ನಗರ ಸ್ಥಳೀಯ

ವಿಪತ್ತು ನಿರ್ವಹಣೆಗೆ ಬದ್ಧತೆ ಬೇಕು: ಸಂಜೀವ ಕುಮಾರ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಛೇರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ 10ನೇ ಬೆಟಾಲಿಯನ್, ವಿಜಯವಾಡ ಗುಂಟೂರು ಇದರ ಕಮಾಂಡರ್ ಸಂಜೀವ ಕುಮಾರ್ ಇವರು ಇಂದು ಭೇಟಿ ನೀಡಿ ವಿಪತ್ತು ನಿರ್ವಹಣೆ ಬಗ್ಗೆ ಮಾರ್ಗದರ್ಶನ ನೀಡಿದರು.

ವಿಪತ್ತು ನಿರ್ವಹಣಾ ಪರಿಕರಗಳನ್ನು ವೀಕ್ಷಿಸಿದರು. ವಿಪತ್ತು ನಿರ್ವಹಣೆಯಲ್ಲಿ ಪೌರರಕ್ಷಣೆ ಮತ್ತು ಗೃಹರಕ್ಷಕ ದಳದ ಮಾರ್ಗದರ್ಶನ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಕ್ಕೆ ಅತೀ ಅಗತ್ಯ. ಸ್ಥಳೀಯ ಭೌಗೋಳಿಕ ಹಿನ್ನೆಲೆ ಬಗ್ಗೆ ಜ್ಞಾನ ಹೊಂದಿರುವ ಗೃಹರಕ್ಷಕರು ವಿಪತ್ತು ನಿರ್ವಹಣಾ ತಂಡಕ್ಕೆ ಮಾರ್ಗದರ್ಶನ ನೀಡುತ್ತಾರೆ ಮತ್ತು ವಿಪತ್ತು ನಿರ್ವಹಣೆಗೆ ಸಾಕಷ್ಟು ಪೂರ್ವಸಿದ್ಧತೆ ಮತ್ತು ಮಾನಸಿಕ ಬದ್ಧತೆ ಅಗತ್ಯ ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಗೃಹರಕ್ಷಕ ದಳ ಸಮಾದೇಷ್ಟ ಡಾ|| ಮುರಲೀ ಮೋಹನ ಚೂಂತಾರು, ಎನ್‍ಡಿಆರ್‍ಎಫ್ ತಂಡದ ಗೋಪಾಲ್‍ಲಾಲ್ ಮೀನಾ, ಕಛೇರಿ ಅಧೀಕ್ಷಕರಾದ ರತ್ನಾಕರ್, ಅನಿತಾ, ದಿವಾಕರ್, ಸುನಿಲ್, ದಿಲೀಪ್ ಮುಂತಾದವರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ನಾಳೆಯಿಂದ 3 ದಿನ ಮಲ್ಪೆ ಬೀಚ್ ಉತ್ಸವ

Upayuktha

ಆಹಾರ ಸಾಮಗ್ರಿಗಳ ನಿರಂತರ ಪೂರೈಕೆ: ದಕ ಜಿಲ್ಲಾಧಿಕಾರಿ ಸೂಚನೆ

Upayuktha

ಮಂಗಳಗ್ರಹದಿಂದ ಕಂಡ ಭೂಮಿ ಹೇಗಿದೆ ಗೊತ್ತೇ? ವೈರಲ್ ಆಯ್ತು ಈ ಚಿತ್ರ

Upayuktha

Leave a Comment

error: Copying Content is Prohibited !!