ಕತೆ-ಕವನಗಳು

ದೇವಿ ಸ್ತುತಿ: ಅಕ್ಷಯವಾಗಲಮ್ಮ ನಿನ್ನ ವರದಾನ


ಅಕ್ಷಯವಾಗಲಮ್ಮ…
ನಿನ್ನ ವರದಾನ…
ಸಿರಿತನದ ಸಿರಿದೇವಿ..
ನಾರಾಯಣನ ಶ್ರೀದೇವಿ..
ಅಕ್ಷಯವಾಗಲಮ್ಮ..
ನಿನ್ನ ವರದಾನ… ||

ಶರಧಿರಾಜನ ತನಯೇ..
ಕಮಲನಾಭನ ಪ್ರಿಯೇ..
ನೀರಜಾ ನೇತ್ರಳೇ…
ಬಾರಮ್ಮ ತಾಯೇ… ||

ಹೊಸ್ತಿಲಿನ ರಂಗೋಲಿ
ಕೋರುತಿದೆ ಸ್ವಾಗತ..
ಮುಂಬಾಗಿಲ ತೋರಣವು
ಹಾಡುತಿದೆ ಗಾಯನ… ||

ಪತಿಯ ಪಾದಸೇವೆಯನು
ಮಾಡಿದ ಮಹಾಮಾಯೇ
ವೈಕುಂಠದ ಮಹಾದೇವಿ
ಕರವೀರ ಪುರ ನಿವಾಸಿನಿ.. ||

ಬಾರಮ್ಮ ತಾಯೇ
ನಿನ್ನ ಭಕುತರ ಮನೆಗೆ.. ||

ಮುತ್ತಿನ ಮಂಟಪದಲಿ
ಮುದ್ದಾಗಿ ಕುಳ್ಳಿರಿಸಿ..
ಧೂಪ ದೀಪಗಳಿಂದ
ಆರತಿಯನು ಬೆಳಗಿಸಿ..

ಗಂಧ ಪುಷ್ಪ ಸುಗಂಧಪತ್ರೆ
ಅಕ್ಷತೆಯಿಂದ ಅರ್ಚಿಸಿ..
ಸ್ತೋತ್ರ ಮಂತ್ರ ಹಾಡು
ಭಜನೆಗಳಿಂದ ಧ್ಯಾನಿಸಿ..

ಅರಿಶಿನ ಕುಂಕುಮ ಸೀರೆ
ಮಡಿಲಕ್ಕಿ ಬಳೆ ನೀಡಿ
ನಿನ್ನ ಪೂಜಿಸಿ ಭಜಿಸಲು… ||

ಕಾಂತಿಯ ಚಿಮ್ಮುತ ಬಾರಮ್ಮ
ಶುಭಕರಿ ಸಿರಿನಿಧಿಯ ತಾರಮ್ಮ.. ||

ಅಕ್ಷಯವಾಗಲಮ್ಮ…
ನಿನ್ನ ವರದಾನ…

ಅನುದಿನವು ನಿನ್ನನು
ಭಜಿಸುವ ಭಕ್ತರ
ಕರುಣೆಯಿಂದಲಿ ಕಾಯಮ್ಮ..

ನಿನ್ನ ಮಡಿಲಿನ ಮಕ್ಕಳ
ಒಡಲಿನ ಹಸಿವನ್ನು
ಮರೆಯದೆ ನೀಗಿಸಮ್ಮ..

ಭವಸಾಗರವ ದಾಟಿಸಲು
ಸಕಲ ಸೌಭಾಗ್ಯ ನೀಡಿ
ಕೈ ಹಿಡಿದು ನಡೆಸಮ್ಮ.. ||

ನಿನ್ನ ನಂಬಿದ ಭಕುತರಿಗೆ
ಅಷ್ಟಲಕ್ಷ್ಮೀ ರೂಪದಲ್ಲಿ
ನಿನ್ನ ಒಲವಿನ ದರುಶನದ
ಸೌಭಾಗ್ಯ ಸಿಗಲಮ್ಮ… ||

ಕರ್ಮ ಫಲಗಳಲ್ಲಿನ
ಕಷ್ಟಗಳ ನೀಗಿಸಲು
ನಿನ್ನ ಕರುಣೆಯ ಕೈಗಳು
ಸದಾ ಜೊತೆ ಇರಲಮ್ಮ.. ||

ಅಕ್ಷಯವಾಗಲಮ್ಮ…
ನಿನ್ನ ವರದಾನ…

✒️ಗೀತಾ ರಾಘವೇಂದ್ರ, ಬೆಂಗಳೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ಅರಿವಿನ ಪಯಣ

Harshitha Harish

ಅಕ್ಷರದೊಳಗಾಧ್ಯಾತ್ಮ

Upayuktha

ನಾಡ ಗೀತೆ: ಭಾರತ ಜನನಿ

Harshitha Harish

Leave a Comment