ವಾಣಿಜ್ಯ

ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ನಯಾರಾ ಪೆಟ್ರೋಲ್‌ ಪಂಪ್‌ ಶುಭಾರಂಭ

ಕಲ್ಲಡ್ಕ: ಭಾರತದ ಎರಡನೇ ಅತಿ ದೊಡ್ಡ ಅತ್ಯಾಧುನಿಕ ತೈಲ ರಿಫೈನರಿ ಎಂದು ಹೆಸರಾದ ನಯಾರಾ ಎನರ್ಜಿ ಕಂಪನಿಯ ನೂತನ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಕೇಂದ್ರವು ಕಲ್ಲಡ್ಕದಲ್ಲಿ ಇಂದಿನಿಂದ ಕಾರ್ಯಾರಂಭಿಸಿದೆ.

ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ 78ರಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ನಯಾರಾ ಎನರ್ಜಿ-ಪ್ರೀತಿ ಎನರ್ಜಿ ಸಮೂಹದ ಪೆಟ್ರೋಲ್‌ ಪಂಪ್‌ ಇಂದು ಬೆಳಗ್ಗೆ (ನ.19) ಉದ್ಘಾಟನೆಗೊಂಡಿತು.

ಗುಜರಾತ್‌ನ ವಾಡಿನರ್ ರಿಫೈನರಿ 2008ರ ಮೇ 1ರಂದು ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ಕಾರ್ಯಾರಂಭಿಸಿತು. ಪ್ರಸ್ತುತ ಈ ಕಂಪನಿ ದೇಶದ ಒಟ್ಟಾರೆ ತೈಲ ಸಂಸ್ಕರಣೆ ಸಾಮರ್ಥ್ಯದಲ್ಲಿ ಶೇ 8ರಷ್ಟು ಪಾಲು ಹೊಂದಿದೆ. ವಾರ್ಷಿಕ 20 ಮಿಲಿಯ ಮೆಟ್ರಿಕ್‌ ಟನ್‌ ಗಳಷ್ಟು ಕಚ್ಚಾತೈಲವನ್ನು ಇದು ಸಂಸ್ಕರಣೆ ನಡೆಸುತ್ತಿದೆ.

ದೇಶಾದ್ಯಂತ 5,700ಕ್ಕೂ ಅಧಿಕ ಚಿಲ್ಲರೆ ಮಾರಾಟ ಕೇಂದ್ರಗಳನ್ನು ನಯಾರಾ ಎನರ್ಜಿ ಹೊಂದಿದೆ. ಕಲ್ಕಡ್ಕದಲ್ಲಿ ಇಂದು ಉದ್ಘಾಟನೆಗೊಂಡ ಹೊಸ ಮಾರಾಟ ಕೇಂದ್ರ ಇವುಗಳ ಸಾಲಿಗೆ ಸೇರ್ಪಡೆಗೊಂಡಿದೆ.

ಪ್ರೀತಿ ಫಾರ್ಮ್ಸ್‌ ಬೊಳಂತೂರಿನ ಮಾಲೀಕರಾದ ಶ್ರೀಮತಿ ಮತ್ತು ಶ್ರೀ ಚಂದ್ರಹಾಸ್ ಶೆಟ್ಟಿ ಬಿ, ಶ್ರವಣ್ ಕುಮಾರ್ ಶೆಟ್ಟಿ ಬಿ, ಮತ್ತು ಅಭಿಲಾಶ್‌ ಶೆಟ್ಟಿ ಬಿ ಅವರ ಪಾಲುದಾರಿಕೆಯಲ್ಲಿ ಕಲ್ಲಡ್ಕದ ಈ ನೂತನ ಮಾರಾಟ ಕೇಂದ್ರ ಆರಂಭಗೊಂಡಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (14-08-2020)

Upayuktha

26, 27ರ ಉದ್ದೇಶಿತ ಬ್ಯಾಂಕ್‌ ಮುಷ್ಕರ ರದ್ದು, ಎಂದಿನಂತೆ ವಹಿವಾಟು

Upayuktha

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (27-05-2020)

Upayuktha