ಇತರ ಕ್ರೀಡೆಗಳು ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಓಪನ್ ರ‍್ಯಾಪಿಡ್ ಚೆಸ್ ಪಂದ್ಯಾಟ: ವಿವೇಕಾನಂದ ಪಿಯು ಕಾಲೇಜಿನ ಸಾತ್ವಿಕ್ ಶಿವಾನಂದಗೆ ದ.ಕ ಜಿಲ್ಲಾ ಬೆಸ್ಟ್ ಪ್ಲೇಯರ್ ಅವಾರ್ಡ್

ಪುತ್ತೂರು: ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ ಲಿಮಿಟೆಡ್ (KIOCL) ಮಂಗಳೂರಿನ ಕಾವೂರಿನಲ್ಲಿ ನಡೆಸಿದ ಮೂರನೇ ಕುದುರೆಮುಖ ಟ್ರೋಫಿ ಅಂತರ್ ಜಿಲ್ಲಾ ಓಪನ್ ರ‍್ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಸಾತ್ವಿಕ್ ಶಿವಾನಂದ ಪಿ.ಎಸ್ ದಕ್ಷಿಣ ಕನ್ನಡ ಜಿಲ್ಲಾ ಬೆಸ್ಟ್ ಪ್ಲೇಯರ್ ಅವಾರ್ಡ್ ನ್ನು ಪಡೆದುಕೊಂಡಿರುತ್ತಾನೆ.

ಈತನು ಸುಳ್ಯ ತಾಲೂಕಿನ ಬೆಳ್ಳಾರೆಯ ಶ್ರೀರಾಮ ಪಿ.ಸಿ ಮತ್ತು ಶಿಲ್ಪರವರ ಪುತ್ರ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ| ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ಈತನು ತರಬೇತಿಯನ್ನು ಪಡೆದಿರುತ್ತಾನೆ. ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಸೇವೆಯನ್ನು ಗೌರವಿಸಿದಾಗ ಭಾವಪೂರ್ಣ ವಿದಾಯ : ಡಾ.ಕೆ.ಎಂ. ಕೃಷ್ಣ ಭಟ್

Upayuktha

ಧಾರ್ಮಿಕ ಕ್ಷೇತ್ರಗಳ ಪುನರುತ್ಥಾನದಿಂದ ಗ್ರಾಮದ ಶ್ರೇಯೋಭಿವೃದ್ಧಿ: ಸಂಜೀವ ಮಠಂದೂರು

Upayuktha

ನಂತೂರು ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ

Upayuktha