ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಗೋಕರ್ಣನಾಥೇಶ್ವರ ಕಾಲೇಜು: ಎನ್‌ಎಸ್‌ಎಸ್‌ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಮಂಗಳೂರು: ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷ ಶೇಖರ್ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ, ತಮ್ಮ ಕಾಲೇಜಿನ ದಿನಗಳ ಸೇವಾ ಯೋಜನೆಯ ಅನುಭವ ಹಂಚಿಕೊಂಡರು.

ಸಂಪನ್ಮೂಲ ವ್ಯಕ್ತಿ ಡಾ ಪಿ ದಯಾನಂದ ಪೈ-ಪಿ ಸತೀಶ್‌ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಶೇಷಪ್ಪ ಅಮೀನ್ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ, ಹಾಗೂ ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಎನ್‌ಎಸ್‌ಎಸ್‌ ಹೇಗೆ ಸಹಕಾರಿ ಎಂದು ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ರೇಣುಕಾ ಕೆ. ವಹಿಸಿದ್ದರು. ಯೋಜನಾಧಿಕಾರಿ ಯತೀನ್ ಸೂಟರ್‌ಪೇಟೆ ಸ್ವಾಗತಿಸಿದರು. ಮಿಥುನ್ ಆರ್ ಕೆ ವಂದಿಸಿದರೆ, ಚೈತ್ರ ಕಾರ್ಯಕ್ರಮ ನಿರೂಪಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಬಪ್ಪನಾಡು ಕ್ಷೇತ್ರಕ್ಕೆ ಸ್ವರ್ಣ ಪಲ್ಲಕಿ ವೈಭವದ ಮೆರವಣಿಗೆ: ನಾಳೆ ದೇವಿಗೆ ಸಮರ್ಪಣೆ

Upayuktha

‘ಸ್ವತಂತ್ರ ಯೋಚನೆ, ದೃಢ ನಿರ್ಧಾರದ ಗುಣ ವಿದ್ಯಾರ್ಥಿಗಳಲ್ಲಿರಬೇಕು’

Upayuktha

ಟ್ಯಾಕ್ಸೇಶನ್ ಫೆಸ್ಟ್ 2020: ಆಳ್ವಾಸ್ ಕಾಲೇಜಿನಲ್ಲಿ ತೆರಿಗೆ ಕುರಿತ ಜಾಗೃತಿ ಕಾರ್ಯಕ್ರಮ

Upayuktha