅಮೃತ ಸಾಹಿತ್ಯ ವೇದಿಕೆ ಲಾಂಛನ ಬಿಡುಗಡೆ ಫೆ.28ಕ್ಕೆ

Upayuktha

ಲಯನ್ಸ್ ಜಿಲ್ಲೆ 317ಡಿ ವತಿಯಿಂದ 20 ಲಕ್ಷ ರೂ. ಮೌಲ್ಯದ ಕೋವಿಡ್ ಸಲಕರಣೆಗಳ ಹಸ್ತಾಂತರ

Upayuktha

ಮಂಗಳೂರು ಹೋಟೆಲ್, ಕ್ಲಬ್‍ಗಳಲ್ಲಿ ಹೊಸ ವರ್ಷಾಚರಣೆಗೆ ಪೂರ್ವಾನುಮತಿ ಕಡ್ಡಾಯ

Upayuktha