ಅಪಘಾತ- ದುರಂತ ದೇಶ-ವಿದೇಶ

ಮುಂಬೈ ಮೆಟ್ರೋ ಪಿಲ್ಲರ್ ಗೆ ಕ್ರೇನ್ ಡಿಕ್ಕಿ; ಓರ್ವ ಮಹಿಳೆ ಸಾವು ,ಇಬ್ಬರಿಗೆ ಗಾಯ

ಮುಂಬೈ: ನಗರದ ಇಲ್ಲಿನ ಮೆಟ್ರೋ ಪಿಲ್ಲರ್ ಗೆ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮದಿಂದ ಈ ಅಪಘಾತದಲ್ಲಿ ಓರ್ವ ಮಹಿಳೆ ಸಾವಿಗೀಡಾಗಿದ್ದು, ಎರಡು ಮಂದಿಗೆ ಗಾಯಗಳಾಗಿವೆ.

ಶನಿವಾರ ಮುಂಜಾನೆ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಜೊಗೇಶ್ವರಿಯಿಂದ ಬಾಂದ್ರಾಗೆ ತೆರಳುತ್ತಿದ್ದ ಮೆಟ್ರೋ ಕ್ರೇನ್ ನಿಯಂತ್ರಣ ತಪ್ಪಿ ಅಂಧೇರಿ ಗುಂದಾವಲಿ ಬಳಿ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ.

ಹಾಗೆ ಡಿಕ್ಕಿ ಹೊಡೆದ ರಭಸಕ್ಕೆ ಕ್ರೇನ್ ಎರಡು ತುಂಡಾಗಿದ್ದು, ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆ ಕ್ರೇನ್ ನ ಹಿಂಬದಿಯ ಚಕ್ರಗಳ ಅಡಿಯಲ್ಲಿ ಸಿಲುಕಿ ಮೃತಪಟ್ಟರು.

ಇದೀಗ ಹತ್ತಿರದಲ್ಲೇ ಇದ್ದ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಕ್ರೇನ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

Related posts

ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೋವಿಡ್ ಪಾಸಿಟಿವ್

Harshitha Harish

ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರ ನೇಮಕ: ಕೇಂದ್ರದ ಪ್ರಸ್ತಾವ ತಿರಸ್ಕರಿಸಿದ ಕೊಲೀಜಿಯಂ

Upayuktha

ದ್ವಿಚಕ್ರ ವಾಹನ ಪಲ್ಟಿ – ಓರ್ವ ಮೃತ್ಯು

Harshitha Harish

Leave a Comment