ಸ್ಥಳೀಯ

ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ ಸಂಪನ್ನ

ನವರಾತ್ರಿ ಉತ್ಸವದ ಯಶಸ್ವಿಗೆ ಸಹಕರಿಸಿದ ಭಜನಾ ಮಂದಿರದ ಮಾಜಿ ಅಧ್ಯಕ್ಷ ಮೋಹನ್ ಎನ್. ಪಡ್ಡಾಯೂರು ಮತ್ತು ಭಜನಾ ಮಂದಿರದ ಸದಸ್ಯ ಕುಶಾಲಪ್ಪ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.

ಪುತ್ತೂರು:

ಇಲ್ಲಿನ ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದಲ್ಲಿ ನಡೆದ 15ನೇ ವರ್ಷದ ನವರಾತ್ರಿ ಉತ್ಸವವು ಅ. 7ರಂದು ಸಂಪನ್ನಗೊಂಡಿತು.

ಸೆ.29 ರಿಂದ ಅ. 7 ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರುಗಿತು. ಪ್ರತಿದಿನ ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ವೇ.ಮೂ. ಹರಿಪ್ರಸಾದ್ ಭಟ್ ಬನಾರಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಅ. 7ರಂದು ನಡೆದ ಧಾರ್ಮಿಕ ಸಭೆಯಲ್ಲಿ ವಾಸ್ತು ತಜ್ಞ, ಪುತ್ತೂರು ನಗರ ಸಭೆಯ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಪ್ಲಾಸ್ಟಿಕ್ ಚೀಲಗಳನ್ನು ಬಳಸದೆ ಸ್ವಚ್ಛ ಭಾರತದ ಕನಸನ್ನು ನನಸು ಮಾಡುವ ಪ್ರಯತ್ನಗಳನ್ನು ಮಾಡಿದ್ದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಧಾರ್ಮಿಕ ಉಪನ್ಯಾಸವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಮಂಗಳೂರು ವಿಭಾಗದ ವಿದ್ಯಾರ್ಥಿ ಪ್ರಮುಖ್ ಕೆ. ಮನಿಷಾ ಶೆಟ್ಟಿ ನಡೆಸಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ನವದುರ್ಗೆಯರ ಅವತಾರಗಳನ್ನು ಆರಾಧನೆ ಮಾಡುವುದರಿಂದ ಆಗುವ ಪ್ರಯೋಜನವನ್ನು ತಿಳಿಸಿದರು. ಅಲ್ಲದೆ ಸಂಸ್ಕಾರ, ಸಂಸ್ಕೃತಿ, ಗುರು-ಹಿರಿಯರನ್ನು ಮತ್ತು ಹೆತ್ತವರನ್ನು ಗೌರವಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ ಎಂದರು.

ವೇದಿಕೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಜೆ.ಕೊಟೇಚ, ಪಡ್ನೂರು ಕುಂಜಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಂದ್ರ ಪಡ್ಡಾಯೂರು, ಆಟಿಕ್ಕೊರುದ್ರ-ನೇತ್ರ-ಮಿತ್ರವೃಂದದ ಅಧ್ಯಕ್ಷ ದಿವಾಕರ ಪೂಜಾರಿ ನೆಲಪ್ಪಾಡಿ, ಭಜನಾ ಮಂದಿರದ ಗೌರವಾಧ್ಯಕ್ಷ ನಾರಾಯಣ ಪೂಜಾರಿ ನೆಲಪ್ಪಾಡಿ ಉಪಸ್ಥಿತರಿದ್ದರು.

ಸಮ್ಮಾನ: ನವರಾತ್ರಿ ಉತ್ಸವದ ಯಶಸ್ವಿಗೆ ಸಹಕರಿಸಿದ ಭಜನಾ ಮಂದಿರದ ಮಾಜಿ ಅಧ್ಯಕ್ಷ ಮೋಹನ್ ಎನ್. ಪಡ್ಡಾಯೂರು ಮತ್ತು ಭಜನಾ ಮಂದಿರದ ಸದಸ್ಯ ಕುಶಾಲಪ್ಪ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.

ವೈಭವಿ ಮಲ್ತೋಟ್ಟೆ ಮತ್ತು ಅನುಶ್ರೀ ಪಡ್ಡಾಯೂರು ಪ್ರಾರ್ಥಿಸಿದರು. ಭಜನಾ ಮಂದಿರದ ಕಾರ್ಯದರ್ಶಿ ಬಾಲಕೃಷ್ಣ ಪಡ್ಡಾಯೂರು ಸ್ವಾಗತಿಸಿದರು, ಭಜನಾ ಮಂದಿರದ ಅಧ್ಯಕ ಹರೀಶ್ ನಾಯ್ಕ ಮೊಲ್ತೋಟ್ಟೆರವರು ಪ್ರ್ರಾಸ್ತಾವಿಕವಾಗಿ ಮಾತನಾಡಿದರು. ಭಜನಾ ಮಂದಿರದ ಮಾಜಿ ಅಧ್ಯಕ್ಷರಾದ ಶಿವರಾಮ ನೆಲಪ್ಪಾಲು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Related posts

ವಿವೇಕಾನಂದ ಜಯಂತಿಯ ಪ್ರಯುಕ್ತ 12 ಸಾವಿರ ಮಂದಿಗೆ ಭೋಜನ

Upayuktha

ಸಂತ ಫಿಲೋಮಿನಾ ಕಾಲೇಜಿನಲ್ಲಿ ಎನ್‍ಸಿಸಿ ಸಾಧಕರಿಗೆ ಸನ್ಮಾನ

Upayuktha

ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Upayuktha