ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ನಿಟ್ಟೆಯಲ್ಲಿ ‘ನಿನಾದ’ ಸ್ಟುಡಿಯೋ ಉದ್ಘಾಟನೆ

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಿಟ್ಟೆ ಸಮೂಹ ಸಂಸ್ಥೆಗಳ ಟ್ರಸ್ಟೀ ಹಾಗೂ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಪ್ರೊ-ಚಾನ್ಸೆಲರ್ (ಎಡ್ಮಿನ್) ವಿಶಾಲ್ ಹೆಗ್ಡೆ ಅವರು ‘ನಿನಾದ’ ಎಂಬ ಸೌಂಡ್ ಅಕೌಸ್ಟಿಕ್ ಸ್ಟುಡಿಯೋವನ್ನು ಉದ್ಘಾಟಿಸಿದರು.

ಈ ಸ್ಟುಡಿಯೋವನ್ನು ವಿ.ಜಿ.ಎಸ್.ಟಿ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾಗಿದೆ. ‘ಸೆಂಟರ್ ಆಫ್ ಇನ್ನೋವೇಶನ್ ಫಾರ್ ಸ್ಟಡೀಸ್ ಆನ್ ಆಟೊಮೇಟಿಕ್ ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ ಆ್ಯಂಡ್ ಸ್ಪೀಚ್ ಡಿಸೋರ್ಡರ್ ಪ್ರಾಬ್ಲೆಮ್ಸ್ ಇನ್ ಕನ್ನಡ ಲ್ಯಾಂಗ್ವೇಜ್’ ಎಂಬ ಈ ಪ್ರಾಜೆಕ್ಟ್‍ನ್ನು ಎಂ.ಸಿ.ಎ ವಿಭಾಗದ ಮುಖ್ಯಸ್ಥ ಡಾ. ಸುರೇಂದ್ರ ಶೆಟ್ಟಿ ಹಾಗೂ ಕಂಪ್ಯೂಟರ್‍ಸೈನ್ಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಸಾರಿಕಾ ಹೆಗ್ಡೆ ನಿರ್ವಹಿಸುತ್ತಿರುವರು.

ಈ ಸೌಂಡ್‍ ಸ್ಟುಡಿಯೋ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿಟ್ಟೆ ವಿದ್ಯಾಸಂಸ್ಥೆಯ ಫಿನಾನ್ಸ್ & ಪ್ಲಾನಿಂಗ್ ನಿರ್ದೇಶಕ ರಾಜೇಂದ್ರ ಎಂ, ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಲೂಣ್ಕರ್, ನಿಟ್ಟೆ ಕ್ಯಾಂಪಸ್‍ನ ರಿಜಿಸ್ಟ್ರಾರ್ ಪ್ರೊ.ಯೋಗೀಶ್ ಹೆಗ್ಡೆ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸಾಮಾಜಿಕ ಬರಹ ಪ್ರಜ್ಞೆ ಅಗತ್ಯ: ಪ್ರೊ. ಕೆ. ವಿ. ನಾಗರಾಜ್

Upayuktha

ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗವ್ಯ ಉತ್ಪನ್ನ ಮಾರಾಟ ಮಳಿಗೆ ಉದ್ಘಾಟನೆ

Upayuktha

ಉರ್ವಸ್ಟೋರ್‌ ಖಾಸಗಿ ಅಪಾರ್ಟ್‌ಮೆಂಟ್‌ ತಡೆಗೋಡೆ ಮತ್ತೆ ಕುಸಿತ: ಆಕಾಶವಾಣಿ ಕ್ವಾರ್ಟರ್ಸ್‌ಗೆ ಅಪಾಯದ ಭೀತಿ

Upayuktha