ಕತೆ-ಕವನಗಳು

ನೀ(ನಾ)ನು

ಕಳೆದುಹೋಗಿದ್ದೇನೆ….
ನಿನ್ನದೇ ನೆನಪಿನ ಸ್ಪರ್ಶದೊಳಗೆ


ನೀ ತೊಡಿಸಿದ ಕಾಲ್ಗೆಜ್ಜೆ ಝಲ್ ಎಂದಾಗ
ಕೈಯ ಬಳೆ ಮೆಲ್ಲನೆ ಸದ್ದು ಮಾಡಿದಾಗ…..
ನೀನೇ ನನ್ನೆದೆಯೊಳಗೆ
ಬಚ್ಚಿಟ್ಟು ಕುಳಿತ ಸುಖಸ್ಪರ್ಶಕೆ….
ಮನದೊಳಗೆ ಮೊಳಗುವ
ನಿನ್ನ ಪ್ರೇಮದ ಸರಿಗಮಕೆ
ನಾನು ನನ್ನನ್ನೇ ಮರೆಯುತ್ತಿದ್ದೇನೆ….
ನಿನ್ನ ಪಿಸುಮಾತು ಕಿವಿ
ಸೋಕಿದಾಗಲೆಲ್ಲಾ
ಅದೇನೋ ಕಚಗುಳಿ…..!
ಹುಣ್ಣಿಮೆಯ ರಾತ್ರಿಯಲ್ಲಿ
ಚಂದಿರನ ತೊಟ್ಟಿಲೊಳಗೆ
ನಿನ್ನ ಬಿಂಬ ಕಾಡಿದಾಗಲೆಲ್ಲಾ
ನಿಜ! ನಾನು ನನ್ನನ್ನೇ ಮರೆಯುತ್ತಿದ್ದೇನೆ
ತಂಬೆಲರು ಮೈಯಸೋಕಿದಾಗ
ನೀನೇ ಮೈ ಸವರಿದಂತೆ
ಅರಿಯದೆಯೇ ನಾಚಿ ನೀರಾಗುತ್ತೇನೆ
ಹೌದು!
ನನ್ನ ಚಿತ್ತ ಚೋರ…
ನಾನು ನೀನಾಗಿದ್ದೇನೆ
ನಿನ್ನೊಳಗೆ ಹುದುಗಿಹೋಗಿದ್ದೇನೆ
ಇನ್ನೆಷ್ಟು ದಿನ ಈ ವಿರಹ
ಕಾಯುತ್ತಿದ್ದೇನೆ …..
ಮೊಳಗುವ ಮಂಗಳನಾದಕೆ
ಹೊಸ ಬದುಕಿನ ಸಮ್ಮೇಳನಕ್ಕೆ
ನಮ್ಮ ವಿವಾಹ ಕಲ್ಪಕೆ…

         ಅಪೂರ್ವ ಕೊಲ್ಯ

Related posts

ಮಕ್ಕಳ ಕವನ: ಕಂದಮ್ಮಗಳೊಂದಿಗೆ ಚಂದಿರನ ವೀಕ್ಷಣೆ

Upayuktha

ಒಡನಾಟ

Harshitha Harish

ಭಯವಿದ್ದರೇನು ಫಲ

Harshitha Harish