ಜಿಲ್ಲಾ ಸುದ್ದಿಗಳು ಸಮುದಾಯ ಸುದ್ದಿ

*ಮಂಗಳೂರು ಕುಲಾಲ ಭವನದ ತಳ ಮಹಡಿ ಲೋಕಾರ್ಪಣೆ*

ಮಂಗಳೂರು: ಮಂಗಳೂರಿನ ಮಂಗಳಾದೇವಿ ಸಮೀಪ ಮುಂಬಯಿ ಕುಲಾಲ ಸಂಘದ ಒಡೆತನದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕುಲಾಲ ಭವನದ ತಳ ಮಹಡಿಯು ಆ. 23ರಂದು ಲೋಕಾರ್ಪಣೆಗೊಂಡಿತು.

ಕುಲಾಲ ಭವನದ ತಳ ಮಹಡಿಯಲ್ಲಿ ಸುಂದರ್ ಕೆ ಗೌಡ ಅವರ ಮಾಲೀಕತ್ವದ ಗುಡ್ ಲೈಫ್ ಫರ್ನಿಚರ್ ಷೋ ರೂಮ್ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು.

ಮುಂಬಯಿ ಮಹಾನಗರದಲ್ಲಿ ಸುಮಾರು 90 ವರ್ಷಗಳ ಇತಿಹಾಸವನ್ನು ಹೊಂದಿರುವ ಕುಲಾಲ ಸಂಘ ಮುಂಬಯಿ ಸುಮಾರು ಇಪ್ಪತೈದು ವರ್ಷಗಳ ಹಿಂದೆ ಮಂಗಳೂರಿನ ಮಂಗಳಾದೇವಿ ಸಮೀಪ ಕುಲಾಲ ಭವನವನ್ನು ನಿರ್ಮಾಣ ಮಾಡಲಾಗಿತ್ತು.

ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ಮಂಗಳೂರು ಮಹಾನಗರಕ್ಕೆ ಸುಸಜ್ಜಿತವಾದ ಸಭಾಂಗಣದ ಅಗತ್ಯವಿದ್ದುದನ್ನು ಗಮನಿಸಿ ಆರು ವರ್ಷಗಳ ಹಿಂದೆ ದಿ. ಪಿ ಕೆ ಸಾಲ್ಯಾನ್ ಅವರ ಅಧ್ಯಕ್ಷೀಯ ಅವಧಿಯಲ್ಲಿ 4 ಅಂತಸ್ತಿನ ವಿಶಾಲವಾದ ಸಂಕೀರ್ಣವನ್ನು ನಿರ್ಮಿಸಿ ಅದರಲ್ಲಿ 1000 ಕ್ಕೂ ಮಿಕ್ಕಿ ಆಸನವಿರುವ ಸಭಾಗೃಹವನ್ನು ನಿರ್ಮಾಣದ ಯೋಜನೆ ಕಾರ್ಯರೂಪಕ್ಕೆ ತರಲಾಯಿತು.

ಕಳೆದ ನಾಲ್ಕು ತಿಂಗಳಿಂದ ಸರಕಾರದ ನಿಯಮದಂತೆ ಕಟ್ಟಡ ನಿರ್ಮಾಣದ ಕೆಲಸ ಸ್ಥಗಿತ ಗೊಂಡಿತ್ತು. ಮುಂದಿನ ತಿಂಗಳಿನಿಂದ ಸಭಾಭವನದ (Auditorium) ಕೆಲಸಗಳು ಪ್ರಾರಂಭಗೊಳ್ಳಲಿದೆ. ಇದು ಮುಂದಿನ ವರ್ಷ ಕೊನೆಯಲ್ಲಿ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ.

ಪ್ರಸ್ತುತ 13600 ಚದರ ಅಡಿ ವಿಸ್ತೀರ್ಣದ ಪ್ರಥಮ ಮಹಡಿ ವಾಣಿಜ್ಯ ಮಳಿಗೆಗಳಿಗಾಗಿ ಸಂಪೂರ್ಣ ಸಿದ್ಧಗೊಂಡಿದ್ದು ಆಸಕ್ತಿ ಇರುವವರು ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಸಿಇಟಿ: ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆಗೆ ನೋಂದಾಯಿಸಿ: ಉಡುಪಿ ಡಿಸಿ

Upayuktha

ಮಂಚಿ ಶ್ರೀನಿವಾಸ್‌ ಆಚಾರ್ ಜಾಗತಿಕ ಬದಲಾವಣೆಗೆ ತಕ್ಷಣ ಸ್ಪಂದಿಸುತ್ತಿದ್ದ ಉತ್ಸಾಹಿ ಕೃಷಿಕ: ಎಸ್‌ ಆರ್‌ ಸತೀಶ್ಚಂದ್ರ

Upayuktha

ದಕ ಜಿಲ್ಲೆಯ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯರಾಗಲು ಅರ್ಜಿ ಆಹ್ವಾನ

Upayuktha

Leave a Comment

error: Copying Content is Prohibited !!