ಜಿಲ್ಲಾ ಸುದ್ದಿಗಳು

ಮುಳಿಯ ಜ್ಯುವೆಲ್ಸ್ ಆಶ್ರಯದಲ್ಲಿ ನೂತನ ಶಿಕ್ಷಣ ನೀತಿ ಕುರಿತು ಆನ್‌ಲೈನ್ ಸಂವಾದ ಸೆ.25ಕ್ಕೆ

ಪುತ್ತೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕಾರ್ಯಗತಗೊಳಿಸುವಲ್ಲಿ ಶಿಕ್ಷಕರ ಪಾತ್ರ- ಈ ವಿಷಯದ ಬಗ್ಗೆ ಆನ್‌ಲೈನ್ ಸಂವಾದ ಪುತ್ತೂರಿನ ಮುಳಿಯ ಜ್ಯುವೆಲ್ಸ್‌ ಆಶ್ರಯದಲ್ಲಿ ಸೆಪ್ಟೆಂಬರ್ 25ರಂದು ಶುಕ್ರವಾರ ಸಂಜೆ 5:30ಕ್ಕೆ ನಡೆಯಲಿದೆ.

ಶಿಕ್ಷಣ ನೀತಿಯ ಬಗ್ಗೆ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್‌ ವೇಣು ಶರ್ಮಾ ಅವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಬಳಿಕ ಸೆಂಟರ್ ಫಾರ್ ಎಜುಕೇಶನಲ್ & ಸೋಶಿಯಲ್ ಸ್ಟಡೀಸ್‌, ಬೆಂಗಳೂರು ಇದರ ಉಪ ನಿರ್ದೇಶಕರಾದ ಗೌರೀಶ ಅವರ ಜತೆಗೆ ಸಂವಾದ ನಡೆಯಲಿದೆ.

ಸಂವಾದವನ್ನು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಡಾ. ಪಿ.ಎಲ್. ಧರ್ಮ ಉದ್ಘಾಟಿಸಲಿದ್ದಾರೆ. ಮುಳಿಯ ಜ್ಯುವೆಲ್ಸ್‌ನ ಸಿಎಂಡಿ ಕೇಶವ ಪ್ರಸಾದ್ ಮುಳಿಯ ಹಾಗೂ ಮುಳಿಯ ಜ್ಯುವೆಲ್ಸ್‌ನ ಎಂಡಿ ಕೃಷ್ಣ ನಾರಾಯಣ ಮುಳಿಯ ಉಪಸ್ಥಿತರಿರುತ್ತಾರೆ.

ಸಂವಾದದಲ್ಲಿ ಪಾಲ್ಗೊಳ್ಳಲು ನೋಂದಾವಣೆಗಾಗಿ 8494938916 ಗೆ ಕರೆ ಮಾಡಬಹುದು. ಆಸಕ್ತರು ಝೂಮ್ ಆಪ್ ಮೂಲಕ ಮೀಟಿಂಗ್ ಐಡಿ 418 663 4476 ಹಾಗೂ ಪಾಸ್ವರ್ಡ್‌ muliya ಬಳಸಿಕೊಂಡು ಲಾಗಿನ್ ಆಗಬಹುದು ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಕೊರೊನಾ ಅಪ್ ಡೇಟ್: ದ.ಕ.- 79, ಉಡುಪಿ- 7, ಕರ್ನಾಟಕ- 317

Upayuktha

ವಿದ್ಯಾಗಮ ಕಾರ್ಯಕ್ರಮದ ರೂವಾರಿ ದಿಢೀರ್ ವರ್ಗಾವಣೆ

Harshitha Harish

ಹೆದ್ದಾರಿ ಕಾಮಗಾರಿ ತ್ವರಿತಗೊಳಿಸಲು ಸಂಸದರ ಸೂಚನೆ

Upayuktha

Leave a Comment