ಇತರ ಕ್ರೀಡೆಗಳು ದೇಶ-ವಿದೇಶ ನಿಧನ ಸುದ್ದಿ ಪ್ರಮುಖ

ಅರ್ಜೆಂಟೀನಾದ ಫುಟ್ ಬಾಲ್ ದಂತಕಥೆ ಡೀಗೋ ಮರಡೋನಾ ನಿಧನ

(ಚಿತ್ರ ಕೃಪೆ: ಡೇಲಿ ಮೇಲ್‌.ಕೊ.ಯುಕೆ)

ಬ್ಯೂನಸ್ ಐರಿಸ್:

ವಿಶ್ವ ಕಂಡ ಅದ್ಭುತ ಫುಟ್ ಬಾಲ್ ಆಟಗಾರ, ಫುಟ್ ಬಾಲ್ ದಂತಕಥೆ ಎಂದೇ ಪ್ರಸಿದ್ಧಿ ಪಡೆದಿರುವ ಅರ್ಜೆಂಟೀನಾ ದೇಶದ ಮಾಜಿ ಆಟಗಾರ ಡಿಗೊ ಮರಡೋನಾ ನಿಧನರಾಗಿದ್ದಾರೆ.

ಹಲವು ವರ್ಷಗಳಿಂದ ಅಸೌಖ್ಯದಿಂದಿರುವ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

15ನೇ ವಯಸ್ಸಿನಲ್ಲಿ ಮೆರಡೋನ ಅರ್ಜೆಂಟಿನೋಸ್ ಜೂನಿಯರ್ಸ್ ತಂಡದಲ್ಲಿ ಪಾದಾರ್ಪಣೆ ಮಾಡಿ 1976ರಿಂದ 1981ರವರೆಗೂ ಅಲ್ಲೇ ಆಡುತ್ತಿದ್ದರು.

ಅರ್ಜೆಂಟಿನಾ ರಾಷ್ಟ್ರೀಯ ಫುಟ್‍ಬಾಲ್ ತಂಡಕ್ಕೆ, ತಮ್ಮ ಹದಿನಾರನೇ ವಯಸ್ಸಿನಲ್ಲಿ, ಹಂಗೇರಿ ದೇಶದ ವಿರುದ್ಧ ಆಡುವುದರ ಮೂಲಕ ಪಾದಾರ್ಪಣೆ ಮಾಡಿದರು. ಆ ಬಳಿಕ ಅವರು ದೇಶದ ತಂಡದಲ್ಲಿ ಸ್ಥಾನ ಪಡೆದರು.

ಒಟ್ಟು ನಾಲ್ಕು ವರ್ಲ್ಡ್ ಕಪ್ ಸರಣಿಗಳಲ್ಲಿ ಭಾಗವಹಿಸಿ, 1986 ರಲ್ಲಿ ತಂಡದ ಮುಂದಾಳತ್ವವನ್ನು ವಹಿಸಿ ಅಂತಿಮ ಸುತ್ತಿನಲ್ಲಿ ಪಶ್ಚಿಮ ಜರ್ಮನಿಯನ್ನು ಸದೆಬಡಿದು, ಸರಣಿಯ ಶ್ರೇಷ್ಠ ಆಟಗಾರರೆಂದು “ಗೋಲ್ಡನ್ ಬಾಲ್” ಪ್ರಶಸ್ತಿಯನ್ನು ಪಡೆದಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ಹಿರಿಯ ನಟ ಎಚ್.ಜಿ. ಸೋಮಶೇಖರ ರಾವ್ ವಿಧಿವಶ

Harshitha Harish

ಯುನೆಸ್ಕೋ ಮಹಾಸಭೆ: ಅಯೋಧ್ಯೆ ತೀರ್ಪು, ಕಾಶ್ಮೀರ ವಿಚಾರದಲ್ಲಿ ಪಾಕ್ ಹಸ್ತಕ್ಷೇಪಕ್ಕೆ ಭಾರತ ತೀಕ್ಷ್ಣ ಖಂಡನೆ

Upayuktha

ಪ್ರಾಚೀನ ವೈಶಿಷ್ಟ್ಯತೆ ದಾಖಲಿಸಲು ಶೋಧ ಪ್ರಜ್ಞೆ ಅಗತ್ಯ: ಡಾ. ಡಿ. ವೀರೇಂದ್ರ ಹೆಗ್ಗಡೆ

Upayuktha