ಕತೆ-ಕವನಗಳು

ನಿತ್ಯ ಸತ್ಯ- ಸಂಗದೋಷ

ಕಿರು ಸತ್ಯ..21

ಜಾಣ್ಮೆ
***
ಎಕರೆ ಎಕರೆ
ಹೊಲವ ಮಾರಿ
ನಗರವನ್ನು
ಸೇರಿಕೊಂಡು,
ಅಡಿಗಡಿಗೂ
ಲಕ್ಷ ಸುರಿವ
ಜಾಣ್ಮೆ ಏನದು.
****
ಸಹಸ್ರಬುಧ್ಯೆ ಮುಂಡಾಜೆ

ಕಿರು ಸತ್ಯ..22

ಸಂಗದೋಷ
****
ದುಷ್ಟ ಜನರ
ಸಹವಾಸವು
ಮಾನಹಾನಿ
ಮಾಡಿಸುವುದು.
ಲೋಹದೊಡನೆ
ಬೆಂಕಿ ತಿನುವ
ಹೊಡೆತದಂತೆಯೇ..!!
******
ಸಹಸ್ರಬುಧ್ಯೆ ಮುಂಡಾಜೆ

ಕಿರು ಸತ್ಯ..23

ನಾಲಗೆ
**
ನಿಲ್ಲಬಹುದು
ಹೃದಯ ಬಡಿತ
ಬೀಳಬಹುದು
ಬೆನ್ನಿಗ್ಹೊಡೆತ
ಕಳೆದು ಕೊಂಡ್ರೆ
ಮನುಜ ನೀನು
ನಾಲಗೆ ಹಿಡಿತ
*****
ಸಹಸ್ರಬುಧ್ಯೆ ಮುಂಡಾಜೆ

ಕಿರು ಸತ್ಯ..24

ಜ್ಞಾನ
***
ದೇಶವನ್ನು
ಸುತ್ತಬೇಕು
ಕೋಶವನ್ನು
ಓದಬೇಕು
ಬರಿದೆ ಮಾತಿ
ನಿಂದ ಯಾವ
ತಿಳಿವು ಬಾರದು.
******
ಸಹಸ್ರಬುಧ್ಯೆ ಮುಂಡಾಜೆ

ಕಿರು ಸತ್ಯ..25

ನಿಗೂಢ
***
ಪುಣ್ಯಕೋಟಿ
ಎಂಬ ಹಸುವ
ತಿನ್ನಲೆಂದು
ನೆಗೆದ ಹುಲಿಯ
ತಲೆಗೆ ಶಿಲೆಯು
ಬಡಿದುದಕ್ಕೆ
ಪ್ರಾಣ ಬಿಟ್ಟಿತು.
*****
-ಸಹಸ್ರಬುಧ್ಯೆ ಮುಂಡಾಜೆ

 

 

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಕವನ: ಸ್ವಾವಲಂಬನೆ

Upayuktha

ಕವನ: ನಿನಗಿದೋ ಶತನಮನ

Upayuktha

ಕಥನ ಕವನ : ಆದಿಕವಿ ವಾಲ್ಮೀಕಿ

Upayuktha