ಲೇಖನಗಳು

ನುಡಿನಮನ: ಭಾವಗೀತೆಗಳಿಗೊಂದು ಭದ್ರ ಬುನಾದಿ ಹಾಕಿದ ಡಾ. ಎನ್‌ಎಸ್‌ಎಲ್‌

ಮೂರು ದಿನಗಳ ಹಿಂದಷ್ಟೇ ಅಂಕಿತ ಪುಸ್ತಕದ ಪ್ರಕಾಶ ಕಂಬತ್ತಳ್ಳಿ ಮತ್ತು ನಾನು ಭಟ್ಟರ ಸಾಧನೆಗಳನ್ನು ಕುರಿತು ಮಾತನಾಡಿದ್ದೆವು. ಕಾವ್ಯ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಕ್ಷೇತ್ರಗಳಿಗೆ ಅವರ ಕೊಡುಗೆಗಳು ಅನನ್ಯ. ಅವರ ಕೊಡುಗೆಗೆ ತಕ್ಕಂತಹ ಸ್ಥಾನಮಾನಗಳನ್ನು ಸಾರಸ್ವತ ಲೋಕದಲ್ಲಿ ದಕ್ಕಿಸಿಕೊಂಡವರಲ್ಲ. “ಬಾಳ ಒಳ್ಳೇವ್ರು ನಮ್ ಮಿಸ್ಸು” ಎಂದು ಮೇಡಂಗಳಿಗೆ ಒಳ್ಳೇವ್ರು ಎಂಬ ಪಟ್ಟ ಕಟ್ಟಿದ್ದವರು ನೈಶಿಲ ಭಟ್ಟರು.

ಅವರು “ಬಂದೇ ಬರತಾವ ಕಾಲ” ಎಂದು ಭರವಸೆ ತಳೆದಿದ್ದವರು. ಅವರು ಪ್ರಕಾಶಕರೂ ಆಗಿದ್ದರು. ಪುಸ್ತಕ, ಧ್ವನಿಸುರುಳಿ ಹೊತ್ತು ತಿರುಗಿ ಬಿಂಕವಿಲ್ಲದೆ ಮಾರಿದ್ದರು. 10 ಜನ ಹಿರಿಯ ಕವಿಗಳ ವಾಚನದ ಧ್ವನಿಸುರುಳಿ ನಿರ್ಮಿಸಿ ಕಾಪಿಟ್ಟವರು. ಭಾವಗೀತೆಗಳಿಗೊಂದು ಭದ್ರ ಬುನಾದಿ ಹಾಕಿದ್ದರು.

ಗಾಢವಾದ ಜೀವನ ಪ್ರೀತಿಯನ್ನು ತಮ್ಮ ಮಾತು ಮತ್ತು ಮುನಿಸಿನ ಮೂಲಕ ಅನಾವರಣಗೊಳಿಸುತ್ತಿದ್ದ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಇನ್ನಿಲ್ಲವಾಗಿದ್ದಾರೆ. ಅವರ ಅಗಲಿಕೆಯಿಂದಾಗಿ ಕನ್ನಡದ ವಿದ್ವತ್ ಪರಂಪರೆಯ ಕೊಂಡಿಯೊಂದು ಕಳಚಿದೆ. ಅವರು ಹೊಸ ಹೊಸ ಬಯಕೆಗಳ ಹರಿಕಾರರಾಗಿದ್ದರು.

ನಂದನ, ಕಿನ್ನರಿ ಧ್ವನಿಸುರುಳಿಗಳ ಮೂಲಕ ಮಕ್ಕಳ ಪ್ರೀತಿಯನ್ನು ಗಳಿಸಿದ್ದ ‘ಭಟ್ಟು ಮಾಮ’ರ ಕಣ್ಮರೆಯಿಂದಾಗಿ ಪ್ರೀತಿಯ ಕನಸೆಲ್ಲ ಕರಗಿಹೋದಂತಾಗಿದೆ. ಜೀವ ಮೂಕವಾಗಿ; ಭಾವ ತೂಕ ತಪ್ಪಿದಂತಾಗಿದೆ. ಮುಖ್ಯವಾಗಿ ಒಂದು ದಿನವೂ ತರಗತಿಯನ್ನು ತಪ್ಪಿಸದೆ ಹಾಜರಾಗುತ್ತಿದ್ದ ವಿದ್ವನ್ಮಣಿ ಪ್ರಾಧ್ಯಾಪಕರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

– ಕೆ. ರಾಜಕುಮಾರ್, ಬೆಂಗಳೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

 

Related posts

ಭೂಮಿ ಆಗದಿರಲಿ ಪ್ಲಾಸ್ಟಿಕ್ ತ್ಯಾಜ್ಯಗಳ ತೊಟ್ಟಿ**

Harshitha Harish

ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು: ಈ ಸಾವುಗಳಿಗೆ ಕೊನೆ ಇಲ್ಲವೆ?

Upayuktha

ನಮ್ಮ ದೇಶದ ಸಂವಿಧಾನದಲ್ಲಿ ಲೋಪಗಳಿವೆಯೇ?

Upayuktha