ದೇಶ-ವಿದೇಶ ಪ್ರಮುಖ

ಬಲವಂತದ ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಉತ್ತರಪ್ರದೇಶದ ರಾಜ್ಯಪಾಲರ ಒಪ್ಪಿಗೆ

ಲಕ್ನೋ: ಒತ್ತಾಯಪೂರ್ವಕ ಅಥವಾ ಅವಮಾನಕಾರಿ ಮತಾಂತರದ ವಿರೋಧಿ ವಿಧೇಯಕಕ್ಕೆ ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ಶನಿವಾರದಂದು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಉತ್ತರಪ್ರದೇಶದ’ ಪ್ರೊಹಿಬಿಷನ್ ಆಫ್ ಅನ್ ಲಾ ಫುಲ್ ಆರ್ಡಿನೆನ್ಸ್ 2020′ , ರಾಜ್ಯಪಾಲರ ಅನುಮೋದನೆಯೊಂದಿಗೆ ಈ ಶಾಸನವನ್ನು ಘೋಷಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರು ಈ ಹಿಂದೆ ರಾಜ್ಯ ಕಾರ್ಯಾಂಗದಲ್ಲಿ ಅವಮಾನಕರ ಧಾರ್ಮಿಕ ಮತಾಂತರ ವಿರೋಧಿ ಶಾಸನದ ಕರಡನ್ನು ಅನುಮೋದಿಸಿದ್ದರು.

ಈ ಶಾಸನದ ಪ್ರಕಾರ ಮದುವೆ ಮತ್ತು ಭೂ ಸ್ವಾಧೀನ ವಿಚಾರಗಳಿಗಾಗಿ ಮಾತ್ರ ಮತಾಂತರ ನಡೆದರೆ ಅಂತಹ ಮದುವೆಗಳನ್ನು ನಿಷ್ಪ್ರಯೋಜಕ ಎಂದು ಘೋಷಿಸಲಾಗುವುದು ಮತ್ತು ಮದುವೆಯ ನಂತರದ ಧಾರ್ಮಿಕ ಮತಾಂತರ ಪಡೆಯಬೇಕಾದರೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಅರ್ಜಿ ಸಲ್ಲಿಸಬೇಕು.

ಇತ್ತೀಚಿನ ದಿನಗಳಲ್ಲಿ ‘ಲವ್ ಜಿಹಾದ್’ ಪ್ರಕರಣಗಳು ಹೆಚ್ಚುತ್ತಿದ್ದು , ಬಿ.ಜೆ.ಪಿ ಆಡಳಿತ ಹೊಂದಿರುವ ಉತ್ತರ ಪ್ರದೇಶ, ಹರಿಯಾಣ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಹಿಂದೂ ಮಹಿಳೆಯರ ಧಾರ್ಮಿಕ ಮತಾಂತ ತಡೆಯುವ ಕಾನೂನನ್ನು ಜಾರಿಗೊಳಿಸುವ ಯೋಜನೆ ರೂಪಿಸಲಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸಣ್ಣ ಉಳಿತಾಯದ ಬಡ್ಡಿ ದರ ಕಡಿತಕ್ಕೆ ಆರ್‌ಬಿಐ ಆಗ್ರಹ; ಪಿಪಿಎಫ್‌ ಇನ್ನು ಲಾಭದಾಯಕ ಅಲ್ಲವೆ..?

Upayuktha

ಇನ್ನೂ ಮೂರು ದಿನ ಉತ್ತರ ಭಾರತ ಈಶಾನ್ಯ ರಾಜ್ಯಗಳಲ್ಲಿ ದಟ್ಟ ಮಂಜು ಮತ್ತು ಭಾರೀ ಶೀತ

Harshitha Harish

ಸಹಜ ಸುಗಂಧ: ಮನೆ ಕೆಲಸ ಮಾಡಿಕೊಂಡು ಓದಿಸಿದ ತಾಯಿ ಮಲ್ಲಮ್ಮನಿಗೆ ಹೆಮ್ಮೆ ತಂದ ಮಗ ಮಹೇಶ

Upayuktha