ದೇಶ-ವಿದೇಶ ಪ್ರಮುಖ ವಿಜ್ಞಾನ-ತಂತ್ರಜ್ಞಾನ

ಸರಕಾರವೇ ಅಭಿವೃದ್ಧಿಪಡಿಸಿದ ‘ಸಂದೇಶ್’ ಆಪ್‌ ಬಿಡುಗಡೆ, ಇದು ಸ್ವದೇಶಿ ವಾಟ್ಸಪ್‌

ಹೊಸದಿಲ್ಲಿ: ಎಲ್ಲ ರಂಗಗಳಲ್ಲೂ ಭಾರತೀಯ ತಂತ್ರಜ್ಞಾನವನ್ನೇ ಅಭಿವೃದ್ಧಿಪಡಿಸಿ ಜನತೆಯ ಬಳಕೆಗೆ ಬಿಟ್ಟುಕೊಡುವ ಭಾರತ ಸರಕಾರದ ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಇದೀಗ ಸಂಪೂರ್ಣ ಸ್ವದೇಶಿ ಸಾಮಾಜಿಕ ಜಾಲತಾಣ ಸಂದೇಶ್ ಆಪ್ ಬಿಡುಗಡೆ ಮಾಡಿದೆ.

ಭಾರತ ಸರಕಾರದ ಅಧೀನದಲ್ಲಿರುವ ದಿ ನ್ಯಾಷನಲ್ ಇನ್‌ಫಾರ್ಮೇಟಿಕ್ಸ್‌ ಸೆಂಟರ್ (ಎನ್‌ಐಸಿ) ಈ ಆಪ್ ಅನ್ನು ಅಭಿವೃದ್ದಿಪಡಿಸಿದೆ. ಇದುವರೆಗೆ ಸರಕಾರಿ ಇಲಾಖೆಗಳು, ಸಚಿವರು, ಅಧಿಕಾರಿಗಳ ನಡುವಣ ಅಧಿಕೃತ ಹಾಗೂ ಸುರಕ್ಷಿತ ಸಂವಹನಕ್ಕಾಗಿ ಮಾತ್ರ ಮೀಸಲಾಗಿದ್ದ (GIMS- Government Instant Messaging Service) ಈ ಆಪ್ ಅನ್ನು ಇದೀಗ ಕೇಂದ್ರ ಸರಕಾರವು ‘ಸಂದೇಶ್‌’ ಹೆಸರಿನೊಂದಿಗೆ ಸಾರ್ವಜನಿಕರ ಬಳಕೆಗೂ ಬಿಡುಗಡೆ ಮಾಡಿದೆ.

ದೇಶೀಯ ವಾಟ್ಸಾಪ್ ಎಂದು ಕರೆಯಬಹುದಾದ ಸಂದೇಶ್‌ ಆಪ್‌ನಲ್ಲಿ ಎಂಡ್ ಟು ಎಂಡ್ ಎನ್ಕ್ರಿಪ್ಟ್‌ ಮಾಡಲಾದ ಸಂಪೂರ್ಣ ಸುರಕ್ಷಿತ ಸಂವಹನ ನಡೆಸಬಹುದಾಗಿದೆ. ಸಂದೇಶ ರವಾನೆ, ಗ್ರೂಪ್‌ಗಳ ರಚನೆ, ಧ್ವನಿ ಕರೆ ಹಾಗೂ ವೀಡಿಯೋ ಕರೆ ಮಾಡುವ ಸೌಲಭ್ಯ, ಇಮೋಜಿಗಳು, ಟ್ಯಾಗ್‌ಗಳು ಮುಂತಾದ ಅನೇಕ ಸೌಲಭ್ಯಗಳು ಈ ಆಪ್‌ನಲ್ಲಿವೆ.

ಸದ್ಯ ಇದು ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿಲ್ಲ. ಅಲ್ಲಿ ಕಾಣುವ ಇದೇ ಹೆಸರಿನ ಕೆಲವು ಆಪ್‌ಗಳು ಅಧಿಕೃತವಲ್ಲ. ಆದರೆ ಎನ್‌ಐಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಗೂ gims.gov.in ನಲ್ಲಿ ಈ ಅಧಿಕೃತ ಆಪ್‌ನ ಡೌನ್‌ಲೋಡ್ ಲಿಂಕ್‌ಗಳು ಲಭ್ಯವಿವೆ. ಆಂಡ್ರಾಯ್ಡ್ ಹಾಗೂ ಐಓಎಸ್‌ ಓಎಸ್‌ಗಳಿಗೆ ಇದು ಲಭ್ಯವಿದೆ.

ಸಂದೇಶ್ ಆಪ್ ಡೌನ್ಲೋಡ್‌ ಮಾಡಿಕೊಳ್ಳಲು ಈ ಲಿಂಕ್‌ ಕ್ಲಿಕ್ಕಿಸಿ: ಇದು ನಿಮ್ಮನ್ನು ಭಾರತ ಸರಕಾರದ ಎನ್‌ಐಸಿ ಜಾಲತಾಣದ ಡೌನ್‌ಲೋಡ್‌ ಪುಟಕ್ಕೆ ಕರೆದೊಯ್ಯುತ್ತದೆ.

ಬಳಕೆದಾರರು ತಮ್ಮ ಮೊಬೈಲ್‌ಗೆ ಈ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು ಮೊಬೈಲ್ ನಂಬರ್ ಅಥವಾ ಸರಕಾರಿ ಇ-ಮೇಲ್ ಐಡಿ ಮೂಲಕ ನೋಂದಣಿ ಮಾಡಿಕೊಂಡು ಬಳಸಬಹುದಾಗಿದೆ.

ಸಂದೇಶ್‌ ಆಪ್‌ನ ವೆಬ್ ಆವೃತ್ತಿಯೂ ಲಭ್ಯವಿದ್ದು, ಮೊಬೈಲ್‌ ನಂಬರ್‌ ದಾಖಲಿಸಿ ಒಟಿಪಿ ಮೂಲಕ ದೃಢೀಕರಿಸಿಕೊಂಡು ಲಾಗಿನ್ ಆಗಬಹುದು.

ಭಾರತೀಯರು ಯಾವುದೇ ಅಳುಕಿಲ್ಲದೆ ಸಂದೇಶ್ ಆಪ್ ಅನ್ನು ಬಳಸಬಹುದಾಗಿದೆ. ಆ ಮೂಲಕ ಡಿಜಿಟಲ್ ಇಂಡಿಯಾದ ಜತೆಗೆ ಆತ್ಮ ನಿರ್ಭರ ಭಾರತದ ಕಲ್ಪನೆಯನ್ನೂ ಸಾಕಾರಗೊಳಿಸುವಲ್ಲಿ ಭಾಗಿಯಾಗಬಹುದು.

Home

ಇತ್ತೀಚೆಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್‌ಗೆ ಪರ್ಯಾಯವಾಗಿ ಕನ್ನಡಿಗರೇ ಅಭಿವೃದ್ದಿಪಡಿಸಿದ ಕೂ ಆಪ್‌ ಅನ್ನು ಬಳಸುವಂತೆ ಕೇಂದ್ರ ಸರಕಾರ ಈಗಾಗಲೇ ತನ್ನ ಎಲ್ಲ ಇಲಾಖೆಗಳು, ಸಚಿವರು, ಅಧಿಕಾರಿಗಳಿಗೆ ಸಲಹೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಶೀಘ್ರವೇ ಕೂ ಆಪ್‌ನಲ್ಲಿ ಅಧಿಕೃತ ಸಂದೇಶಗಳನ್ನು ಹಾಕುವ ಮೂಲಕ ಟ್ವಿಟರ್‌ಗೆ ಸೆಡ್ಡು ಹೊಡೆಯಲಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕೋವಿಡ್‌ 19 ಅಪ್‌ಡೇಟ್ಸ್‌: ಉಡುಪಿ 45, ದ.ಕ. 3 ಕೊರೊನಾ ಪ್ರಕರಣ

Upayuktha

ಗುರುವಾಯನಕೆರೆ: ವಿಜ್ಞಾನ ಮತ್ತು ಸಂಶೋಧನ ಕ್ಷೇತ್ರದ ಸಾಧಕ ಪ್ರಶಸ್ತಿಗೆ ಎಕ್ಸೆಲ್ ಸೈನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಆಯ್ಕೆ

Sushmitha Jain

ಕೊರೊನಾ ಅಪ್‌ಡೇಟ್: ಇಂದು ದ.ಕ- 12, ಉಡುಪಿ- 14, ಕರ್ನಾಟಕ- 249 ಪಾಸಿಟಿವ್ ಕೇಸುಗಳು

Upayuktha