ಕತೆ-ಕವನಗಳು

*ಓಲೆಯೊಂದು ದೇವಗೆ*

ದಿನ ಬದಲಾದಂತೆ ಜನ ಬದಲಾಗುವ


ತನ್ಮಯತೆಯ ರಸಧಾರೆಯ ಭೂರಮೆಯಲಿ
ಅಂಕು ಡೊಂಕುಗಳ ಬಲಪಡಿಸಿ ಸಮನಿಸಲು
ನಿಷ್ಕಳಂಕ ಮನದಲಿಂದು ಆಸಿನಗೊಂಡು
ಶ್ವೇತ ಓಲೆಯ ಕರದೊಳ್ಹಿಡಿದಿರುವೆ
ಭಗವಂತಂಗೆ ಪತ್ರ ಬರೆಯಲೋಸುಗವಾಗಿ

ಕುಳಿತಾಕ್ಷಣ ಸಾಲು ಹೊದ್ದು ಮಲಗಿದಂತಿಹೆ
ಅನ್ಯಾಯದ ಪಲವು ದಾರಿಗಳೆಲ್ಲವೂ
ಯಾವುದನ್ನು ಬರೆಯುವುದೋ ನಾ ಕಾಣೆ
ಮಿತಿ ಓಲೆಯೇ… ಹರಿಯುವಂತಾಗಿದೆ
ಆರ್ದ್ರತೆಯಲಿ ತುಳುಕಿ, ಹಿಡಿತವ ತೊರೆದು
ಕನಸಲ್ಲೇ ಕಾಣಬೇಕಷ್ಟೇ ಭವಿಷ್ಯದ ಗಾಡಿ

ಬಡತನದ ಬೇಗೆಯಲಿ ಮಿಂದುಣ್ಣುವವರ
ಸ್ವಪ್ನಗಳೆಲ್ಲವೂ ಧ್ವಂಸವಾಗುತಲಿಹುದು
ಅಹಂಕಾರಿ ಧನವಂತರ ಕೆಡುಕಿನಮಲಿಗೆ ;
ಗತ್ತು ಗಾಂಭೀರ್ಯ ನಶಿಸದಿದ್ದರೆ ಭವಿಷ್ಯದಿ
ಮಸಿ ಮೆತ್ತಿದ ಮುಸುಡಿ ತಲೆದೋರುಹುದು
ಖುದ್ದು ಪುಟ್ಟ ಕರಿ ಚುಕ್ಕೆಯ ಬದಲಿಗೆ

ಒಂದೆಡೆ ಮಿಸುಕಿದರೆ ಲಂಚಗುಳಿತನ
ಮದಗಂಚಲಿ ಕವಿದಿಹ ಅಂಧಕಾರ
ಅನಾಚಾರ,ಅಧಿಕಾರ ಮೋಹ-ದ್ರೋಹ
ಧರ್ಮದ ನಾಮದಿ ಭರಸಿನ ಗಲಭೆ
ಆಳಕ್ಕಿಳಿದಷ್ಟೂ ಸಮಸ್ಯೆ-ಸವಾಲುಗಳಾಗರ
ಎನಿಸಿದರೆ ತುತ್ತೂ ಸೇರದು ಓಗರ ಉದರ

ಎಂದಾದರೊಮ್ಮೆ ಅಶರೀರದಿ ಬಂದುಬಿಡು
ಸುಳಿಸಿಲುಕಿಹರ ಅಭಯ ರಕ್ಷಕನಾಗಿ
ಪೊಳ್ಳು ನಡತೆಗಳ ಬಸಿರು ಬಗೆಯಲು;
ಕಾತುರದಿ ಇಹೆನಿನ್ನನು ಕಾಣಲೊಮ್ಮೆ
ಪತ್ರದಿ ಬಿರಿದತ್ತರೂ ನಿನಗದು ಕಾಣದು
ನಿಯತಿಯ ಬರಹಗಾರನೇ ನೀನಲ್ಲವೇ ?

✏️ *ಸಮ್ಯಕ್ತ್ ಜೈನ್_ಕಡಬ*
9632662818

Related posts

ಕವನ: ವೈದ್ಯೋ ನಾರಾಯಣೋ ಹರಿ

Upayuktha

ನೀ(ನಾ)ನು

Harshitha Harish

*ಕಾತ್ಯಾಯನಿ*

Harshitha Harish