ಲೇಖನಗಳು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-1

ನಾನು’ ಯಾರು? ‘ನಾನು’ ಈ ಭೂಮಿಯ ಮೇಲೆ ಬಂದ ಸರಿಯಾದ ಸಮಯ, ಸ್ಥಳ, ತಂದೆ, ತಾಯಿಯ ಗುಣಗಳನ್ನು ನಾವು ಸರಿಯಾಗಿ ತಿಳಿದುಕೊಂಡಿರುವೆವೇ? ‘ನನಗೆ’ ಇರುವ ಕೋಪವೆಷ್ಟು? ತಾಳ್ಮೆಯ ಪ್ರಮಾಣವೆಷ್ಟು? ಕೆಟ್ಟ ಗುಣಗಳು ಎಷ್ಟು? ‘ನನ್ನ’ ಯಾವ ಕೆಟ್ಟ ಗುಣದಿಂದ ಪರರಿಗೆ ತೊಂದರೆಯಾಗಿದೆ? ನಾನದನ್ನು ಹೇಗೆ ತ್ಯಜಿಸಬಹುದು? ನನ್ನ ಕೆಟ್ಟ ಗುಣಗಳಿಂದ ನನ್ನ ಆರೋಗ್ಯದ ಮೇಲೆ, ಆರ್ಥಿಕತೆಯ ಮೇಲೆ ಆದ ತೊಂದರೆಗಳು ಯಾವುವು? ನನ್ನ ದುರ್ಗುಣಗಳು ನನ್ನ ಕುಟುಂಬ ವರ್ಗದವರು, ಬಾಳ ಸಂಗಾತಿ, ಬಂಧುಗಳು, ಮಕ್ಕಳ ಮೇಲೆ ಯಾವ ರೀತಿಯ ಪ್ರಭಾವ ಬೀರಿವೆ? ನನ್ನ ದುರ್ಗುಣಗಳಿಂದ ಇತರರು ನನ್ನನ್ನು ಹೇಗೆ ಕಾಣುತ್ತಾರೆ?


    ಸಮಾಜದಲ್ಲಿ ನನಗೊಂದು ಉತ್ತಮ ಸ್ಥಾನಮಾನ ಸಿಗಬೇಕಾದರೆ ನಾನೇನು ಮಾಡಬೇಕು, ನನ್ನಲ್ಲಿರುವ ಕೀಳರಿಮೆ ಯಾವುದು? ನನ್ನ ಯಾವ ಗುಣಗಳು ನನಗಿಷ್ಟ? ನನ್ನ ಯಾವ ಗುಣಗಳು ನನಗಿಷ್ಟವಿಲ್ಲ, ನನ್ನ ಬದುಕಿನ ಬಗ್ಗೆ ನಾನೆಂದಾದರೂ ಯೋಚಿಸಿರುವೆನಾ? ದೇವರನ್ನು ನಾನೆಷ್ಟು ನಂಬುತ್ತೇನೆ? ನನ್ನ ಬಗುಕಿನಲ್ಲಿ ದೇವರ ಪಾತ್ರವೇನು? ನಾನು ಇಚ್ಛಿಸಿದ್ದನ್ನು ಪಡೆಯಲು ನಾನೇನು ಮಾಡಬೇಕು? ನಾನು ಹೋಗುತ್ತಿರುವ ದಾರಿ ಸರಿಯಿದೆಯೇ? ನನ್ನ ಮುಂದಿನ ಜನ್ಮ ಉತ್ತಮವಾಗಿರಲು ನಾನು ಈ ಜನ್ಮದಲ್ಲಿ ಮಾಡಿರುವ ಒಳ್ಳೆಯ ಕಾರ್ಯಗಳೆಷ್ಟು? ಮುಂದಿನ ನನ್ನ ಜನ್ಮ ಕೆಟ್ಟದಾಗಲು ನಾನು ಮಾಡಿದ ಮೋಸ, ಜಗಳ, ಕೋಪ, ಹಿಂಸೆ, ಕೊಲೆ(ಪ್ರಾಣಿ, ಪಕ್ಷಿ, ಕೀಟಗಳನ್ನೂ ಸೇರಿಸಿ), ನೋವುಗಳೆಷ್ಟು?
   ನನ್ನತನವೇನು? ಜಗತ್ತಿನಲ್ಲಿ ಯಾರಲ್ಲೂ ಇರದ, ನನ್ನಲ್ಲಿ ಮಾತ್ರ ಇರುವ ವಿಶೇಷವಾದ ಗುಣ ಯಾವುದು, ನಾನ್ಯಾಕೆ ಸ್ಪೆಶಲ್? ಜನ ನನ್ನನ್ನು ತುಂಬಾ ಇಷ್ಟಪಡಲು ನನ್ನಲ್ಲಿರುವ ಯಾವ ಗುಣ ಸಹಕಾರಿ? ಜನ ನನ್ನ ಹೊಗಳುತ್ತಾರೆ ಏಕೆ? ಜನರು ನನ್ನ ನೋಡಿ ಹೆದರಲು ಕಾರಣವೇನು? ಪರರನ್ನು ಹೆದರಿಸಿ ನಾನು ಬದುಕುವುದು ಎಷ್ಟು ಸರಿ? ನನ್ನನ್ನು ಜನ ದ್ವೇಷಿಸಲು ನನ್ನಲ್ಲಿರುವ ಆ ದುಷ್ಟ ಗುಣಗಳು ಯಾವುವು? ನನಗೆ ಶತೃಗಳು ಹೆಚ್ಚಾಗಲು ಕಾರಣವೇನು? ನನಗೆ ಸರಿಯಾದ ಸ್ನೇಹಿತರು ಏಕೆ ಸಿಗುತ್ತಿಲ್ಲ? ನನ್ನ ಸ್ನೇಹಿತರು ನನಗೇನ ಏಕೆ ಮೋಸ ಮಾಡುತ್ತಾರೆ? ಬದುಕಿನಲ್ಲಿ ನನಗಿರುವ ಕಷ್ಟ ಪರರಿಗೆ ಏಕಿಲ್ಲ? ನನ್ನ ಕಷ್ಟದ ಸಮಯವನ್ನು ನಾನು ಹೇಗೆ ನಿಭಾಯಿಸಬಹುದು? ನನ್ನ ಕಷ್ಟದ ಸಮಯದಲ್ಲಿ ಯಾರಿಂದ ಸಹಾಯ ಪಡೆಯಬಹುದು? ನಾನು ಯಾರ ಯಾರ ಕಷ್ಟಕ್ಕೆ ಸ್ಪಂದಿಸಬಹುದು? ನಾನು ಚೆನ್ನಾಗಿದ್ದೇನೆ ಹೇಗೆ? ನನ್ನ ಮನಸನ್ನು ಉನ್ನತ ಆಲೋಚನೆಗಳಲ್ಲಿ ಲೀನಗೊಳಿಸುವುದು ಹೇಗೆ? ಬದುಕಿನಲ್ಲಿ ಒಳ್ಳೆಯ ಮಾರ್ಗದಲ್ಲೆ ನಡೆದು ಜೀವನವನ್ನು ಸಕ್ಸಸ್ ಮಾಡಿಕೊಳ್ಳುವುದು ಹೇಗೆ? ಬದುಕು ಬರಡಾಗದಂತೆ ಮಾಡುವುದು ಹೇಗೆ? ನನ್ನ ಜೀವನವನ್ನು ಸಂತಸಮಯವಾಗಿ ಕಳೆಯಲು ನಾನು ಹೇಗೆ ರೂಪಿಸಿಕೊಳ್ಳಬೇಕು? ಹಲವರಿಗೆ ನನ್ನಿಂದಾಗಿ ಸಂತಸವನ್ನು ನಾನು ಹೇಗೆ ಕೊಡಬಲ್ಲೆ? ಮೋಸದ ಈ ಸಮಾಜದಲ್ಲಿ ನಾನು ಯಾರಿಗೂ ಮೋಸ ಮಾಡದೆ ಉತ್ತಮ ಬಾಳು ನಡೆಸಲು ಸಾಧ್ಯವೇ ಇಲ್ಲವೇ? ಯಾಕೆ ನಾನು ಹಣ ಕಲೆ ಹಾಕಿ ಈ ಸಣ್ಣ ಬಾಳುವೆಯಲ್ಲಿ ಅದೇನನ್ನು ಸಾಧಿಸಬಹುದು? ನನ್ನ ಜೀವಿತಾವಧಿಯಲ್ಲಿ ನಾನು ಮಾಡಿರುವ ಪಾಪಗಳನ್ನು ನೋಡಿದ ದೇವರು ಮುಂದೆ ನನಗೆ ಅದ್ಯಾವ ಶಿಕ್ಷೆ ವಿಧಿಸಬಹುದು? ದೇವರೇ ಇಲ್ಲವೆಂದರೆ ನಮ್ಮ ನಡೆಸುವ ಪ್ರಕೃತಿಯೂ ಒಂದು ಶಕ್ತಿಯೇ ಅಲ್ಲವೇ? ಎಷ್ಟೇ ಮೆರೆದರೂ ಆರೋಗ್ಯ ಕೈ ಕೊಟ್ಟರೆ, ಉಸಿರು ನಿಂತರೆ ಮುಂದೇನಿದೆ? ನಾನು ಎನ್ನುವ ಉಸಿರಾಡುವ, ಚಲಿಸುವ ಈ ಜೀವಿಯ ಹೆಸರು ಅಜರಾಮರವಾಗಿ ಉಳಿಯಲು ನಾನೇನೂ ಮಾಡಲಾರೆನೇ? ನಿಮ್ಮ ಜೀವನದಲ್ಲಿ ಈ ರೀತಿಯ ಹಲವು ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಳ್ಳದೆ ಬದುಕಿದರೆ ನಿಮ್ಮ ಬದುಕು ವ್ಯರ್ಥ ಮತ್ತು ನಿಮ್ಮ ಬಾಳಲ್ಲಿ ನಿಮಗೆ ನೀವೇ ಸಮಯ ಕೊಡದಿದ್ದರೆ ಇಂಪ್ರೂವ್ ಮೆಂಟ್ ಶೂನ್ಯ. ಹಾಗಾಗಿ ನಿಮ್ಮ ಬಗ್ಗೆ ಯೋಚಿಸಲು ನಿಮ್ಮದೇ ಮನಸ್ಸಿಗೊಂದಿಷ್ಟು ಸಮಯ ನೀಡಿ. ನಿಮ್ಮ ಮೆದುಳೆಂಬ ಆ್ಯಪನ್ನು ಆಗಾಗ ಅಪ್ಡೇಡ್ ಮಾಡಿಕೊಳ್ಳುತ್ತಿರಬೇಕಲ್ಲವೇ? ನೀವೇನಂತೀರಿ?

ಬರಹ: ಪ್ರೇಮ್ ಉದಯಕುಮಾರ್

Related posts

ದಂತ ಕುಳಿಗೂ ಬಂತು ಬ್ರಹ್ಮಾಸ್ತ್ರ

Upayuktha

ವಿಶ್ವ ಸಂಸ್ಕೃತ ದಿನದ ವಿಶೇಷ ಕೊಡುಗೆ: ಜೇನಿನ ಹೊಳೆಯೋ…. ಹಾಲಿನ ಮಳೆಯೋ…. ಆಲಿಸಿ ಈಗ ಸಂಸ್ಕೃತದಲ್ಲಿ

Upayuktha

ಅಂತರಂಗದ ಚಳವಳಿ: ಅಸಲಿ-ನಕಲಿಗಳ ನಡುವೆ ನರಳುತ್ತಿದ್ದಾಳೆ ಭಾರತ ಮಾತೆ….

Upayuktha