ಕ್ಯಾಂಪಸ್ ಸುದ್ದಿ ಪ್ರಮುಖ

ಗಾಂಧಿ ಚಿಂತನೆಗಳ ಪ್ರಸ್ತುತತೆ: 23ರಂದು ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರಸಂಕಿರಣ 

(ಚಿತ್ರ ಕೃಪೆ: ರಾಜ್ಯಸಭಾ ಟಿ ವಿ)

ಮಂಗಳೂರು:

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ನಗರದ ಸೇಂಟ್ ಆಗ್ನೆಸ್ ಸ್ವಾಯತ್ತ ಕಾಲೇಜಿನಲ್ಲಿ ಸೆ.23ರಂದು ‘ರೀ ಥಿಂಕಿಂಗ್ ಮಹಾತ್ಮಾ ಗಾಂಧಿ- ಇಶ್ಯೂಸ್ ಅಂಡ್ ಚಾಲೆಂಜಸ್‌’ (ಮಹಾತ್ಮಾ ಗಾಂಧಿ ಪುನರವಲೋಕನ- ವಿಷಯಗಳು ಮತ್ತು ಸವಾಲುಗಳು) ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಕಾಲೇಜಿನ ಸಭಾಂಗಣದಲ್ಲಿ ಬೆಳಗ್ಗೆ 9:30ಕ್ಕೆ ಆರಂಭವಾಗುವ  ಈ ವಿಚಾರ ಸಂಕಿರಣವನ್ನು ಇತಿಹಾಸ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಳು ಸಂಯುಕ್ತವಾಗಿ ಆಯೋಜಿಸಿವೆ.

ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಜಸ್ಟಿಸ್ ವಿ. ಗೋಪಾಲ ಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಪ್ರೊ. ಬಿ.ಕೆ ಚಂದ್ರಶೇಖರ್ ಭಾಗವಹಿಸಲಿದ್ದಾರೆ.

ಮುಖ್ಯ ಭಾಷಣಕಾರರಾಗಿ ದಿಲ್ಲಿಯ ಜವಾಹರಲಾಲ್ ನೆಹರೂ ಯುನಿವರ್ಸಿಟಿಯ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ವಲೇರಿಯನ್ ರೋಡ್ರಿಗಸ್ ವಿಚಾರ ಮಂಡಿಸಲಿದ್ದಾರೆ. ಸೇಂಟ್ ಆಗ್ನೆಸ್ (ಸ್ವಾಯತ್ತ) ಕಾಲೇಜಿನ ಪ್ರಿನ್ಸಿಪಾಲರಾದ ಡಾ. ಎಂ. ಜೆಸ್ವಿನಾ ಎ.ಸಿ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮ ವೇಳಾಪಟ್ಟಿ ವಿವರ:

ಬೆಳಗ್ಗೆ 8:30ರಿಂದ 9:30ರ ವರೆಗೆ ನೋಂದಣಿ, 9:30ರಿಂದ 11:00ರ ವರೆಗೆ ಉದ್ಘಾಟನೆ, 11:00ರಿಂದ 11ಳ45ರ ವರೆಗೆ ಪ್ರಧಾನ ಭಾಷಣ ನಡೆಯಲಿದೆ. ಬಳಿಕ 11:45ರಿಂದ 12:00ರ ವರೆಗೆ ಚಹಾ ವಿರಾಮ, 12:00ರಿಂದ 1:00 ಗಂಟೆ ವರೆಗೆ ವಿಚಾರ ಮಂಡನೆ-1 ನಡೆಯಲಿದೆ.

‘ರಿಲಿಜನ್ ಅಂಡ್ ಪೊಲಿಟಿಕ್ಸ್ ಇನ್ ಗಾಂಧಿ’ (ಗಾಂಧಿ ಅವರಲ್ಲಿ ಧರ್ಮ ಮತ್ತು ರಾಜಕೀಯ) ಎಂಬ ವಿಷಯದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರೊ. ಬಿ.ಕೆ ಚಂದ್ರಶೇಖರ್ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜಾರಾಂ ತೋಳ್ಪಾಡಿ ಅವರು  ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 1:00ರಿಂದ 1:45ರ ವರೆಗೆ ನಡೆಯುವ ಎರಡನೇ ವಿಚಾರ ಮಂಡನೆಯಲ್ಲಿ- ‘ಗಾಂಧೀಜಿಯ ರಾಜಕೀಯ ಅರ್ಥಶಾಸ್ತ್ರ ಚಿಂತನೆಗಳು- ಕಾಲಾತೀತ ಅಚ್ಚರಿ’ (ಗಾಂಧಿಯನ್ ಪೊಲಿಟಿಕೊ ಎಕನಾಮಿಕ್ ಥಾಟ್ ಆನ್ ಏಜ್‌ಲೆಸ್ ವಂಡರ್) ಎಂಬ ವಿಷಯದ ಕುರಿತು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೋ) ವಡಗರದ ಪ್ರಾದೇಶಿಕ ನಿರ್ದೇಶಕ ಡಾ. ಎಂ ರಾಜೇಶ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಲಿದ್ದಾರೆ.

1:45ರಿಂದ 2:30ರ ವರೆಗೆ ಭೋಜನ ವಿರಾಮ, ಬಳಿಕ 2:30ರಿಂದ 3:30ರ ವರೆಗೆ ಮೂರನೇ ವಿಚಾರ ಮಂಡನೆ ನಡೆಯಲಿದೆ. ‘ಸ್ವರಾಜ್ಯ ಮತ್ತು ಬಹುತ್ವ: ಗಾಂಧಿ ಚಿಂತನೆ’ ವಿಷಯದಲ್ಲಿ ಶ್ರೀರಂಗ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಮೊಹಮ್ಮದ್ ಮುಸ್ತಾಫ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ.

ಗಾಂಧಿ ಮತ್ತು ಸಂಘರ್ಷಾತ್ಮಕ ವಸಾಹತುಶಾಹಿ ವಿಚಾರವಾಗಿ ಉಡುಪಿ ಅಜ್ಜರಕಾಡಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜಿ ಶಂಕರ್‌ ಪ್ರಬಂಧ ಮಂಡಿಸಲಿದ್ದಾರೆ.

ಚರ್ಚಾಕೂಟ:

3:30ರಿಂದ 3:45ರ ವರೆಗೆ ಚಹಾ ವಿರಾಮ, 3:45ರಿಂದ 4:30ರ ವರೆಗೆ ‘ಗಾಂಧಿ ಸಂಸ್ಮರಣೆ’ ಕುರಿತ ಚರ್ಚಾ ಕೂಟ ನಡೆಯಲಿದೆ. ಮಣಿಪಾಲದ ಪತ್ರಕರ್ತ ಮೋಹನ್ ಚಂದ್ರ ನಂಬಿಯಾರ್‌, ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಪಿ.ವಿ ಮೋಹನ್‌, ಮಂಗಳೂರಿನ ಮಿಫ್ಟ್ ಕಾಲೇಜಿನ ನಿರ್ದೇಶಕ ಎಂ.ಜಿ ಹೆಗಡೆ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ರೋಸ್‌ವೀರ ಡಿಸೋಜ ಚರ್ಚಾಗೋಷ್ಠಿ ನಿರ್ವಹಿಸಲಿದ್ದಾರೆ.

Related posts

ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಭಾರೀ ಮಳೆ

Upayuktha

ಆಳ್ವಾಸ್ ಹೋಮಿಯೋಪಥಿ ಕಾಲೇಜಿಗೆ 32 ರ‍್ಯಾಂಕ್‌

Upayuktha

ಹಿಂದೂ ಮಹಾಸಾಗರದಲ್ಲಿ ಚೀನೀ ನೌಕೆಗಳ ಗಸ್ತು

Upayuktha

Leave a Comment

error: Copying Content is Prohibited !!