ಹಬ್ಬಗಳು-ಉತ್ಸವಗಳು

ನವರಾತ್ರಿ- 3: ‘ಮಾತೃ-ಪ್ರಕೃತಿ-ಶಕ್ತಿ’ ಉಪಾಸನೆ

ಪರಬ್ರಹ್ಮನ‌ ಚೈತನ್ಯ ಸ್ವರೂಪಿಣಿಯಾದ, ಜಗತ್ತಿನ‌ ಸೃಷ್ಟಿ- ಸ್ಥಿತಿ- ಲಯಗಳಿಗೆ‌ ಕಾರಣಳಾದ ಶಕ್ತಿಯನ್ನು‌ ಮಹಾದೇವನ ಮಡದಿಯಾಗಿ ‘ಶಿವಶಕ್ತಿ’ ಎಂದು ಶೈವರು; ‘ಶ್ರೀಲಕ್ಷ್ಮೀ’ ಎಂದು ವೈಷ್ಣವರು, ‘ಮಹಾಮಾತೆ’ಯೆಂದು ಶಾಕ್ತರು ‘ಪ್ರಕೃತಿ’ಯನ್ನು ಅಥವಾ ಅಮ್ಮನನ್ನು ಅಂದರೆ ಜಗಜ್ಜನನಿಯನ್ನು‌ ಪರಿಭಾವಿಸಿ ವ್ಯಾಖ್ಯಾನಿಸಿದರು- ಉಪಾಸನೆಗೆ ತೊಡಗಿದರು.

ವೇದದಲ್ಲಿ ಬರುವ “ರಾತ್ರೀ ಸೂಕ್ತ”, ವಾಗಂಭೃಣೀ ಸೂಕ್ತ, ಶ್ರೀ ಸೂಕ್ತಗಳು ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತೀಯರ ಆವಿರ್ಭಾವದ ಸ್ಪಷ್ಟ ಕಲ್ಪನೆ ಸ್ಪಷ್ಟ ನೀಡುತ್ತವೆ. ಹೀಗೆ ವೈದಿಕದ ಪ್ರಭಾವದಿಂದ ಶಕ್ತಿ ಆರಾಧನೆ ಮಹತ್ವ ಪಡೆಯಿತು.

ಮಾರ್ಕಾಂಡೇಯ ಪುರಾಣದ ‘ಸಪ್ತಶತೀ’ ಶಕ್ತಿ ಆರಾಧನೆಗೆ ಪೂರ್ಣಪ್ರಮಾಣದ ವೈದಿಕ ಸಾಕ್ಷಿಯಾಗಿದೆ. ಸಪ್ತಶತಿಯಲ್ಲಿ ಇರುವ ಪ್ರಥಮ ಚರಿತೆ, ಮಧ್ಯಮ ಚರಿತೆ, ಉತ್ತಮ ಚರಿತೆಗಳೆಂಬ ಮೂರು ವಿಭಾಗಗಳು‌ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿಯರ ಸ್ವರೂಪ ಚಿಂತನೆಯೇ ಆಗಿದೆ. ಮಾತೃ ಆರಾಧನೆಯೇ ವಿಕಾಸಗೊಂಡು, ಪ್ರಕೃತಿಯೇ ಮೂಲವಾಗಿ ಮುಂದೆ ‘ಶಕ್ತಿ’ ಆರಾಧನೆಗೆ ವೈದಿಕದ ಮಾನ್ಯತೆ ಪಡೆದು‌ ಉಪಾಸನಾ ದೇವತೆಯಾಗಿ ಪುರಾಣಗಳಲ್ಲಿ‌ ಪ್ರಚಾರ ಪಡೆಯಿತು.

ಕಲಿಯುಗದಲ್ಲಿ “ಕ್ಷಿಪ್ರ ಪ್ರಸಾದ”ದಂತಹ ಶೀಘ್ರ ಅನುಗ್ರಹ ಪ್ರಾಪ್ತಿಯಿಂದ ಅಮ್ಮನ ಪೂಜೆ ಜನಜನಿತವಾಯಿತು. ಇದು ‘ಅಮ್ಮ’ನಿಗೆ ತೊಡಿಸಿದ ‘ವೈದಿಕ’ ಎಂಬ ‘ದಿವ್ಯಾಭರಣ’ಗಳೆಂದರೆ ತಪ್ಪಾಗದು.

ಕಾಲಾಂತರದಲ್ಲಿ ವೈದಿಕಕ್ಕೆ ಸವಾಲುಗಳು ಎದುರಾದಾಗ ‘ವೈದಿಕ ಆಧರಿತ’ “ದೇವಾಲಯ ಸಂಸ್ಕೃತಿ” ಕಾಲದ ಅನಿವಾರ್ಯವಾಗಿ ಹುಟ್ಟಿಕೊಂಡಿತು. ದುರ್ಗಾಲಯಗಳು ನಿರ್ಮಾಣವಾದುವು. ಈ ಸಂದರ್ಭವಂತೂ ವಾಸ್ತುವಿನ ವಾಸ್ತವ ಅಲಂಕರಣವಾಯಿತು ಅಮ್ಮನಿಗೆ. ಆಲಯಗಳು ನಿರ್ಮಾಣವಾದುವು. ದ.ಕ., ಉಡುಪಿ ಜಿಲ್ಲೆಗಳಲ್ಲಿ ಕ್ರಿ.ಶ. 7-8ನೇ ಶತಮಾನದಷ್ಟು ಪೂರ್ವದಲ್ಲಿ ನಿರ್ಮಾಣವಾದ ದುರ್ಗಾಲಯಗಳಿವೆ. ಇತಿಹಾಸ ಪೂರ್ವಕಾಲದ ಶಕ್ತಿ ಆರಾಧನೆಗೆ ಸಮೀಕರಿಸಬಹುದಾದ ಉಪಾಸನಾ ನೆಲೆಗಳು ಉಭಯ ಜಿಲ್ಲೆಗಳಲ್ಲಿವೆ.
—————
* ಭಾರತೀಯ ಜನಪದರು ಆರಾಧಿಸುವ ಗ್ರಾಮದೇವತೆಗಳಲ್ಲಿ ಹೆಚ್ಚಿನ ದೇವತೆಗಳು ಮಾತೃದೇವತೆಗಳು ಅಥವಾ ಶಿವಶಕ್ತಿಯ ಅವತಾರಗಳು.
* ಉಳ್ಳಾಳ್ತಿ, ಮಾರಿಯಮ್ಮ, ರಕ್ತೇಶ್ವರೀ, ಕಲ್ಲುರ್ಟಿ, ತನ್ನಿಮಾನಿಗ, ಮಾಯಂದಾಲ್, ಕೊರತಿ ಮುಂತಾದ ದೈವೀ ಶಕ್ತಿಗಳು ಮಾತೃದೇವತೆಯ ಅವತಾರದಲ್ಲಿ ಪೂಜೆಗೊಳ್ಳುತ್ತವೆ .
* ದೈವಾರಾಧನೆಯ ಮೂಲದಲ್ಲೂ ಮಾತೃ ಆರಾಧನೆಯ ಕಲ್ಪನೆ ಇರುವುದನ್ನು‌ ಇಲ್ಲಿ ಸ್ಮರಿಸಬಹುದು. ಶಿಷ್ಟದ ವೈಭವದಲ್ಲೂ ಜನಪದರ ಅನುಸಂಧಾನವು ನಿಖರವಾಗಿ
ಕಾಣುತ್ತವೆ. ಆದರೆ ನೋಡುವ ಹೃದಯವಂತಿಕೆ ಬೇಕು.
(ಸಂಗ್ರಹಿಸಿದ್ದು)

– ಕೆ.ಎಲ್. ಕುಂಡಂತಾಯ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಗಣಪನಿಗೆ ಪ್ರಿಯವಾದ ಗರಿಕೆ

Harshitha Harish

ಬಿಎಸ್‌ವೈ ಸೇರಿದಂತೆ ಗಣ್ಯರಿಂದ ಗೌರಿ ಗಣೇಶ ಹಬ್ಬದ ಶುಭಾಶಯ

Harshitha Harish

ಬಂದೇ ಬಿಡ್ತು ದಶದಿನಗಳ ಸಂಭ್ರಮ: ಕೇರಳಿಗರ ನಾಡ ಹಬ್ಬ ಓಣಂ

Upayuktha

Leave a Comment