ಗ್ರಾಮಾಂತರ ಸ್ಥಳೀಯ

ಜಾಲ ತಾಣಗಳ ಮೂಲಕ ಸಾಹಿತ್ಯಕ್ಕೆ ಚಟುವಟಿಕೆಗಳು ಈಗ ಅನಿವಾರ್ಯ: ಡಾ. ಸುರೇಶ ನೆಗಳಗುಳಿ

ಬಂಟ್ವಾಳ: ಕೊರೋನಾ ಲಾಕ್ ಡೌನ್ ಎಲ್ಲ ಕ್ಷೇತ್ರಗಳ ಸೊಂಟ ಮುರಿದಾಗ ಸಾಹಿತಿಗಳಿಗೆ ವೇದಿಕೆಯಾದುದು ಜಾಲ ತಾಣಗಳು. ಇನ್ನು ಅಂಥ ಸಾಹಿತ್ಯಕ್ಕೆ ಮನ್ನಣೆ ನೀಡದೆ ಬೇರೆ ದಾರಿಯಿಲ್ಲ; ಆದರೆ ಬರೆಯುವ ಬರಹದ ಗುಣಮಟ್ಟದ ವಿಚಾರದಲ್ಲಿ‌ ರಾಜಿ ಸಲ್ಲದು ಎಂದು ಡಾ. ಸುರೇಶ ನೆಗಳಗುಳಿ ಹೇಳಿದರು.

ಅವರು 21ನೇ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಿಕೆಗಳಲ್ಲಿ ಬರೆಯುವ ಮಂದಿ ಸುದ್ದಿ ಶೂರರು ಅವರು ಸಾಹಿತ್ಯ ವೀರರಾದಲ್ಲಿ ಪತ್ರಿಕಾ ಸುದ್ದಿಗಳಲ್ಲೂ ಉತ್ತಮ ಸಾಹಿತ್ಯ ಆಸ್ವಾದಿಸಲು ಸಾಧ್ಯವಿದೆ. ಅದೇ ವೇಳೆಯಲ್ಲಿ ಗಡಿನಾಡು ಕನ್ನಡಿಗರನ್ನು ಕೂಡಾ ಪರ ರಾಜ್ಯವೆಂಬ ಭಾವ ತೋರದೆ ಮುಖ್ಯವಾಹಿನಿಯಲ್ಲಿ ಸದಾ‌ ಇಟ್ಟುಕೊಳ್ಳಬೇಕು. ಕನ್ನಡದ ಗೆಲುವು ಗಡಿ ಎಡೆಯ ಗೆಲುವಿನಿಂದ ಪರಿಪೂರ್ಣ ಎನಿಸುತ್ತದೆ ಎಂದು ನೆಗಳಗುಳಿ ಹೇಳಿದರು. ಕಾಸರಗೋಡು ಸುತ್ತ ನಡೆಯುವ ಕನ್ನಡದ ಕೆಲಸ ಇಲ್ಲಿ ನಡೆಯದ್ದಕ್ಕೆ ಅವರು‌ ವಿಷಾದಿಸಿದರು.

ಬಂಟ್ವಾಳ ಜೋಡು ಮಾರ್ಗದ ಕೈಕುಂಜೆಯ ಕನ್ನಡ ಭವನದ ಬಳಿ ನಡೆದ ಬಂಟ್ವಾಳ ತಾಲೂಕು 21ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ನೆಗಳಗುಳಿ ಮುಂದಿನ ದಿನ ಅಂತರಜಾಲ ಸಾಹಿತ್ಯ ಸುಗ್ಗಿಯ ಕಾಲ ಎಂದರು.

ಬಂಟ್ವಾಳ ಶಾಸಕ‌ ರಾಜೇಶ್ ನಾಯಕ್ ಉಳಿಪಾಡಿಗುತ್ತು ಸಮ್ಮೇಳನಕ್ಕೆ ಶುಭ ಹಾರೈಕೆ ಮೂಲಕ ಉದ್ಘಾಟಿಸಿ ತೆರಳಿದರು. ಅನಂತರದ ‘ದೀಪ ಬೆಳಗಿಸಿ ಉದ್ಘಾಟಿಸುವ ಜವಾಬ್ದಾರಿಯನ್ನು ತಾಲೂಕು ತಹಶಿಲ್ದಾರ್ ರಶ್ಮಿ ಎಸ್. ಅರ್. ನಿರ್ವಹಿಸಿದರು. ನಿಯೋಜಿತ ಉದ್ಘಾಟಕರಾಗಿದ್ದ ರಾಜು ಮೊಗವೀರ ಬಾರದ್ದರಿಂದ ಉದ್ಘಾಟನೆ ಒಂದು ಪ್ರಹಸನಕ್ಕೆ ಕಾರಣವಾಯಿತು.

20ನೇ ತಾಲೂಕು ಸಾಹಿತ್ಯ ‌ಸಮ್ಮೇಳನದ ಅಧ್ಯಕ್ಷತೆ‌ ವಹಿಸಿದ್ದ ಧರಣಿದೇವಿ ಮಾಲಗತ್ತಿ ಮಾತನಾಡಿ ಎಲ್ಲ ಯಕ್ಷಗಾನ ಕೃತಿಗಳೂ ಕಾವ್ಯಗಳಾಗಿವೆ. ದ. ಕ. ಅಲ್ಲದೆ ಎಲ್ಲ ಕಡೆಯ ಸಾಹಿತ್ಯ ಸಮ್ಮೇಳನಗಳಲ್ಲೂ ಯಕ್ಷಗಾನಕ್ಕೆ ಅವಕಾಶ ಅಗತ್ಯ ಎಂದರು.

ನಿವೇದನೆ ಈ ಸಮ್ಮೇಳನದ ಸ್ಮರಣ ಸಂಚಿಕೆ ಆಗಿದ್ದು ಅದನ್ನು ಹಿಂದಿನ ತುಳು ಅಕಾಡೆಮಿ ಅಧ್ಯಕ್ಷರಾಗಿದ್ದ ಎ. ಸಿ. ಭಂಡಾರಿ ಬಿಡುಗಡೆ ಮಾಡಿದರು. ದ. ಕ. ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಎಲ್ಲರಿಗೂ ಶುಭ ಹಾರೈಸಿ, ಸ್ವಾಗತ ಕೋರಿ, ಎಲ್ಲರ‌ ಸಹಕಾರ ಸಮ್ಮೇಳನಗಳನ್ನು ಚಂದಗಾಣಿಸುತ್ತದೆ ಎಂದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗಿರೀಶ್ ಭಟ್ ಅಜಕ್ಕಳ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ನಾಗವೇಣಿ ಮಂಚಿ, ರವೀಂದ್ರ ಕುಕ್ಕಾಜೆ ಮೊದಲಾದವರು ವೇದಿಕೆಯಲ್ಲಿ ಇದ್ದರು.

Home

ಮುನ್ನಾ ದಿನದ ಕನ್ನಡ ಭವನದ ಲೋಕಾರ್ಪಣೆ ಸಂದರ್ಭದಲ್ಲಿ ಪಾಲ್ಗೊಂಡ ಕರ್ನಾಟಕ ಸಾಹಿತ್ಯ ಪರಿಷತ್ತಿನ ಮಾಜೀ ಅಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕ ಕೊಂಡು ಓದುವ ಅಗತ್ಯ ಒತ್ತಿ ಹೇಳಿದುದು ಮತ್ತು ಕನ್ನಡ ಭವನ ಉದ್ಘಾಟನೆಗೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಬರದೆ ತಪ್ಪಿಸಿಕೊಂಡದ್ದು ಸರಿಯಲ್ಲ ಎಂದು ಟೀಕಿಸಿದುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ಮೋಹನರಾವ್ ಸ್ವಾಗತಿಸಿದರೆ, ಹಿಂದಿನ ಅಧ್ಯಕ್ಷ ಜಯಾನಂದ ಪೆರಾಜೆ ಅಧ್ಯಕ್ಷರನ್ನು ಪರಿಚಯಿಸಿದರು.

ಆರಂಭದಲ್ಲಿ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯವರು ನಾಡಗೀತೆ, ರೈತ ಗೀತೆಗಳನ್ನು ಹಾಡಿದರು. ಬಾಲಕೃಷ್ಣ ಆಳ್ವ, ಮಹೇಶ್ ಕರ್ಕೇರ, ಗೀತಾ ಕೊಂಕೋಡಿ, ರವಿಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಪಲ್ಲವಿ ಕಾರಂತ ವಂದನೆ ಸಲ್ಲಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಜ.7ರಂದು ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನದ ನವೀಕರಣಕ್ಕೆ ಶಿಲಾನ್ಯಾಸ

Upayuktha

ರೇಡಿಯೋ ಪಾಂಚಜನ್ಯದಲ್ಲಿ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗಾಗಿ ‘ಬೆಳಕು’

Upayuktha

ಬಣ್ಪುತ್ತಡ್ಕದ ನಿರ್ಗತಿಕ ಪರಿಶಿಷ್ಟ ಜಾತಿ ಕುಟುಂಬಕ್ಕೆ ಚೈಲ್ಡ್ ಲೈನ್ ಸಹಾಯ

Upayuktha