ಕತೆ-ಕವನಗಳು

ನವರಾತ್ರಿ ಹಬ್ಬ

ಅಕ್ಟೋಬರ್ ತಿಂಗಳು ಬಂತು ಎಂದರೆ


ನೆನಪಾಗುವುದು ದಸರಾ
ಎಲ್ಲೆಲ್ಲೂ ಸಂಭ್ರಮ ಸಡಗರ

ಕಾಣಬಹುದು ನಾನಾ ವಿಧದ ವೇಷಗಳು
ಎತ್ತ ನೋಡಿದರೂ ಹಸಿರು _ತಳಿರು ತೋರಣಗಳು

ದೇವಿ ಕಾಣುವರು ನವಶಕ್ತಿ ರೂಪದಲ್ಲಿ
ಜನರೆಲ್ಲಾ ವಂದಿಸುವರು ಶ್ರದ್ಧಾ, ಭಕ್ತಿಯಲ್ಲಿ

ದೇವಿಗೆ ನಡೆಯುವುದು
ಒಂಭತ್ತು ದಿನಗಳ ಕಾಲ ಅಲಂಕಾರ, ಪೂಜೆ
ಭಕ್ತರು ಅರ್ಪಿಸುವರು ಹರಕೆ ,ಸೇವೆ

ಅದರಲ್ಲೂ ಮಂಗಳೂರು ದಸರಾ
ಆಹಾ! ನೋಡೋಕೆ ಎಷ್ಟೊಂದು ಸುಂದರ

ಕಣ್ಣ್ ಸೆಳೆಯುವಂತೆ ದೇವಿಯ ಅಲಂಕಾರ
ದೇವಾಲಯದ ಸುತ್ತಲೂ ದೀಪಾಲಂಕಾರ
ಆದ ನೋಡುವುದೇ ಮನಸಿಗೆ ಆನಂದ

ಎಲ್ಲ ಕಡೆಗಳಲ್ಲಿ ನಡೆಯುವುದು ದೇವಿಯ ಉತ್ಸವ
ಪ್ರತಿನಿತ್ಯ ದೇವಿಯ ಒಂದೊಂದು ರೂಪ
ಕಾರಣ ಇದು ನವರಾತ್ರಿ ಹಬ್ಬ!!

ಸಂಧ್ಯಾ ಕುಮಾರಿ ,ಎಸ್ ವಿಟ್ಲ

Related posts

ಶಿಕ್ಷಕನೆಂದರೆ….!!! (ಮಕ್ಕಳ ಕವನ)

Upayuktha

ಹವ್ಯಕ ಕವನ: ಕುಣಿಯ ಹೊಗೆಸೊಪ್ಪು ತಪ್ಪಾಲೋಪನೊ ಭಾವಯ್ಯ

Upayuktha

ಭೂ ತಾಯ ಐಸಿರಿ

Harshitha Harish

Leave a Comment