ಕತೆ-ಕವನಗಳು

*ನಿತ್ಯೋತ್ಸವವೀ ಕೆಪಿಗದ ಬಾಳು*

ನಿಚ್ಚ ಉತ್ಸವ ಪುಚ್ಚ ಬೀಸುವ


ಪುಟ್ಟ ಮಂದಿರದಕ್ಕಿಗೂ..
ಒಂದೇ ಕೂಗಲಿ ಒಟ್ಟು ಸೇರುವ
ಪ್ರೀತಿ ಪ್ರೇಮದ ಬದುಕಿದೂ… ।

ಒಲವು ಚೆಲುವಲಿ, ಹಸಿರ ಮಡಿಲಲಿ
ಹೊಟ್ಟೆ ತಂಪನೆ ಅನುಭವ..
ವಾಯುದೇವನ ವರದ ನೆವದಲಿ
ರಂಗೇರಿತೀಗ ನಿತ್ಯೋತ್ಸವ …॥

ಅನುಭವಿಸುತಿಹೆ ನಾ ಮಧುರ ಕ್ಷಣ
ದೇವನೊಬ್ಬನ ಕೃಪೆಯಲಿ…
ಆರಾಧಿಪೆ ಅವನನನುದಿನ
ಇಂಪು ಸೋಂಪಿನ ಸ್ವರದಲಿ… ।

ಹಾಯಿ ಹಡಗನ್ನು ನೂಕುತಿಹೆನು
ಸಮತೋಲನವಿರಲಿ ಪ್ರಕೃತಿ…
ಕಸಕಡ್ಡಿಯ ಹೆಕ್ಕಿ ಮಾಳ್ಪೆನು
ಬದಲಾಗಲಿಳೆಯಾ ಆಕೃತಿ.. ॥

ಎತ್ತರೆತ್ತರ ಹಾರಿ ನಲಿಯುವೆ
ಇಳೆಯ ಸೊಬಗಾ ಹಾಡುತಾ..
ನದಿ ತೊರೆಯಲಿ ಪುಳಕಗೊಳ್ಳುವೆ
ತೀರ್ಥಸ್ನಾನ ಮಾಡುತಾ… ।

✏️ ಸಮ್ಯಕ್ತ್ ಜೈನ್_ಕಡಬ

Related posts

ಗಝಲ್: ಮುತ್ತಿನಂತೆ ಹೊಳೆಯುತಿರು ಗೆಳತಿ

Upayuktha

ಜೀವನಸಂದೇಶವನ್ನು ಸಾರುವ ಮುಕ್ತಕಗಳು

Upayuktha

ಗಝಲ್: ಗೆಳೆಯ ಬಿಡಿಸಿದ ಚಿತ್ರ

Upayuktha