ದೇಶ-ವಿದೇಶ

ಐತಿಹಾಸಿಕ ಕ್ಷಣಕ್ಕೆ ದೇಶ ಸಾಕ್ಷಿ: ಕೊರೋನಾ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

ದೇಶವನ್ನುದ್ದೇಶಿಸಿ ಪ್ರಧಾನಿಯವರು ಹೇಳಿದ್ದೇನು?

ಹೊಸದಿಲ್ಲಿ: ಕೊರೋನಾ ವಿರುದ್ಧದ ಲಸಿಕೆ ಯಾವಾಗ ದೊರೆಯುತ್ತದೆ ಎಂದು ಎಲ್ಲರೂ ಕೇಳುತ್ತಿದ್ದರು. ಈಗ ಅದು ದೊರೆತಿದ್ದು, ಇಡಿಯ ವಿಶ್ವವೇ ನಮ್ಮ ಭಾರತದ ಕಡೆಗೆ ತಿರುಗಿ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೇಶವ್ಯಾಪಿ ಕೊರೋನಾ ಲಸಿಕೆ ಅಭಿಯಾನಕ್ಕೆ ಆನ್‌ಲೈನ್ ಮೂಲಕ ಚಾಲನೆ ನೀಡಿ ದೇಶವನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ.

ದೇಶಕ್ಕೆ ಲಸಿಕೆ ದೊರೆತಿರುವ ಈ ಸಂದರ್ಭದಲ್ಲಿ ದೇಶದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ. ಸಾಮಾನ್ಯವಾಗಿ ಒಂದು ಲಸಿಕೆ ಕಂಡು ಹಿಡಿಯಲು ಹಲವು ವರ್ಷಗಳೇ ಬೇಕಾಗುತ್ತಿತ್ತು. ಆದರೆ, ಕೆಲವೇ ಸಮಯದಲ್ಲಿ ಒಂದಲ್ಲ, ಎರಡು ದೇಶೀ ನಿರ್ಮಿತ ಲಸಿಕೆಗಳು ತಯಾರಾಗಿವೆ. ಇದೇ ವೇಳೆ ಇತರೆ ಲಸಿಕೆಗಳ ಅಭಿವೃದ್ಧಿ ಕೂಡ ವೇಗವಾಗಿ ನಡೆಯುತ್ತಿದೆ ಎಂದರು.

ಕೊರೋನಾ ಲಸಿಕೆಯ ಎರಡು ಲಸಿಕೆಗಳು ಬಹಳ ಮುಖ್ಯ. ಎರಡೂ ವ್ಯಾಕ್ಸಿನೇಷನ್‌ಗಳ ನಡುವೆ ಒಂದು ತಿಂಗಳ ಅಂತರವಿರಬೇಕು ಎಂದು ತಜ್ಞರು ಹೇಳಿದ್ದಾರೆ. ಇದನ್ನು ಪಾಲಿಸಬೇಕು ಎಂದರು.

ಲಸಿಕೆ ಚಾಲನೆ ನೀಡಿದ ಬಳಿಕ ಪ್ರಧಾನಿಯವರು ಜನಸಾಮಾನ್ಯರು ಲಸಿಕೆ ಪಡೆಯಲು ಕಡ್ಡಾಯವಾಗಿರುವ ಕೋ-ವಿನ್ ಆ್ಯಪ್‌ಗೂ ಚಾಲನೆ ನೀಡಿದ್ದಾರೆ.

ಇನ್ನು, ಇಡಿಯ ದೇಶವೇ ಕಾತರದಿಂದ ಕಾಯುತ್ತಿದ್ದ ಕೊರೋನಾ ಲಸಿಕೆ ಈಗ ದೇಶಕ್ಕೆ ದೊರೆತಿದ್ದು, ಇಂದಿನಿಂದ ಇದರ ಅಭಿಯಾನ ಆರಂಭವಾಗಿದೆ. ಮೊದಲ ದಿನ 3006 ಲಸಿಕಾ ಕೇಂದ್ರಗಳಲ್ಲಿ 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗುತ್ತಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಹಿಂದೂ ಮಹಾಸಾಗರದಲ್ಲಿ ಚೀನೀ ನೌಕೆಗಳ ಗಸ್ತು

Upayuktha

ಪ್ರಿಯತಮನ ಜೊತೆ ಆಟೋ ರಿಕ್ಷಾದಲ್ಲಿ ಜಗಳ: ಸಾವಿನಲ್ಲಿ ಅಂತ್ಯ

Sushmitha Jain

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ

Upayuktha