ನಗರ ಸ್ಥಳೀಯ

ರಸ್ತೆ ನಿಯಮಗಳನ್ನು ಪಾಲಿಸಿ: ಡಾ|| ಚೂಂತಾರು

ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಉದ್ಘಾಟನೆ

ಮಂಗಳೂರು: ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲರೂ ನಿಯತ್ತಾಗಿ ಮತ್ತು ಪರಿಪೂರ್ಣವಾಗಿ ಅನುಸರಿಸಬೇಕು. ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಸಾಮಾನ್ಯ ರಸ್ತೆ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಹೆಚ್ಚಿನ ಎಲ್ಲಾ ರಸ್ತೆ ಅಪಘಾತಗಳು ಮದ್ಯಪಾನ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಜನರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.

ಶುಕ್ರವಾರದಂದು (ಜ.22) ಜಿಲ್ಲಾ ಗೃಹರಕ್ಷಕ ದಳದ ಕಛೇರಿ ಮೇರಿಹಿಲ್ ಇಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಮತ್ತು ತಿಂಗಳು ಇದರ ಅಂಗವಾಗಿ ದ.ಕ. ಜಿಲ್ಲಾ ಗೃಹರಕ್ಷಕ ದಳ, ಪೌರರಕ್ಷಣಾ ದಳ, ಲಯನ್ಸ್ ಕ್ಲಬ್ ಮೆಟ್ರೋಗೋಲ್ಡ್ ಮತ್ತು ಲಯನ್ಸ್ ಕ್ಲಬ್ ಮಂಗಳೂರು ತ್ರಿವೇಣಿ ಇದರ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷಾ ಅಭಿಯಾನ ಇದರ ಉದ್ಘಾಟನಾ ಸಮಾರಂಭ ನಡೆಯಿತು.

ರಸ್ತೆ ಸುರಕ್ಷಾ ನಿಯಮಗಳನ್ನು ಎಚ್ಚರಿಸುವ ಸುಮಾರು 5000 ಕರಪತ್ರಗಳನ್ನು ನಗರದೆಲ್ಲೆಡೆ ಹಂಚುವ ಉದ್ದೇಶದಿಂದ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಜೆ.ಕೆ. ಹರಿಪ್ರಸಾದ್ ಇವರು ಮಾತನಾಡಿ, ರಸ್ತೆ ಸುರಕ್ಷತಾ ನಿಯಮವನ್ನು ಅನುಷ್ಠಾನಕ್ಕೆ ತರುವಲ್ಲಿ ಗೃಹರಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಶ್ರೀಮತಿ ಶಾಲಿನಿ ಸುವರ್ಣ ಅಧ್ಯಕ್ಷರು, ಮಂಗಳೂರು, ತ್ರಿವೇಣಿ, ಶಿಲ್ಪ ಮತ್ತು ಮೀರಾ ಲಯನ್ಸ್ ಕ್ಲಬ್ ತ್ರಿವೇಣಿ ಸದಸ್ಯರು, ರಂಜಿತ್ ಶೆಟ್ಟಿ, ಲಯನ್ಸ್ ಮೆಟ್ರೋಗೋಲ್ಡ್ ಮೆಂಬರ್ ಉಪಸ್ಥಿತರಿದ್ದರು.

ಕಛೇರಿ ಸಿಬ್ಬಂದಿಗಳಾದ ರತ್ನಾಕರ್, ಅನಿತಾ ಉಪಸ್ಥಿತರಿದ್ದರು. ಹಿರಿಯ ಗೃಹರಕ್ಷಕರಾದ ಸುನಿಲ್ ಕುಮಾರ್, ದಿವಾಕರ್, ಮಹೇಶ್, ರಾಜಶ್ರೀ , ಸುನಿಲ್ ಪೂಜಾರಿ, ಶಿವಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು. ಗೃಹರಕ್ಷಕರಾದ ರಕ್ಷಿತ್ ಅಡಪ್ಪ ಇವರು ವಂದಿಸಿದರು. ಸುಮಾರು 30 ಮಂದಿ ಗೃಹರಕ್ಷಕರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ರಾಣಿ ಚೆನ್ನಮ್ಮ ವಿವಿ ಪಠ್ಯದಲ್ಲಿ ಸೇರ್ಪಡೆಗೊಂಡ ಎಸ್‌ಡಿಎಂ ಪ್ರಾಧ್ಯಾಪಕಿಯ ಲೇಖನ

Upayuktha

ಸಿರಿಧಾನ್ಯಗಳೇ ವರದಾನ: ಡಾ. ಖಾದರ್

Upayuktha

ಕೊರೊನಾ ನಿಯಂತ್ರಣ ಕ್ರಮ: ಆರ್‌ಟಿಓ ಸೇವೆಗಳು ಅನಿರ್ದಿಷ್ವಾವಧಿ ಬಂದ್

Upayuktha