ಕೃಷಿ ನಗರ ಸ್ಥಳೀಯ

ಎ.3: ಹೊಸಪೀಳಿಗೆಯ ಕಾಪರ್‌ ಸಲ್ಪೇಟ್‌ ಹಾಗೂ ಸುಧಾರಿತ ಪೈಬರ್‌ ದೋಟಿಯ ಬಗ್ಗೆ ಮಾಹಿತಿ

ಪುತ್ತೂರು: ಅಡಿಕೆ ಕೊಳೆರೋಗಕ್ಕೆ ಬೋರ್ಡೋದಲ್ಲಿ ಹೊಸಪೀಳಿಗೆಯ ಕಾಪರ್‌ ಸಲ್ಪೇಟ್‌ ಬಗ್ಗೆ ಮಾಹಿತಿ ಹಾಗೂ ಅಡಿಕೆ ಕೊಯಿಲು ಹಾಗೂ ಬೋರ್ಡೋ ಸಿಂಪಡಣೆಗೆ ಸುಧಾರಿತ ಫೈಬರ್‌ ದೋಟಿಯ ಬಗ್ಗೆ ಮಾಹಿತಿ ಕಾರ್ಯಕ್ರಮ ಎ.3 ರಂದು ಪುತ್ತೂರಿನ ತೆಂಕಿಲದ ಚುಂಚಶ್ರೀ ಸಭಾಭವನದಲ್ಲಿ ನಡೆಯಲಿದೆ.

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಆಶ್ರಯದಲ್ಲಿ ಯುಪಿಎಲ್‌ ಲಿಮಿಟೆಡ್‌ ಮುಂಬಯಿ ಇವರ ಸಹಕಾರದಲ್ಲಿ ಎ.3 ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಹೊಸ ಪೀಳಿಗೆಯ ಕಾಪರ್‌ ಸಲ್ಫೇಟ್‌ ಬಗ್ಗೆ ಮಾಹಿತಿ ಹಾಗೂ ತಂತ್ರಜ್ಞಾನದ ಪರಿಚಯ ನಡೆಯಲಿದೆ. ಅದರ ಜೊತೆಗೆ ಸುಮಾರು 8 ತಿಂಗಳು ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಜೋಳದ ತ್ಯಾಜ್ಯದಿಂದ ತಯಾರಿಸಿದ ಉತ್ಪನ್ನದ ಪರಿಚಯವೂ ನಡೆಯಲಿದೆ.

ಇದೇ ವೇಳೆ ಅಡಿಕೆ ಮರ ಏರದೆ ಔಷಧಿ ಸಿಂಪಡನೆ ಹಾಗೂ ಅಡಿಕೆ ಕೊಯಿಲಿಗೆ ಅಗತ್ಯವಾದ ಸುಧಾರಿತ ಫೈಬರ್‌ ದೋಟಿಯ ಬಗ್ಗೆ ಮಾಹಿತಿಯನ್ನು ಎಂಜಿನಿಯರ್‌ ಆಗಿರುವ ಬಾಲಸುಬ್ರಹ್ಮಣ್ಯ ಅವರು ನೀಡಲಿದ್ದಾರೆ. ಆಸಕ್ತ ಕೃಷಿಕರು ಈ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ವಿವೇಕಾನಂದ ಕಾಲೇಜಿನಲ್ಲಿ ಮಣಿಕರ್ಣಿಕ ಮಾತುಗಾರರ ವೇದಿಕೆ ಕಾರ್ಯಕ್ರಮ

Upayuktha

ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ಬಂಟ್ವಾಳ ಕ್ಷೇತ್ರದ 4515 ಮನೆಗಳಿಗೆ ನಳ್ಳಿ ಸಂಪರ್ಕಕ್ಕೆ ಸೂಚನೆ

Upayuktha

ಸಂಕ್ಷಿಪ್ತ ಸುದ್ದಿಗಳು:  ಡಿಪ್ಲೋಮಾ ಬಾಕಿ- ಪರೀಕ್ಷೆಗೆ ಕೊನೆಯ ಅವಕಾಶ

Upayuktha