ನಗರ ಸ್ಥಳೀಯ

ವಿಪತ್ತು ನಿರ್ವಹಣೆಗೆ ಸಿದ್ಧತೆ ಅಗತ್ಯ: ಗೋಪಾಲ್‍ಲಾಲ್ ಮೀನಾ

ಮಂಗಳೂರು: ಮೇರಿಹಿಲ್‍ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಕಛೇರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಇದರ ವಿಜಯವಾಡ ಘಟಕದ ಮುಖ್ಯ ಕಮಾಂಡೆಂಟ್ ಗೋಪಾಲ್‍ ಲಾಲ್ ವಿೂನಾ ಇಂದು ಭೇಟಿ ನೀಡಿದರು.

ಅವರು ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಪ್ರಾಕೃತಿಕ ತೊಂದರೆಗಳು ಮತ್ತು ವಿಪತ್ತು ನಿರ್ವಹಣೆ ವಿಚಾರವಾಗಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ಜಿಲ್ಲಾ ಪೌರರಕ್ಷಣಾ ತಂಡದ ಮುಖ್ಯಪಾಲಕರಾದ ಡಾ|| ಮುರಲೀಮೋಹನ ಚೂಂತಾರು ಅವರೊಂದಿಗೆ ವಿಚಾರ ವಿನಿಮಯ ಮಾಡಿದರು.

ನಂತರ ಗೃಹರಕ್ಷಕ ದಳದ ವಿಪತ್ತು ನಿರ್ವಹಣಾ ತಂಡದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ವಿಪತ್ತು ನಿರ್ವಹಣೆ ಯಶಸ್ವಿಯಾಗಲು ಸಾಕಷ್ಟು ಪೂರ್ವ ತಯಾರಿ ಮತ್ತು ಪೂರ್ವ ಸಿದ್ಧತೆ ಅವಶ್ಯವಿದೆ ಎಂದರು.

ಭೌಗೋಳಿಕ ಹಿನ್ನೆಲೆ ತಿಳಿದಿರುವ ತರಬೇತಿ ಹೊಂದಿದ ಗೃಹರಕ್ಷಕರು ಮತ್ತು ಪೌರರಕ್ಷಣಾ ಕಾರ್ಯಕರ್ತರು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಕ್ಕೆ ಬಹಳ ಉಪಯುಕ್ತ ಎಂದು ಅಭಿಪ್ರಾಯಪಟ್ಟರು. ಗೋಪಾಲ್‍ಲಾಲ್ ವಿೂನಾ ಅವರನ್ನು ಗೌರವಿಸಲಾಯಿತು. ಕಛೇರಿ ಅಧೀಕ್ಷಕರಾದ ರತ್ನಾಕರ್, ಅನಿತಾ, ಸುಲೋಚನಾ ದಿವಾಕರ್, ಮಹೇಶ್, ಸುನಿಲ್, ಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.

 

ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಕೇಂದ್ರದ ಪೋಷಣ್ ಯೋಜನೆ ರಾಜ್ಯದಲ್ಲಿ ಶೀಘ್ರ ಕಾರ್ಯರೂಪಕ್ಕೆ: ಸಚಿವೆ ಶಶಿಕಲಾ ಎ ಜೊಲ್ಲೆ

Upayuktha

ಪುತ್ತೂರು: ಜ. 23ಕ್ಕೆ ನಿರಂಜನ ಪ್ರಶಸ್ತಿ, ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ

Upayuktha

‘ವಿಜ್ಞಾನ ಸಿಂಚನ 2020’: ಉಜಿರೆ ಎಸ್‌ಡಿಎಂನಲ್ಲಿ ಅಂತರ್ ಕಾಲೇಜು ಸ್ಪರ್ಧೆ

Upayuktha