ನಗರ ಸ್ಥಳೀಯ

ರಾಮಕೃಷ್ಣ ಮಠದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಮಂಗಳೂರು: ಆತ್ಮನಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಪಾಪ ಏನಾದರೂ ಇದ್ದರೆ ಅದು ನಿಮ್ಮನ್ನು ನೀವು ಅಶಕ್ತನೆಂದು ಕಳೆದುಕೊಳ್ಳುವುದು, ಎಂದು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಹೇಳಿದರು.

ಮಂಗಳೂರಿನ ಶ್ರೀ ರಾಮಕೃಷ್ಣಮಠ ಬಾಲಕಾಶ್ರಮದಲ್ಲಿ ಇತ್ತೀಚೆಗೆ ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ವಿಜ್ಞಾನ ಮಾದರಿ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಏನಾದರೂ ಹೊಸತನ್ನು ಅನ್ವಯಿಸಬೇಕು ಅಥವಾ ಏನಾದರೂ ಸಾಧಿಸಬೇಕು ಎನ್ನುವ ಛಲ ನಮ್ಮಲ್ಲಿರಬೇಕು, ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾಸ್ಸಿಯಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸರ್ ಎವರೆಸ್ಟ್ ಕ್ರಾಸ್ತಾ ಹಾಗೂ ಬಾಲಕಾಶ್ರಮದ ವಾರ್ಡನ್ ಸ್ವಾಮೀಜಿ ರಘುರಾಮನಂದಜಿ ಉಪಸ್ಥಿತರಿದ್ದರು.

ಬಾಲಕಾಶ್ರಮದ ವಿದ್ಯಾರ್ಥಿಗಳ ವಿವಿಧ ವಿಜ್ಞಾನ ಮಾದರಿ ಪ್ರದರ್ಶನ ಮನಸೆಳೆಯಿತು. ವಿವಿಧ ಶಾಲೆಯ ವಿದ್ಯಾರ್ಥಿಗಳು ಬಂದು ವಿಜ್ಞಾನ ಮಾದರಿ ಪ್ರದರ್ಶನ ವೀಕ್ಷಿಸಿದರು. ಮಂಗಳೂರು ಬಿಇಒ ಕಾರ್ಯಾಲಯದಿಂದ ಜ್ಯೋತಿಯವರು ಮಕ್ಕಳು ಮಾಡಿದ ವಿಜ್ಞಾನ ಪ್ರದರ್ಶನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

‘ಸುರಕ್ಷಾ’ದಲ್ಲಿ ದಂತ ವೈದ್ಯರ ದಿನಾಚರಣೆ ಸಂಭ್ರಮ

Upayuktha

ಮೂಡುಬಿದಿರೆ: ಸ್ಫರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ

Upayuktha

ತೀವ್ರ ಉಸಿರಾಟದ ಸಮಸ್ಯೆಯಿಂದ ಸುರತ್ಕಲ್‌ನ ಯುವಕ ಸಾವು: ಕೊರೊನಾ ಶಂಕೆ, ಪ್ರಯೋಗಾಲಯಕ್ಕೆ ಸ್ಯಾಂಪಲ್ ರವಾನೆ

Upayuktha