ದೇಶ-ವಿದೇಶ

ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಹಜ್ ಗೆ ಆಗಮಿಸಲು ಅವಕಾಶ

ನವದೆಹಲಿ: ಕೋವಿಡ್ -19 ವಿರುದ್ಧ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಈ ವರ್ಷ ಹಜ್‌ಗೆ ಆಗಮಿಸಲು ಅವಕಾಶ ನೀಡಲಾಗುವುದು ಎಂದು ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯ ಹೇಳಿದೆ ಎಂದು ಸೌದಿ ಪತ್ರಿಕೆ ಒಕಾಜ್ ವರದಿ ಮಾಡಿದೆ.

“ಹಜ್‌ಗೆ ಬರಲು ಇಚ್ಛಿಸುವವರಿಗೆ ಕೋವಿಡ್-19 ಲಸಿಕೆ ಕಡ್ಡಾಯವಾಗಿದೆ ಮತ್ತು ಇದು ಹಜ್‌ಗೆ ಬರಲು ಪರವಾನಗಿ ಪಡೆಯಲು ಇರುವ ಮುಖ್ಯ ಷರತ್ತುಗಳಲ್ಲಿ ಒಂದಾಗಿದೆ” ಎಂದು ಆರೋಗ್ಯ ಸಚಿವರು ಸಹಿ ಮಾಡಿದ ಸುತ್ತೋಲೆ ಹೇಳಿದೆ.

ಈ ಬಾರಿ ಯಾತ್ರೆ ಕೈಗೊಳ್ಳುವುದಕ್ಕೆ ಮುನ್ನ ಲಸಿಕೆ ಹಾಕಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

Related posts

ಲೈಗರ್ ಚಿತ್ರದ ಮೂಲಕ ಪಂಚ ಭಾಷಾ ನಟನೆಯಲ್ಲಿ ವಿಜಯ್ ದೇವರಕೊಂಡ

Harshitha Harish

ಕೋವಿಡ್ 19 ಸುದ್ದಿ ಮುಖ್ಯಾಂಶಗಳು: ಒಟ್ಟು ಸೋಂಕಿತರ ಸಂಖ್ಯೆ 18,985ಕ್ಕೆ; ಸಾವಿನ ಸಂಖ್ಯೆ 603ಕ್ಕೆ ಏರಿಕೆ

Upayuktha

ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ವಿಧಿವಶ

Upayuktha