ನಗರ ಸ್ಥಳೀಯ

ಶಿಕ್ಷಣ ವಂಚಿತರಿಗೆ ವಿದ್ಯಾದಾನ ಮಾಡುವುದು ಶ್ರೇಷ್ಠ ಕಾರ್ಯ: ಸುನೀಲ್ ಆಚಾರ್ಯ

ಮಂಗಳೂರು: ನವಭಾರತ ರಾತ್ರಿ ಪ್ರೌಢಶಾಲೆಯಂತಹ ವಿದ್ಯಾ ಸಂಸ್ಥೆ ನಗರದ ಹೃದಯ ಭಾಗದಲ್ಲಿ ಶಿಕ್ಷಣ ವಂಚಿತರಿಗೆ ವಿದ್ಯಾದಾನ ಮಾಡುತ್ತಾ ಸಮಾಜ ಉಪಯೋಗೀ ಕಾರ್ಯವನ್ನು ಮಾಡಿಕೊಂಡು ಬರುತ್ತಾ ಇದೆ. 78 ವರ್ಷಗಳ ಇತಿಹಾಸವುಳ್ಳ ನಿಃಶುಲ್ಕ ವಿದ್ಯಾದಾನ ನೀಡುತ್ತಿರುವ ಮನೆಮಾತಾಗಿರುವ ಇಂತಹ ರಾತ್ರಿ ಪ್ರೌಢಶಾಲೆ ನಗರದಲ್ಲಿ ಸ್ತುತ್ಯರ್ಹ ಕಾರ್ಯವನ್ನು ಮಾಡುತ್ತಾ ಇದೆ. ದಿ. ಖಾಲಿದ್ ಮಹಮ್ಮದ್ ಅವರಿಂದ ಸ್ಥಾಪಿತವಾದ ಈ ಶಾಲೆ ಇಂದು ಜಾತಿ ಮತಗಳ ಬೇಧವಿಲ್ಲದೆ ಶಿಕ್ಷಣವನ್ನು ನೀಡುತ್ತಾ ಶಿಕ್ಷಣ ರಂಗದಲ್ಲಿ ಮೈಲಿಗಲ್ಲು ಸ್ಥಾಪಿಸಿದೆ. ಸಮಾಜದ ಋಣವನ್ನು ತೀರಿಸಬೇಕಾದ ನಾವು ಈ ಶಾಲೆಗೆ ಯಾವುದಾದರೊಂದು ರೀತಿಯಲ್ಲಿ ಸಹಾಯ ಮಾಡಬೇಕು. ಆಗ ಇದು ಇನ್ನಿನ್ನು ಹೆಚ್ಚೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿ ಅವಿದ್ಯಾವಂತರನ್ನು ವಿದ್ಯಾವಂತರನ್ನಾಗಿಸುವ ಕಾರ್ಯಕ್ಕೆ ವೇಗ ಸಿಗಲಿ” ಎಂದು ನಗರದ ಖ್ಯಾತ ಉದ್ಯಮಿ ಸುನಿಲ್ ಆಚಾರ್ಯ ಹೇಳಿದರು.

ಅವರು ನವಭಾರತ ರಾತ್ರಿ ಪ್ರೌಢಶಾಲೆಯ 78ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

“ಶಾಲೆಯು ಈ ಬಾರಿ ಸಂಸ್ಥಾಪಕರ 98ನೇ ಜನ್ಮ ದಿನವನ್ನಾಚರಿಸಿ 2023ರಲ್ಲಿ ಜನ್ಮ ಶತಾಬ್ದಿ ಕಾರ್ಯಕ್ರಮವನ್ನು ಆಚರಿಸಲಿದೆ” ಎಂದು ಶಾಲಾ ಮುಖ್ಯೋಪಾಧ್ಯಾಯ ಶ್ರೀ ರವಿ ಅಲೆವೂರಾಯರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಹೇಳಿದರು.

ಸಂಸ್ಥೆಯ ಅಧ್ಯಕ್ಷ ಡಾ.ಪಿ.ವಿ.ಶೆಣೈಯವರು “ಕೇವಲ ಶೂನ್ಯದಿಃದಲೇ ಆರಂಭಗೊಂಡ ಈ ಶಾಲೆ ಇಂದು ನಗರದಲ್ಲಿ ಹೆಚ್ಚೆಚ್ಚು ಶಿಕ್ಷಣ ವಂಚಿತರನ್ನು ಆಕರ್ಷಿಸಿ ಅನೇಕ ಶ್ರಮಿಕರ ಆಶಾಕಿರಣವಾಗಿ ಹೊರಹೊಮ್ಮಿದೆ. ಇಲ್ಲಿ ನೀಡುವ ಶಿಕ್ಷಣ ಸಾಂಸ್ಕೃತಿಕವಾಗಿ ರಾಷ್ಟ್ರೀಯ ನೆಲೆಯಲ್ಲಿ ದೊರಕಿ, ವಿದ್ಯಾರ್ಥಿಗಳು ಸಮಾಜಮುಖಿಗಳಾಗುತ್ತಾರೆ” ಎಂದು ಅಧ್ಯಕ್ಷೀಯ ನುಡಿಯಲ್ಲಿ ಹೇಳಿದರು.

ಗೌರವ ಕಾರ್ಯದರ್ಶಿ ಎಂ. ರಾಮಚಂದ್ರ ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ರವಿತಾ ನಾಯಕ್ ವರದಿ ವಾಚಿಸಿದರು. ಶ್ರೀ ಮಾಧವ ನಾವಡರು ನಿರ್ವಹಿಸಿದರು. ವಿದ್ಯಾರ್ಥಿ ನಾಯಕ ನಿತೇಶ್, ಉಪನಾಯಕ ಗೋಪಿ ಉಪಸ್ಥಿತರಿದ್ದರು.

ಬಳಿಕ ನವಭಾರತ ಯಕ್ಷಗಾನ ಅಕಾಡೆಮಿಯ ಸದಸ್ಯರಿಂದ ‘ನರಕಾಸುರ ಮೋಕ್ಷ’ ಯಕ್ಷಗಾನ ಬಯಲಾಟ ನಡೆಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ನಡೆಯಿತು.

ಉದಾರ ದಾನಿಗಳು ಸಂಸ್ಥಾಪಕರ ಜ್ಯೇಷ್ಠ ಪುತ್ರರೂ ಆದ ಡಾ. ಎ.ಆರ್. ನಾಸೀರ್ ರವರು ಕೊರೋನಾ ಸಂದರ್ಭದಲ್ಲಿ ಮತ್ತು ಇನ್ನಿತರ ಅವಶ್ಯಕತೆಗಳಿಗೆ ಶಾಲೆಗೆ ನೀಡುವ ಉದಾರ ದೇಣಿಗೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು. ಉದಾರವಾಗಿ ಊಟೋಪಚಾರಗಳನ್ನು ನೀಡಿದ ರವಿ ಭಟ್ ಕಪಿತಾನಿಯೋ ಹಾಗೂ ಜಯರಾಜ್ ಶೆಟ್ಟಿ ವರ್ಕಾಡಿ ಇವರಿಗೂ ಆಭಾರ ಮನ್ನಣೆಯನ್ನು ನೀಡಲಾಯಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಗೃಹರಕ್ಷಕ ದಳ ಬಂಟ್ವಾಳ ಘಟಕದಲ್ಲಿ ವನಮಹೋತ್ಸವ, ರೋಗ ನಿರೋಧಕ ಮಾತ್ರೆಗಳ ವಿತರಣೆ

Upayuktha

ಬಜ್ಪೆ: ಶನೈಶ್ಚರ ದೇವಳದಲ್ಲಿ ಎಲ್ಲ ಸೇವೆ, ಸಾರ್ವಜನಿಕ ದರ್ಶನ ಸ್ಥಗಿತ

Upayuktha

ಮುಕ್ಕ ಪರಿಸರದಲ್ಲಿ ಜನರ ಬದುಕು ಮುಕ್ಕಾಗಿಸಿದ ಫಿಶ್‌ಮೀಲ್‌ಗಳ ಮಾಲಿನ್ಯ

Upayuktha