ನಗರ ಸ್ಥಳೀಯ

ಮಳೆಗಾಲದ ಜೀವಹಾನಿ ತಪ್ಪಿಸಲು ಸಕಲ ಭದ್ರತೆ: ಎನ್‌ಡಿಆರ್‌ಎಫ್‌

ಮಂಗಳೂರು: ಸಸಿಹಿತ್ಲು ಬೀಚ್ ಪರಿಸರದಲ್ಲಿ ಮಳೆಗಾಲದ ಸಂದರ್ಭ ಜೀವಹಾನಿ ಸಂಭವಿಸುವ ಸಾಧ್ಯತೆಗಳು ಹೆಚ್ಚಿದ್ದು ಇಲ್ಲಿ ಎನ್‌ಡಿಆರ್‌ಎಫ್‌ ತಂಡದಿಂದ ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ; ಯಾವುದೇ ಸಂದರ್ಭ ಸಮಸ್ಯೆ ತಲೆದೋರಿದರೂ ಎದುರಿಸಲು ನಮ್ಮ ತಂಡ ಸಿದ್ಧವಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ವಿಜಯವಾಡ ಘಟಕದ ಮುಖ್ಯ ಸಮಾದೇಷ್ಟ ಗೋಪಾಲ್ ಲಾಲ್ ಮೀನಾ ಅವರು ಹೇಳಿದರು.

ಶನಿವಾರ ದ.ಕ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಡಾ.ಮುರಲೀ ಮೋಹನ ಚೂಂತಾರು ಅವರೊಂದಿಗೆ ಗೋಪಾಲ್ ಲಾಲ್ ಮೀನಾ ಅವರು ಸಸಿಹಿತ್ಲು ಬೀಚ್‌ಗೆ ಭೇಟಿ ನೀಡಿ ಅಲ್ಲಿನ ಭೌಗೋಳಿಕ ಪರಿಸ್ಥಿತಿಯ ಅವಲೋಕನವನ್ನು ಮಾಡಿ ಮಾತನಾಡಿದರು. ಈ ಬೀಚ್‌ನಲ್ಲಿ ಅಲೆಗಳ ರಭಸ ಹೆಚ್ಚಿದೆ. ಅಪಾಯಗಳ ಸಾಧ್ಯತೆಯೂ ಹೆಚ್ಚು. ವಿಶೇಷ ಅನುಮತಿಯನ್ನು ಪಡೆದು ಜನರ ರಕ್ಷಣೆಯನ್ನು ಮಾಡಲು ಇಲ್ಲಿ ನಾವು ಎನ್.ಡಿ. ಆರ್.ಎಫ್ ತಂಡವನ್ನು ನಿಯೋಜಿಸಿದ್ದೇವೆ ಎಂದರು.

ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ. ಮುರಲೀ ಮೋಹನ ಚೂಂತಾರು ಮಾತನಾಡಿ, ಮಳೆಗಾಲದ ಸಂದರ್ಭ ಕಡಲ್ಕೊರೆತ ಸಂಭವಿಸುವುದು, ಅಲೆಗಳ ಆರ್ಭಟವೂ ಹೆಚ್ಚಿರುವುದರಿಂದ ಜನರ ಜೀವರಕ್ಷಣೆಗೆ ಎನ್.ಡಿ.ಆರ್.ಎಫ್. ತಂಡ ಸಕಲ ಭದ್ರತೆಗಳೊಂದಿಗೆ ಸಜ್ಜಾಗಿದೆ. ಎರಡು ನದಿಗಳು ನೇರವಾಗಿ ಸೇರುವ ಈ ಜಾಗದಲ್ಲಿ ಮರಳು ಸವಕಳಿ ಹೆಚ್ಚಾಗಿದೆ. ಆದ್ದರಿಂದ ಪ್ರಾಣಹಾನಿ ತಪ್ಪಿಸಲು ಎನ್.ಡಿ.ಆರ್.ಎಫ್.ತಂಡದ ಜೊತೆಗೆ ಗೃಹರಕ್ಷಕರನ್ನು ನಿಯೋಜಿಸಲಾಗಿದೆ ಎಂದರು.

ಬಳಿಕ ಸುರತ್ಕಲ್, ಮುಕ್ಕ ಸಹಿತ ವಿವಿಧ ಬೀಚ್ಗಳಿಗೆ ತೆರಳಿ ಅಲ್ಲಿನ ಅವಲೋಕನ ನಡೆಸಿದರು. ಈ ಸಂದರ್ಭ ಸುರತ್ಕಲ್ ಘಟಕಾಧಿಕಾರಿ ರಮೇಶ್, ಗೃಹರಕ್ಷಕಿಯರಾದ ಸರಿತಾ, ಮಂಜುಳಾ ಮತ್ತು ಗೃಹರಕ್ಷಕರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಗೃಹರಕ್ಷಕರಿಗೆ ಮೂಲ ಅಗ್ನಿಶಮನ, ಪ್ರಥಮ ಚಿಕಿತ್ಸೆ ತರಬೇತಿ

Upayuktha

ಲಾಕ್‌ಡೌನ್‌ ಸಂಕಷ್ಟ: ಗೋವಿನ ಮೇವಿಗೆ ನೆರವಾಗಲು ಗೋ ಪ್ರೇಮಿ‌ಗಳಿಗೆ ಮನವಿ

Upayuktha

ಆಳ್ವಾಸ್ ಚಿಣ್ಣರಲ್ಲಿ ವಾರ್ಷಿಕೋತ್ಸವದ ಸಂಭ್ರಮ

Upayuktha