ಸ್ವ ಸಾಮರ್ಥ್ಯದಿಂದ ಸಮಾಜದಲ್ಲಿ ಸದೃಢವಾಗಬೇಕು: ಕಸ್ತೂರಿ ಪಂಜ
ಬೆಳ್ತಂಗಡಿ: ಕುಲಾಲ ಸಮುದಾಯ ಅಧರ್ಮವನ್ನು ಬಯಸದೆ ನ್ಯಾಯ ನೀತಿಯಲ್ಲಿರುವ ಹಿಂದೂ ಧರ್ಮದ ಒಂದು ಜಾತಿ. ಇನ್ನೊಬ್ಬರನ್ನು ಮೆಟ್ಟದೆ ಸ್ವ ಸಾಮರ್ಥ್ಯದಿಂದ ಮೇಲೇರಿದರೆ ಸಮಾಜದಲ್ಲಿ ಶಾಶ್ವತವಾಗಿ ಸದೃಢವಾಗಿರಬಹುದು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಅವರು ಭಾನುವಾರ ನಾವೂರು ಕುಲಾಲ ಸಭಾ ಭವನದಲ್ಲಿ ನಾವೂರು ಮೂಲ್ಯರ ಯಾನೆ ಕುಲಾಲರ ಸಂಘ, ಕುಲಾಲರ ಯುವ ವೇದಿಕೆ, ಕುಂಭಶ್ರೀ ಮಹಿಳಾ ಮಂಡಲದ 2020-22ನೇ ಸಾಲಿನ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
‘ಹಳೆ ಬೇರು – ಹೊಸ ಚಿಗುರು ಸೇರಿರಲು ಮರ ಸೊಬಗು ಎಂಬ ಮಾತಿನಂತೆ ನಾವು ಕುಟುಂಬದ ಜೊತೆ ಸಂಸ್ಕೃತಿಯನ್ನು ಬೆಳೆಸಿಕೊಂಡು ಹೋಗಬೇಕು. ಸಂಘಟನೆಯಿಂದ ಸಮಾಜವನ್ನು ಬೆಳೆಸುವ ಕೆಲಸವಾಗಬೇಕು’ ಎಂದರು.
ಕುಲಾಲ ಕುಂಬಾರ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಧಾಕರ ಕುಲಾಲ್ ಪದಗ್ರಹಣ ಕಾರ್ಯಕ್ರಮ ನೆರವೇರಿಸಿ, ‘ಯುವ ಸಮುದಾಯ ಸಂಘಟನೆ ಬಲಪಡಿಸುವ ಜೊತೆಗೆ ಸಮುದಾಯದ ಅಸಕ್ತ ಕುಟುಂಬಕ್ಕೆ ನೆರವಾಗಬೇಕು ಎಂದು ಹೇಳಿ ಯುವ ವೇದಿಕೆಯ ನಡೆ ಹಾಗೂ ವಿಸ್ತರಣೆಯ ಕುರಿತು ಮಾತನಾಡಿದರು.
ಅತಿಥಿ ಮಂಗಳೂರು ಉತ್ತರ ಕ್ಷೇತ್ರದ ಕುಲಾಲರ ಯುವ ವೇದಿಕೆ ಅಧ್ಯಕ್ಷ ಗಣೇಶ್ ಕುಲಾಯಿ ಮಾತನಾಡಿ, ‘ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಬಲಪಡಿಸುತ್ತಾ ಹೋಗುವಾಗ ಟೀಕೆಗಳು ಸಾಮಾನ್ಯ. ಅದರ ಬಗ್ಗೆ ಕುಗ್ಗದೆ ಸಮುದಾಯದ ಪೋಷಣೆಯಲ್ಲಿ ತೊಡಗಿದಾಗ ರಚನಾತ್ಮಕವಾದ ಸಮಾಜ ನಿರ್ಮಾಣವಗಲು ಸಾಧ್ಯ’ ಎಂದರು
ತಾಲೂಕು ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಸಮಾರಂಭದ ಅಧ್ಯಕ್ಷತೆ ವಹಿಸಿ, ಹಿರಿಯರ ಮಾರ್ಗದರ್ಶನದಲ್ಲಿ ಯುವ ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಕುಲಾಲ ಸಮಾಜ ಎಲ್ಲಾ ಕ್ಷೇತ್ರದಲ್ಲೂ ಸದೃಢವಾಗಿ ಬೆಳೆಯಲಿದೆ. ಬಲಿಷ್ಠ ಸಂಘ ರಚಿಸುವ ಸಲುವಾಗಿ ಯುವ ವೇದಿಕೆ ನಿರ್ಮಾಣವಾಗಿದೆ. ಎಂದರು.
ತಾಲೂಕು ಕುಲಾಲರ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕುಲಾಲ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ವೇದಾವತಿ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ವಗ್ಗದ ಉದ್ಯಮಿ ಕೂಸಪ್ಪ ಮೂಲ್ಯ, ನಾವೂರು ಪಂಚಾಯಿತಿ ಮಾಜಿ ಅಧ್ಯಕ್ಷೆ ಲಲಿತಾ, ನಾವೂರು ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ನಾರಾಯಣ ಮೂಲ್ಯ, ಕುಂಭಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಜಯಂತಿ ಕುಶಾಲಪ್ಪ ಗೌಡ ಕಣಾಲು ಇದ್ದರು.
ಕುಲಾಲ ಸಮುದಾಯದ ಹಿರಿಯ ಗುರಿಕಾರರಾದ ಸುಂದರ ಮೂಲ್ಯ ಬೀಮಂಡೆ, ಡಾಕಯ್ಯ ಮೂಲ್ಯ ರನ್ನು ಸನ್ಮಾನಿಸಲಾಯಿತು. ಹಾಗೆ ಸಂಘ ಕಟ್ಟಿ ಬೆಳೆಸುತ್ತಿರುವ ತಾಲೂಕು ಸಂಘದ ಅಧ್ಯಕ್ಷರಾದ ಹರೀಶ್ ಕಾರಿಂಜ ಮತ್ತು ತಾಲೂಕು ಸಂಘದ ನಿರ್ದೇಶಕರಾದ ಪುಷ್ಪರಾಜ ಲಾಯಿಲ ರನ್ನು ಸನ್ಮಾನಿಸಲಾಯಿತು.
ರಾಜ್ ಕುಮಾರ್ ಲಾಯಿಲ ಸ್ವಾಗತಿಸಿದರು. ಪುಷ್ಪರಾಜ್ ಲಾಯಿಲ ನಿರೂಪಿಸಿದರು. ವಿಜಯ್ ಕುಲಾಲ್ ವಂದಿಸಿದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ