ಕತೆ-ಕವನಗಳು

ನೀಲಮಣಿ ಭಾಗ-2

ಮುಂದುವರಿದ ಭಾಗ..

ಕುಳಿತು ಯೋಚಿಸಿದರೆ ಫಲವಿಲ್ಲ ರಾಜಕುಮಾರಿ…?!’ ಯಾವುದೋ ದನಿ ಕೇಳಿ ಬೆಚ್ಚಿ ಬಿದ್ದವಳು ಆ ಮಾಯಾವಿಗಳೇನಾದರೂ ತನ್ನನ್ನು ಅರಸಿ ಬಂದಿರುವರೇನೋ ಎಂಬ ಭಯಕ್ಕೆ ಅಲ್ಲಿಂದ ಎದ್ದು ಓಡತೊಡಗಿದಳು.

‘ನಿಲ್ಲಿ, ನಿಲ್ಲಿ ರಾಜಕುಮಾರಿ. ನಾನು ಮಹರ್ಷಿ ಮನೋಜ್ಞ, ನಿಮ್ಮ ರಾಜ್ಯದ ರಾಜಗುರು. ತಮಗೆ ಹೆಸರಿಟ್ಟವರೂ ನಾವೇ…! ನಂತರ ಸಾಧನೆಗಾಗಿ ನಿಮ್ಮ ರಾಜ್ಯದಿಂದ ದೂರಕ್ಕೆ ಇರೋ ಹಿಮಾದ್ರಿಗೆ ತೆರಳಿದ್ದೆ. ಇಂದು ನನ್ನ ಸಾಧನೆ ಪೂರ್ಣಗೊಂಡು ಕಣ್ಣು ಬಿಡುವಷ್ಟರಲ್ಲಿ ನನಗೆ ಸೂಚನೆ ಸಿಕ್ಕಿತು ಆದಿತ್ಯಪುರ ತೊಂದರೆಯಲ್ಲಿದೆ ಎಂದು. ಅದಕ್ಕಾಗಿ ಧಾವಿಸಿ ಬಂದಿರುವೆ.’

‘ಕ್ಷಮೆ ಇರಲಿ ಗುರುದೇವಾ. ನಾವು ತಮ್ಮನ್ನು ಗುರುತಿಸಲಿಲ್ಲ..’ ತಲೆಬಾಗಿ ನುಡಿದಳು ಯುವರಾಣಿ.

‘ಈಗ ಅದನ್ನು ಮಾತನಾಡುತ್ತಾ ಕೂರಲು ಸಮಯವಿಲ್ಲ. ಮೊದಲು ರಾಜ್ಯವನ್ನು ಈ ನೀಚ ಜನರಿಂದ ಕಾಪಾಡಿ, ಪ್ರಜೆಗಳ ಪ್ರಾಣವನ್ನು ರಕ್ಷಿಸಬೇಕಿದೆ..’

‘ಆದರೆ ಗುರುಗಳೇ, ನಮಗೆ ಯಾವುದೇ ದಾರಿ ತೋರುತ್ತಿಲ್ಲ. ಅವರುಗಳು ಮಾಯಾವಿಗಳು, ಅವರ ಶಕ್ತಿಯ ಮುಂದೆ ನಿಂತು ಹೋರಾಡಲು ನಮಗೆ ಸಾಧ್ಯವಿಲ್ಲ..!!’ ಚಿಂತೆಯಲ್ಲಿ ನುಡಿದಳು ರಾಜಕುಮಾರಿ.

‘ಚಿಂತಿಸಬೇಡಿ ಯುವರಾಣಿ, ಶಕ್ತಿಯಿಂದ ಸಾಧ್ಯ ಇಲ್ಲದಿರೋದನ್ನು ಯುಕ್ತಿಯಿಂದ ಸಾಧಿಸಬಹುದು..!’ ಅವರ ಮಾತಿಗೆ ಸುಮ್ಮನೇ ನೋಡಿದಳು ಅವಳು.

‘ಏನು ನಿಮ್ಮ ಮಾತಿನರ್ಥ ಗುರುಗಳೇ..?’

‘ನೀಲಿ ಬೆಟ್ಟದಲ್ಲಿರುವ ನೀಲಮಣಿಯನ್ನು ತಂದು ಈ ದಂಡದಲ್ಲಿ ಸ್ಥಾಪಿಸಬೇಕು. ಆಗ ಮೂಡೋ ಬೆಳಕಿನಿಂದ ಈ ಎಲ್ಲಾ ಮಾಯಾವಿಗಳು ಉರಿದು ಭಸ್ಮವಾಗಿ ನಮ್ಮ ರಾಜ್ಯ ಕ್ಷೇಮವಾಗಿ ಮೊದಲಿನಂತಾಗುವುದು…’ ಅವರ ಮಾತಿಗೆ ಕಣ್ಣರಳಿಸಿ ನಿಂತಳು ಅವನಿ. ಸಣ್ಣ ಭರವಸೆಯ ಬೆಳಕೊಂದು ಮೂಡಿತ್ತು ಮನದಲ್ಲಿ.

Related posts

ಚೌತಿಯ ಸಡಗರ (ಮಕ್ಕಳ ಕವನ)

Upayuktha

ನಿನ್ನೊಳು ನಾನು, ನನ್ನೊಳು ನೀನು*

Harshitha Harish

ಕವನ: ಕುಪ್ಪೂರೇಶನಿಗೆ ಭಕ್ತಿ ನಮನ

Upayuktha