ಗ್ರಾಮಾಂತರ ಸಮುದಾಯ ಸುದ್ದಿ ಸ್ಥಳೀಯ

ಅ. 11ರಂದು ನಾವೂರು ಕುಲಾಲ ಯುವ ವೇದಿಕೆ ಉದ್ಘಾಟನೆ

ಮಂಗಳೂರು: ಬೆಳ್ತಂಗಡಿ ಸಮೀಪದ ನಾವೂರಿನ ಮೂಲ್ಯರ ಯಾನೆ ಕುಲಾಲರ ಸಂಘ, ಕುಂಭಶ್ರೀ ಮಹಿಳಾ ಮಂಡಲ, ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಾವೂರು ಕುಲಾಲ ಯುವ ವೇದಿಕೆಯ ಉದ್ಘಾಟನೆ ಮತ್ತು ಪದಗ್ರಹಣ ಕಾಯ್ರಕ್ರಮ ಅಕ್ಟೋಬರ್ 11ರಂದು ನಡೆಯಲಿದೆ.

ನಾವೂರಿನ ಕುಲಾಲ ಭವನದಲ್ಲಿ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ. ಜಿ.ಪಂ. ಉಪಾಧ್ಯಕ್ಷರಾದ ಕಸ್ತೂರಿ ಪಂಜ ನೆರವೇರಿಸಲಿದ್ದು, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷರಾದ ಹರೀಶ್ ಕಾರಿಂಜ ಅವರು ಅಧ್ಯಕ್ಷತೆ ವಹಿಸಲಿರುವರು.

ಅಲ್ಲದೆ, ಈ ಸಂದರ್ಭ ದ.ಕ.ಕುಲಾಲ ಕುಂಬಾರರ ಯುವ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಧಾಕರ ಕುಲಾಲ್ ಪದಗ್ರಹಣ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಕುಲಾಲ ಕುಂಬಾರರ ಯುವ ವೇದಿಕೆಯ ಅಧ್ಯಕ್ಷರಾದ ಲೋಕೇಶ್ ಕುಲಾಲ್, ಉದ್ಯಮಿ ಕೂಸಪ್ಪ ಮೂಲ್ಯ, ಬೆಳ್ತಂಗಡಿ ತಾ.ಪಂ.ಉಪಾಧ್ಯಕ್ಷರಾದ ವೇದಾವತಿ, ನಾವೂರು ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಲಲಿತಾ, ಗುರಿಕಾರರಾದ ಸುಂದರ ಮೂಲ್ಯ, ಡಾಕಯ್ಯ ಮೂಲ್ಯ ನಾವೂರಿನ ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ಅಧ್ಯಕ್ಷರಾದ ನಾರಾಯಣ ಮೂಲ್ಯ, ನಾವೂರು ಕುಂಭಶ್ರೀ ಮಹಿಳಾ ಮಂಡಲದ ಜಯಂತಿ ಕುಲಾಲ್ ಅವರು ಭಾಗವಹಿಸಲಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮನೆ ಮನೆಗೆ ತೆರಳಿ ಮೀನು ಮಾರುತ್ತಿದ್ದವನಿಗೆ ಕೊರೊನಾ ಸೋಂಕು ದೃಢ

Upayuktha

ದ.ಕ. ಜಿಲ್ಲೆಯಲ್ಲಿಂದು ಒಂದು ಕೊರೊನಾ ಪಾಸಿಟಿವ್; ಉಡುಪಿ, ಕಾಸರಗೋಡಿನಲ್ಲಿಇಲ್ಲ

Upayuktha

ಕುತ್ಲೂರಿನಲ್ಲಿ ಹುಲಿ ಪ್ರತ್ಯಕ್ಷ, ಗ್ರಾಮದಲ್ಲಿ ಆತಂಕ

Upayuktha

Leave a Comment