ಪ್ರಮುಖ ರಾಜ್ಯ

ಸೆ.28ರಂದು ಎಡನೀರು ಮಠದ ಉತ್ತರಾಧಿಕಾರಿ ಶ್ರೀಶ್ರೀಶ್ರೀ ಸಚ್ಚಿದಾನಂದ ಭಾರತೀ ಪೀಠಾರೋಹಣ

ಕಾಸರಗೋಡು: ಇತ್ತೀಚೆಗೆ ಹರಿಲೀನರಾದ ಎಡನೀರು ಮಠಾಧೀಶ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡಿರುವ ಶ್ರೀಶ್ರೀಶ್ರೀ ಸಚ್ಚಿದಾನಂದ ಭಾರತೀ ಅವರ ಪೀಠಾರೋಹಣ ಕಾರ್ಯಕ್ರಮ ಸೆ.28ರಂದು ಸೋಮವಾರ ನಡೆಯಲಿದೆ.

ಕೇಶವಾನಂದ ಶ್ರೀಗಳು ಮುಕ್ತಿ ಹೊಂದಿದ ದಿನದಂದೇ ಸಂಜೆ ಜಯರಾಮ ಮಂಜತ್ತಾಯರನ್ನು ಉತ್ತರಾಧಿಕಾರಿಯಾಗಿ ಶ್ರೀಶ್ರೀಶ್ರೀ ಸಚ್ಚಿದಾನಂದ ಭಾರತೀ ನಾಮಧೇಯದೊಂದಿಗೆ ನಿಯುಕ್ತಿಗೊಳಿಸಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿತ್ತು.

ಕೇಶವಾನಂದ ಶ್ರೀಗಳು ತಾವು ಮುಕ್ತಿ ಹೊಂದುವುದಕ್ಕಿಂತ ಕೆಲ ಹೊತ್ತುಗಳ ಮುನ್ನ 50ರ ಹರೆಯದ ಜಯರಾಮ ಮಂಜತ್ತಾಯರನ್ನು ಬಳಿ ಕರೆದು, ಪೀಠ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವಂತೆ ತಲೆ ಮೇಲೆ ಕೈ ಇಟ್ಟು ಆಶೀರ್ವಸಿದ್ದರು.  ಈ ಮೂಲಕ ಜಯರಾಮ ಮಂಜತ್ತಾಯರು ಸ್ವತಃ ಗುರುಗಳಿಂದಲೇ ಎಡನೀರು ಮಠಾಧೀಶರಾಗಿ ನಿಯುಕ್ತಿಗೊಂಡರು.

ಎಡನೀರು ಮಠದ ಪರಂಪರೆ ಪ್ರಕಾರವಾಗಿ, ಸೆ.6ರಂದು ಭಾನುವಾರ ಸಂಜೆ ಶ್ರೀ ಮಠದ ಶಿಷ್ಯವರ್ಗವಾಗಿರುವ ಕಾಮಠದವರು, ಕೆದಿಲಾಯ, ಕಕ್ಕಿಲಾಯ, ಮಂಜತ್ತಾಯ, ಕುಣುಕುಲ್ಲಾಯ, ಎರ್ನೂರಾಯ ಹೀಗೆ ಆರು ಶಿವಳ್ಳಿ ಮನೆತನಗಳ ಹಿರಿಯರು ಸಭೆ ಸೇರಿ ಶ್ರೀಮಠದ ಉತ್ತರಾಧಿಕಾರಿಯಾಗಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಅವರನ್ನು ಅಧಿಕೃತವಾಗಿ ಘೋಷಿಸಲಾಯಿತು. ಮಂಜಿತ್ತಾಯ ಕುಟುಂಬದವರೇ ಮಠಾಧೀಶರಾಗುವುದು ಎಡನೀರು ಪೀಠದ ಪರಂಪರೆಯಾಗಿದೆ.

ಎಡನೀರು ಮಠದ ಪರಂಪರೆಯ ಪ್ರಕಾರ, ಸಚ್ಚಿದಾನಂದ ಭಾರತೀ, ಬಾಲಕೃಷ್ಣಾನಂದ ಭಾರತೀ, ಈಶ್ವರಾನಂದ ಭಾರತೀ ಹಾಗೂ ಕೇಶವಾನಂದ ಭಾರತೀ ಎಂಬ ನಾಲ್ಕು ಹೆಸರುಗಳನ್ನು ಪರ್ಯಾಯವಾಗಿ ಮಠಾಧೀಶರಿಗೆ ಇಡಲಾಗುತ್ತದೆ. ಇದೀಗ ಕೇಶವಾನಂದ ಭಾರತೀ ಅವರ ನಂತರ ಸಚ್ಚಿದಾನಂದ ಭಾರತೀ ಶ್ರೀಗಳು ಪೀಠವನ್ನು ಮುನ್ನಡೆಸಲಿದ್ದಾರೆ.

ದಕ್ಷ ಆಡಳಿತಾಧಿಕಾರಿಯಾಗಿ ಹೆಸರುವಾಸಿ

ಜಯರಾಮ ಮಂಜತ್ತಾಯರು ಮೂಲತಃ ಕೆದಿಲಾಯ ಮನೆತನದವರು. ಕೇಶವಾನಂದ ಶ್ರೀಗಳ ಪೂರ್ವಾಶ್ರಮದ ಸಹೋದರಿ ಸಾವಿತ್ರ-ನಾರಾಯಣ ಕೆದಿಲಾಯ ದಂಪತಿಗಳ ಸುಪುತ್ರ. ಎಳವೆಯಲ್ಲೇ ಜಯರಾಮ ಅವರನ್ನು ಕೇಶವಾನಂದ ಶ್ರೀಗಳ ತಾಯಿ ದತ್ತು ತೆಗೆದುಕೊಂಡು ಮಂಜಿತ್ತಾಯ ಕುಟುಂಬಕ್ಕೆ ಸೇರ್ಪಡೆಗೊಳಿಸಿದ್ದರು.

10ನೇ ತರಗತಿ ವರೆಗೆ ವಿದ್ಯಾಭ್ಯಾಸ ಎಡನೀರು ಮಠದ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ ಜಯರಾಮ ಮಂಜತ್ತಾಯರು ಬಳಿಕ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿಕಾಂ ಶಿಕ್ಷಣ ಪಡೆದರು.

ಬಳಿಕ ಕೇಶವಾನಂದ ಶ್ರೀಗಳ ಪರಿವಾರದ ಶಿಷ್ಯರೊಬ್ಬರಾಗಿ ವರ್ಷಗಳ ಕಾಲ ಸೇವೆ ಸಲ್ಲಿಸಿ ಮಠದ ಪೂಜಾ ವಿಧಿವಿಧಾನಗಳನ್ನು ಸಮೀಪದಿಂದ ಕಂಡರು. ಋಗ್ವೇದ ಹಾಗೂ ಯಜುರ್ವೇದ ಹೀಗೆ ಎರಡೂ ವೇದ ಶಾಖೆಗಳ ಪ್ರಾಥಮಿಕ ಶಿಕ್ಷಣವನ್ನು ಇವರು ಪೂರೈಸಿದ್ದಾರೆ.

ಬಳಿಕ ಮಠದ ಆಡಳಿತಾಧಿಕಾರಿಯಾಗಿ ಮಠದ ಸಂಪೂರ್ಣ ಉಸ್ತುವಾರಿಯನ್ನು ಕಳೆದೊಂದು ದಶಕದಿಂದ ಸಮರ್ಥವಾಗಿ ನಿಭಾಯಿಸಿಕೊಂಡು ಬರುತ್ತಿದ್ದರು. ಶ್ರೀಮಠದ ಪ್ರತಿಯೊಂದು ಕಾರ್ಯಕ್ರಮಗಳ ಬೆನ್ನುಲುಬಾಗಿ ದುಡಿದವರು ಇವರು. ಅತ್ಯಂತ ದಕ್ಷ ಹಾಗೂ ಚುರುಕಿನ ಆಡಳಿತದಿಂದ ಶ್ರೀ ಮಠವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯುವಲ್ಲಿ ಇವರ ಪಾತ್ರ ಅಪಾರವಾಗಿದೆ ಎಂಬುದು ಇವರ ನಿಕಟವರ್ತಿಗಳ ಅಭಿಮತವಾಗಿದೆ.

ಎಡನೀರು ಮೇಳದ ಹೊಣೆಗಾರಿಕೆ ಹೊತ್ತು ಯಕ್ಷಗಾನದ ಕಲಾ ಪೋಷಣೆಯ ಕಾರ್ಯವನ್ನೂ ತುಂಬಾ ಕಾಳಜಿಯಿಂದ ನೋಡಿಕೊಂಡಿದ್ದರು. ಎಡನೀರು ಮಠದ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೊತ್ತು, ಶಾಲೆ ಹಾಗೂ ಪ್ಲಸ್ 2 ಕಾಲೇಜುಗಳ ಜವಾಬ್ದಾರಿ ಹೊತ್ತಿದ್ದರು.

ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ಅದರ ಸದಸ್ಯರಾಗಿದ್ದಾರೆ.

ಸೆ.28ರಂದು ಎಡನೀರು ಮಠದ ಉತ್ತರಾಧಿಕಾರಿ ಶ್ರೀಶ್ರೀಶ್ರೀ ಸಚ್ಚಿದಾನಂದ ಭಾರತೀ ಪೀಠಾರೋಹಣ

 

ಸ್ಮರಣಾಂಜಲಿ: ಭಾಗವತೋತ್ತಮ “ಭಾಗವತ” ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಜಿಎಸ್‌ಟಿ ಹೊಸ ನಮೂನೆ ತರಬೇತಿ ಕಾರ್ಯಾಗಾರ: ವೇಳಾಪಟ್ಟಿ ಇಲ್ಲಿದೆ ನೋಡಿ

Upayuktha

ಬೆಳೆ ನಾಶಕ ಮಿಡತೆಗಳ ನಿಯಂತ್ರಣಕ್ಕೆ ಸುಲಭ ಸಾಧ್ಯ, ಸಾವಯವ ಪ್ರಯೋಗ

Upayuktha

ಗಾಂಧೀಜಿ 150ನೇ ಜನ್ಮದಿನಾಚರಣೆ: ಬಾಪೂಜಿಗೆ ರಾಷ್ಟ್ರದ ಭಾವಪೂರ್ಣ ನಮನ

Upayuktha

Leave a Comment

error: Copying Content is Prohibited !!