ಕಲೆ ಸಂಸ್ಕೃತಿ ನಗರ ಸ್ಥಳೀಯ

ಅ.17-26: ‘ನಮ್ಮಕುಡ್ಲ’ದಲ್ಲಿ ದಶ ದಿನಗಳ ‘ದೇವೀ ಮಹಾತ್ಮೆ’ ಯಕ್ಷ ಕಾವ್ಯ ಕಥನ

ಮಂಗಳೂರು: ಕೋವಿಡ್ ಸಂಕಷ್ಟದ ಆತಂಕಗಳ ನಡುವೆ ನವರಾತ್ರಿ ಹಬ್ಬದ ಸಂಭ್ರಮ ಮಸುಕಾಗಬಾರದು ಎಂಬ ಕಾರಣಕ್ಕೆ ಮಂಗಳೂರಿನ ‘ನಮ್ಮ ಕುಡ್ಲ’ ಸುದ್ದಿವಾಹಿನಿ ಸಂಸ್ಥೆ ನಿರಂತರ ಹತ್ತುದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಅಕ್ಟೋಬರ್ 17ರಿಂದ 26ರವರೆಗೆ ಬೆಳಿಗ್ಗೆ ಗಂಟೆ 9 ರಿಂದ ರಾತ್ರಿ 10 ರವರೆಗೆ ‘ನವರಾತ್ರಿ ವೈಭವ’ ಎಂಬ ವೈವಿಧ್ಯಮಯ ಕಾರ್ಯಕ್ರಮವನ್ನು ನೂರಕ್ಕೂ ಮಿಕ್ಕಿದ ಕಲಾವಿದರ ಪಾಲ್ಗೊಳ್ಳುವಿಕೆಯಲ್ಲಿ ಚಿತ್ರೀಕರಿಸಿ ಪ್ರದರ್ಶಿಸಲಾಗುವುದು ಎಂದು ನಮ್ಮ ಕುಡ್ಲ ನಿರ್ದೇಶಕರಾದ ಕರ್ಕೇರ ಸಹೋದರರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ದೇವಿಯ ಮಹಿಮೆಯನ್ನು ಸಾರುವ ‘ಶ್ರೀದೇವೀ ಮಹಾತ್ಮೆ: ಯಕ್ಷ ಕಾವ್ಯ- ಕಥನ’ಎಂಬ ವಿಶಿಷ್ಟ ಕಾರ್ಯಕ್ರಮ ಅಕ್ಟೋಬರ್ 17 ಶನಿವಾರದಿಂದ ಪ್ರತಿದಿನ ಅಪರಾಹ್ನ ಗಂಟೆ 1.30 ರಿಂದ 2.00 ರವರೆಗೆ ಪ್ರಸಾರ ವಾಗುವುದು. ಯಕ್ಷಗಾನ ಅರ್ಥದಾರಿ ಮತ್ತು ಪ್ರವಚನಕಾರ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಕಥನಕಾರ ರಾಗಿರುವ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಭಾಗವತರಾದ ಹರೀಶ್ ಶೆಟ್ಟಿ ಸೂಡ, ಭವ್ಯಶ್ರೀ ಕುಲ್ಕುಂದ ಮತ್ತು ಕಾವ್ಯಶ್ರೀ ಅಜೇರು ಯಕ್ಷಗಾನ ಧಾಟಿಯಲ್ಲಿ ಕಾವ್ಯವಾಚನ ಮಾಡುವರು.

ಆನಂದ ಗುಡಿಗಾರ ಕೆರ್ವಾಶೆ, ಶ್ರೀಪತಿ ನಾಯಕ್ ಅಜೇರು ಮತ್ತು ರೋಹಿತ್ ಉಚ್ಚಿಲ್ ಮದ್ದಳೆಯಲ್ಲಿ ಸಹಕರಿಸುವರು. ದೇವಿ ಸಪ್ತಶತಿಯ ಮಹಾಕಾಳಿ ಕಾಂಡ, ಮಹಾಲಕ್ಷ್ಮಿ ಕಾಂಡ ಮತ್ತು ಮಹಾಸರಸ್ವತಿ ಕಾಂಡ ಎಂಬ ಮೂರು ಭಾಗಗಳಲ್ಲಿ ಈ ಕಾವ್ಯ ವಾಚನ ಮತ್ತು ವ್ಯಾಖ್ಯಾನ ಮೂಡಿಬರಲಿದೆ.

ಇದರೊಂದಿಗೆ ಪ್ರತಿದಿನವೂ ಸಂಗೀತ, ನೃತ್ಯ, ಯಕ್ಷಗಾನ, ಕ್ಷೇತ್ರ ದರ್ಶನ, ಸಂದರ್ಶನ, ಹಾಸ್ಯ ಪ್ರಹಸನ ಮತ್ತು ಸಭಾ ಕಲಾಪಗಳನ್ನು ನಿಗದಿತ ಸಮಯದಲ್ಲಿ ಪ್ರಸಾರ ಮಾಡಲಾಗುವುದೆಂದು ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ನಮ್ಮೊಳಗಿನ ಗಾಂಧೀಜಿಯನ್ನು ಬಡಿದೆಬ್ಬಿಸಿ: ಡಾ. ಮುರಲೀಮೋಹನ್ ಚೂಂತಾರು

Upayuktha

ಜ.11 ರಂದು ಮಂಗಳೂರಿನಲ್ಲಿ ಡಾ. ಪೆರ್ಲರ ಸಾಹಿತ್ಯಾವಲೋಕನ ಕಾರ್ಯಕ್ರಮ

Upayuktha

ಜ.23-24: ಫಾದರ್‌ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಲ್ಲಿ ಪ್ರೇರಣ 2020

Upayuktha

Leave a Comment