ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಹೊಸ ಶಿಕ್ಷಣ ನೀತಿಯಿಂದ ಕೌಶಲ್ಯ ವೃತ್ತಿಗೆ ಒತ್ತು; ಜಿಡಿಪಿ ಹೆಚ್ಚಳಕ್ಕೆ ನೆರವು: ರೂಪಕಲಾ

ಪುತ್ತೂರು: ಹೊಸ ಶಿಕ್ಷಣ ನೀತಿಯು ಕೌಶಲ್ಯ ವೃತ್ತಿಗೆ ಒತ್ತು ನೀಡುವುದರಿಂದ ಉದ್ಯೋಗಾವಕಾಶವನ್ನು ವಿಪುಲವಾಗಿ ನೀಡಬಹುದು. ಈ ರೀತಿಯ ಬೆಳವಣಿಗೆಗಳು ಆದಾಗ ಜಿಡಿಪಿಯಲ್ಲಿಯೂ ಬದಲಾವಣೆಯಾಗಲು ಸಾಧ್ಯ ಎಂದು ಪುತ್ತೂರಿನ ನರೇಂದ್ರ ಪದವಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ರೂಪಕಲಾ ಹೇಳಿದರು.

ಇವರು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ನಡೆದ ಸಂಸ್ಕ್ರತಿ-ಪ್ರಸ್ತುತಿ ಎರಡನೇ ಸರಣಿ ಕಾರ್ಯಕ್ರಮದಲ್ಲಿ ಸಮನ್ವಯಕಾರರಾಗಿ ಭಾಗವಹಿಸಿ ಶಿಕ್ಷಣದಿಂದ ಜಿಡಿಪಿಯನ್ನು ಹೆಚ್ಚಿಸಲು ಸಾಧ್ಯವೇ ಎನ್ನುವುದರ ಬಗೆಗೆ ಮಾಹಿತಿಯನ್ನು ನೀಡಿದರು. ಅಲ್ಲದೇ ಕಾರ್ಯಕ್ರಮದಲ್ಲಿ ಮಹಿಳೆ-ಆರ್ಥಿಕತೆ ಹಾಗೂ ಅಭಿವೃದ್ಧಿ ಎಂಬ ವಿಚಾರದ ಬಗೆಗೂ ಮಾತನಾಡಿದರು.

ಇತ್ತೀಚೆಗೆ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ, ಹಾಗೂ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಹೀಗಿರುವಾಗ ಮಹಿಳೆಯ ಮೇಲಿರುವ ಕೀಳರಿಮೆ ಹಾಗೂ ಮನಸ್ಥಿತಿಯನ್ನು ನಾವಿಂದು ಬದಲಾಯಿಸಿಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಅನ್ನಪೂರ್ಣ ಅವರು ಮಹಿಳೆ-ಆರ್ಥಿಕತೆ ಹಾಗೂ ಅಭಿವೃದ್ಧಿಯ ಬಗೆಗೆ ಮಾತನಾಡಿ, ಹೆಣ್ಣಿನ ಮೇಲೆ ನಡೆಯುವ ಶೋಷಣೆಗಳು ನಿಲ್ಲಬೇಕು ಹಾಗೂ ಆಕೆ ಆರ್ಥಿಕವಾಗಿ, ಮಾನಸಿಕವಾಗಿ ಸದೃಢಳಾಗಿ ಸ್ವಾವಲಂಬಿಯಾಗಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ವಿನುತಾ, ಶಿಕ್ಷಣದಿಂದ ಜಿಡಿಪಿಯನ್ನು ಹೆಚ್ಚಿಸಲು ಸಾಧ್ಯವೇ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಇಂದು ನಮ್ಮಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದ್ದು ಎಲ್ಲರೂ ಉದ್ಯೋಗವನ್ನು ಮಾಡುತ್ತಿದ್ದಾರೆ ಅಲ್ಲದೇ ಇಂದಿನ ಹೊಸ ಶಿಕ್ಷಣ ನೀತಿಯಿಂದ ಜಿಡಿಪಿಯನ್ನು ಉನ್ನತಗೊಳಿಸಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಜಿ. ಭಟ್, ಸಮನ್ವಯಕಾರರಾದ ಶ್ರೀಮತಿ ರೂಪಕಲಾ ಹಾಗೂ ಉಪನ್ಯಾಸಕಿಯರಾದ ಶ್ರೀಮತಿ ಅನ್ನಪೂರ್ಣ ಹಾಗೂ ಶ್ರೀಮತಿ ವಿನುತಾ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಜ್ಯೋತಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಿಗಾಗಿ ಯೋಗಾಸನ ತರಬೇತಿ

Upayuktha

‘ಯಶಸ್’ ಪ್ರವೇಶ ಪರೀಕ್ಷಾ ಫಲಿತಾಂಶ ಪ್ರಕಟ

Upayuktha

ಸೋಮವಾರ ಬೆಳಗ್ಗೆ7ರಿಂದ ಸಂಜೆ 7ರ ವರೆಗೆ ಲಾಕ್‌ಡೌನ್ ಸಡಿಲಿಕೆ: ಏನಿರುತ್ತೆ, ಏನಿರಲ್ಲ?

Upayuktha

Leave a Comment