ನಗರ ಶಿಕ್ಷಣ ಸ್ಥಳೀಯ

ನೀಟ್ 2020 ಫಲಿತಾಂಶ: ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿಗಳ ಅತ್ಯುನ್ನತ ಸಾಧನೆ

ಪುತ್ತೂರು: ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2020ರ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಹಲವು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ರಾಷ್ಟ್ರ ಮಟ್ಟದ ಉತ್ತಮ ರ‍್ಯಾಂಕ್‌ಗಳನ್ನು ಪಡೆದಿದ್ದಾರೆ. 720 ಅಂಕಗಳಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.

ಅಕ್ಷಯ್ ಪಾಂಗಾಳ್-642 ಅಂಕಗಳು (ಪುತ್ತೂರಿನ ದಿನೇಶ್ ಪಾಂಗಳ್ ಮತ್ತು ಸಂಧ್ಯಾ ಪಾಂಗಳ್ ರವರ ಪುತ್ರ. ಈತನು ಅಖಿಲ ಭಾರತ ಮಟ್ಟದಲ್ಲಿ 5352 ನೇ ರ‍್ಯಾಂಕ್‌ನ್ನು ಗಳಿಸಿರುತ್ತಾನೆ)

ಈಶ್ವರ ಪ್ರಸನ್ನ ಬಿ. ಎನ್.-597 ಅಂಕಗಳು( ವೀರಕಂಬದ ನಾರಾಯಣ ಭಟ್ ಮತ್ತು ರಜನಿ ಭಟ್ ದಂಪತಿಗಳ ಪುತ್ರ. ಈತನು ಅಖಿಲ ಭಾರತ ಮಟ್ಟದಲ್ಲಿ 21267 ನೇ ರ‍್ಯಾಂಕ್ ನ್ನು ಗಳಿಸಿರುತ್ತಾನೆ)

ವಿಜಿತ್ ಕೃಷ್ಣ-568 ಅಂಕಗಳು (ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ರಾಮಚಂದ್ರ ರಾವ್ ಮತ್ತು ಗೀತಾ ರಾವ್ ದಂಪತಿಗಳ ಪುತ್ರ. ಈತನು ಅಖಿಲ ಭಾರತ ಮಟ್ಟದಲ್ಲಿ 37400 ನೇ ರ‍್ಯಾಂಕ್ ನ್ನು ಗಳಿಸಿರುತ್ತಾನೆ)

ಅಂಜಲಿ-561 ಅಂಕಗಳು (ನೆಹರೂನಗರದ ಬಿ ವಸಂತ ಶಂಕರ್ ಮತ್ತು ಗೀತಾ ವಸಂತ್ ದಂಪತಿಗಳ ಪುತ್ರಿ. ಅಖಿಲ ಭಾರತ ಮಟ್ಟದಲ್ಲಿ 41409 ನೇ ರ‍್ಯಾಂಕ್ ನ್ನು ಗಳಿಸಿದ್ದಾಳೆ)

ಶಮಾ ಕೆ-536 ಅಂಕಗಳು (ಪುತ್ತೂರಿನ ಡಾ| ಸುಬ್ರಹ್ಮಣ್ಯ ಕೆ ಮತ್ತು ರೇವತಿ ಎಂ ಬಿ ದಂಪತಿಗಳ ಪುತ್ರಿ. ಅಖಿಲ ಭಾರತ ಮಟ್ಟದಲ್ಲಿ 58462 ನೇ ರ‍್ಯಾಂಕ್ ನ್ನು ಗಳಿಸಿದ್ದಾಳೆ)

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕಾವ್ಯವು ದಿವ್ಯಾನುಭೂತಿಯ ಮಾಧ್ಯಮ: ಕಲ್ಲಬೆಟ್ಟು ಕವಿಗೋಷ್ಠಿಯಲ್ಲಿ ಡಾ. ವಸಂತಕುಮಾರ ಪೆರ್ಲ

Upayuktha

ಪಾಲಿಕೆ ಚುನಾವಣೆ: ನಾಳೆ (ನ.10) ಬಹಿರಂಗ ಪ್ರಚಾರ ಅಂತ್ಯ

Upayuktha

ರೆಡ್‍ಕ್ರಾಸ್‍ನಿಂದ ಪೌರಕಾರ್ಮಿಕರಿಗೆ ಮಾಸ್ಕ್, ಸೋಪ್ ವಿತರಣೆ

Upayuktha

Leave a Comment