ನಿಟ್ಟೆ: ‘ಸಮಾಜದ ಏಳಿಗೆಯ ಪ್ರಕ್ರಿಯೆಯಲ್ಲಿ ನಮ್ಮ ಕೊಡುಗೆ ಯಾವರೀತಿಯಲ್ಲಿ ನೀಡಬಹುದು ಎಂಬುದನ್ನು ಪ್ರತಿಯೋರ್ವ ಮಾನವನೂ ಚಿಂತಿಸಿ ಬದುಕಬೇಕು. ರಾಷ್ಟ್ರೀಯ ಸೇವಾ ಯೋಜನೆಯ ಆಶಯದಂತೆ ಕೋವಿಡ್ನಂತಹ ಸಂದರ್ಭದಲ್ಲಿ ಸಾಮಾಜಿಕ ಜವಾಬ್ದಾರಿಯನ್ನರಿತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವುದು ಅಗತ್ಯವಿದೆ’ ಎಂದು ಎಸ್.ಡಿ.ಎಂ ಉಜಿರೆಯ ಭೌತಶಾಸ್ತ್ರ ವಿಭಗದ ಮುಖ್ಯಸ್ಥ ಹಾಗೂ ವಿಜ್ಞಾನ ವಿಷಯದ ಡೀನ್ ಶ್ರೀ ಶಶಿಶೇಖರ ಕಾಕತ್ಕರ್ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕವು ಸೆ.24 ರಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ 51 ನೇ ವರ್ಷದ ದಿನಾಚರಣೆಗೆ ಆನ್ಲೈನ್ ಚಾಲನೆ ನೀಡಿ ಮಾತನಾಡಿದರು. ‘ವಿದ್ಯಾರ್ಥಿಗಳು ಪಠ್ಯದಿಂದ ಹೊರತಾಗಿಯೂ ಇತಿಹಾಸ, ಸಾಹಿತ್ಯ, ಕಲೆ, ಆರ್ಥಿಕತೆಯೇ ಮೊದಲಾದ ವಿಷಯಗಳಲ್ಲಿ ಆಸಕ್ತಿಹೊಂದಿರಬೇಕು. ಎನ್.ಎಸ್.ಎಸ್ ನ ಅರ್ಥದಂತೆ ನಾವು ಪ್ರತೀ ಕಾರ್ಯಕ್ಕೂ ಸದಾಸಿದ್ಧರಿರಬೇಕು’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ‘ವಿದ್ಯಾರ್ಥಿಗಳಿಗೆ ಪಠ್ಯೇತರ ಜ್ಞಾನದ ಅಗತ್ಯತೆಯನ್ನು ಅರಿತು ಸರ್ಕಾರ ಇಂದಿನ ದಿನಗಳಲ್ಲಿ ಹಲವಾರು ಯೋಜನೆಗಳನ್ನು ಹೊರತಂದಿದೆ. ಹೊಸ ನಿರ್ದೇಶನಾನುಸಾರ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಗೊಳ್ಳುವ ವಿಷಯಕ್ಕೂ ಅಂಕಗಳನ್ನು ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಸಮಾಜದ ಅಭಿವೃದ್ಧಿ, ಸ್ವಚ್ಛತೆ, ಪ್ಲಾಸ್ಟಿಕ್ಮುಕ್ತ ಸಮಾಜ, ನೀರಿನ ಸಂರಕ್ಷಣೆಯ ಬಗೆಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಎನ್.ಎಸ್.ಎಸ್, ಎನ್.ಸಿ.ಸಿ, ಉನ್ನತ ಭಾರತ ಅಭಿಯಾನ, ಸ್ವಚ್ಛ ಭಾರತದಂತಹ ಪರಿಕಲ್ಪನೆಯನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ವರ್ಗ, ಪ್ರಾಧ್ಯಾಪಕರು, ಎನ್.ಎಸ್.ಎಸ್ ಘಟಕದ ಮುಖ್ಯಸ್ಥ ಡಾ.ಜನಾರ್ದನ ನಾಯಕ್, ವಿದ್ಯಾರ್ಥಿ ನಾಯಕ, ಕಾರ್ಯದರ್ಶಿ ಹಾಗೂ 100 ಮಂದಿ ಎನ್.ಎಸ್.ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎನ್.ಎಸ್.ಎಸ್ ವಿದ್ಯಾರ್ಥಿನಿ ಶ್ರೀವಾಣಿ ಬಾಯರಿ ಸ್ವಾಗತಿಸಿದರು. ವಿದ್ಯಾರ್ಥಿ ಕೌಶಿಕ್ ವಂದಿಸಿದರು. ವಿದ್ಯಾರ್ಥಿ ವಿನಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.