ಗ್ರಾಮಾಂತರ ಸ್ಥಳೀಯ

ಸದಭಿರುಚಿಯ ಬಹುಮುಖ ಚಿಂತನೆಗಳು- ಧಾರ್ಮಿಕ ಸಭೆ

ನೆಗಳಗುಳಿಯ ಶ್ರೀ ಕ್ಷೇತ್ರ ಕೊಲ್ಲಗುಳಿಯಲ್ಲಿ ರಕ್ತೇಶ್ವರಿ ನಾಗಬ್ರಹ್ಮ ಉತ್ಸವ

ಬಂಟ್ವಾಳ: ನೆಗಳಗುಳಿಯ ಶ್ರೀ ಕ್ಷೇತ್ರ ಕೊಲ್ಲಗುಳಿಯಲ್ಲಿ ರಕ್ತೇಶ್ವರಿ ನಾಗಬ್ರಹ್ಮ ಉತ್ಸವದ ನಿಮಿತ್ತ ನಡೆದ ಸದಭಿರುಚಿಯ ಬಹುಮುಖ ಚಿಂತನೆಗಳ ಧಾರ್ಮಿಕ ಸಭಾ ಕಾರ್ಯಕ್ರಮವು ನೆಗಳಗುಳಿ ಮೂಲದ ಮಂಗಳೂರಿನಲ್ಲಿರುವ ಡಾ ಸುರೇಶ ನೆಗಳಗುಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅವರು ಮಾತನಾಡುತ್ತಾ ಸ್ವಾಸ್ಥ್ಯ ಸಂರಕ್ಷಣೆಯಲ್ಲಿ ದಿನಚರಿ ಮತ್ತು ಆಧ್ಯಾತ್ಮದ ಮಹತ್ವವನ್ನು ಸೋದಾಹರಣವಾಗಿ ವಿವರಿಸಿದರು. ಆಚಾರ ವಿಚಾರ ವಿಹಾರಗಳ ಬಗ್ಗೆ ಹಾಗೂ ಸತ್ವ ರಜ ತಮ ಗುಣಗಳ ಬಗ್ಗೆ ಅವರು ವಿಶದವಾಗಿ ವಿವರಣೆ ನೀಡಿದರು.

ವಿದ್ವಾನ್ ಕೇಶವ ಜೋಯಿಸರು ಭಂಡಾರ ಮತ್ತು ದೈವ ಕ್ರಿಯಾಚರಣೆಗಳನ್ನೂ, ರಜತಾದ್ರಿ ಮುಳಿಯ ಶಂಕರ ಭಟ್ಟರು ಇಷ್ಟ ಮತ್ತು ಹಿತದ ಬಗ್ಗೆ ಹಾಗೂ ಎರಂಬು ಶಂಕರ ಭಟ್ಟರು ಕಲೆ ಮತ್ತು ಕಾರಣೀಕದ ಬಗ್ಗೆ ಅತ್ಯಂತ ವಿವರವಾಗಿ ಉಪಾನ್ಯಾಸ ನೀಡಿದರು.

ಇದೇ ವೇಳೆ ಪೆರಾಜೆ ಪಾರೆಮನೆಯ ನೇಮಿರಾಜ ಗೌಡರು ಶ್ರೀ ಕ್ಷೇತ್ರದಿಂದ ತಮಗೆ ಲಭಿಸಿದ ಭಾಗ್ಯಗಳನ್ನು ಎಳೆ ಎಳೆಯಾಗಿ ವಿವರಿಸಿದರು.

ಶ್ರೀ ಕ್ಷೇತ್ರದ ಅರ್ಚಕ ಹಾಗೂ ಮುಖ್ಯಸ್ಥ ಶ್ರೀ ತಿಮ್ಮಣ್ಣ ಭಟ್ಟರು ಸಾಂದರ್ಭಿಕವಾಗಿ ಮಾತನಾಡುತ್ತಾ ಎಲ್ಲರನ್ನೂ ಸ್ವಾಗತಿಸಿದರು. ಇದೇ ವೇಳೆ ಲಯನ್ ಗೋವಿಂದ ಶರ್ಮಾ, ಭಾಸ್ಕರ ಉಪಾಧ್ಯಾಯ, ಬಟ್ಟಡ್ಕ ಗೋವಿಂದ ಭಟ್ ಮತ್ತಿತರ ಭಕ್ರರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಅಂತರ್‌ ಕಾಲೇಜು ಪುರುಷರ ಹ್ಯಾಂಡ್‌ ಬಾಲ್ ಟೂರ್ನಮೆಂಟ್ ಉದ್ಘಾಟನೆ

Upayuktha

ವಿವಿ ಕಾಲೇಜಿನಲ್ಲಿ ‘ಫೋಕಸ್- 2021’ ಕಾರ್ಯಾಗಾರ ಸಂಪನ್ನ

Upayuktha

ಬೆಳ್ತಂಗಡಿ: ನ.ಪಂ ಸಮುದಾಯ ನಿವೃತ್ತ ಸಂಘಟನಾಧಿಕಾರಿ ವೆಂಕಟರಮಣ ಶರ್ಮ ಅವರಿಗೆ ಸಮ್ಮಾನ

Sushmitha Jain