ಚಂದನವನ- ಸ್ಯಾಂಡಲ್‌ವುಡ್

ನಯನತಾರಾ ಹುಟ್ಟುಹಬ್ಬ ಆಚರಣೆ; ನಿಜಾಲ್’ ಚಿತ್ರತಂಡದ ಜೊತೆಗೆ

ಬೆಂಗಳೂರು :

ಲೇಡಿ ಸೂಪರ್ ಸ್ಟಾರ್’ ನಯನತಾರಾ ರವರು ನವೆಂಬರ್ 18 ರಂದು ತಮ್ಮ ಹುಟ್ಟುಹಬ್ಬ ವನ್ನು ಆಚರಿಸಿಕೊಂಡಿದ್ದಾರೆ.

ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಸೆಲೆಬ್ರಿಟಿಗಳು ನೆಚ್ಚಿನ ನಟಿಯ ಹುಟ್ಟುಹಬ್ಬ ಕ್ಕೆ ಶುಭಾಶಯ ತಿಳಿಸಿದ್ದಾರೆ. ಇದೀಗ, ನಯನತಾರಾ ನಟಿಸುತ್ತಿರುವ ಮಲಯಾಳಂ ಚಿತ್ರದ ಸೆಟ್‌ನಲ್ಲಿ ಹುಟ್ಟುಹಬ್ಬ ವನ್ನು ಸೆಲೆಬ್ರೆಟ್ ಮಾಡಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗಿದೆ.

ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವ ನಿಜಾಲ್ ಚಿತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಕಲಾವಿದರು, ತಂತ್ರಜ್ಞರು ಕೇಕ್ ಕತ್ತರಿಸುವ ಮೂಲಕ ನಯನತಾರಾ ರವರ ಜನ್ಮದಿನವನ್ನು ಸಂಭ್ರಮಿಸಿದ್ದಾರೆ. ಅವರ ಹುಟ್ಟುಹಬ್ಬವನ್ನು ಕುಟುಂಬ ಸದಸ್ಯರು ಅದ್ಧೂರಿಯಾಗಿ ಆಚರಿಸಿದ್ದರು.

ಈ ಸಂತಸದಲ್ಲಿ ಬಾಯ್‌ಫ್ರೆಂಡ್‌ ವಿಘ್ನೇಶ್ ಶಿವನ್ ಭಾಗಿಯಾಗಿರಲಿಲ್ಲ. ಆದರೂ, ಬರ್ತಡೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅವರ ಹುಟ್ಟುಹಬ್ಬದ ಪ್ರಯುಕ್ತ ನಿಜಾಲ್ ಚಿತ್ರತಂಡ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದರು.

ಇದೀಗ ಎರ್ನಾಕುಲಂನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಕುಂಚಾಕೊ ಬೊಬನ್ ಈ ಚಿತ್ರದಲ್ಲಿ ನಾಯಕರಾಗಿದ್ದು, ಜನ್ಮದಿನದ ವಿಶೇಷವಾಗಿ ನಯನತಾರ ನಟಿಸುತ್ತಿರುವ ‘ನೆಟ್ರಿಕಣ್’ ಚಿತ್ರದ ಟೀಸರ್ ರಿಲೀಸ್ ಆಗಿದೆ.

ಈ ಚಿತ್ರವನ್ನು ವಿಘ್ನೇಶ್ ನಿರ್ಮಿಸುತ್ತಿದ್ದು ವಿಘ್ನೇಶ್ ನಿರ್ದೇಶನದ ಚಿತ್ರದಲ್ಲಿ ನಯನತಾರಾ, ಸಮಂತಾ ಹಾಗೂ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ.

Related posts

ಮಂಗಳೂರು: ವಿಕಲಚೇತನ ಬಾಲಕಿಗೆ ನೆರವಾದ ಕಿಚ್ಚ ಸುದೀಪ್

Harshitha Harish

ತೆಲುಗು ಬಿಗ್ ಬಾಸ್ ನಲ್ಲಿ ಅತಿಥಿಯಾದ ಕಿಚ್ಚ ಸುದೀಪ್

Harshitha Harish

ತಿರುಪತಿ ತಿಮ್ಮಪ್ಪ ನ ಹರಕೆ ಈಡೇರಿಸಿ ದೇವರ ದರ್ಶನ ಪಡೆದ ನಟ ಸುಂದರ್ ರಾಜ್

Harshitha Harish