ಓದುಗರ ವೇದಿಕೆ ಕೃಷಿ

ಅಭಿಮತ: ಸಾವಯವ ಕೃಷಿ ಹೆಸರಲ್ಲಿ ಮೋಸಹೋಗಬೇಡಿ; ನೈಸರ್ಗಿಕ ಕೃಷಿಯೇ ವಿಷಮುಕ್ತ ಕೃಷಿ

ಭಾರತದ ಅರ್ಥವ್ಯವಸ್ಥೆಗೆ ಕೃಷಿಯೇ ಮೂಲಾಧಾರ. ಆದರೆ ಕೃಷಿಯನ್ನು ಔದ್ಯಮೀಕರಣ ಮಾಡಲು ಹೊರಟ ಬೃಹತ್ ಲಾಬಿಯೊಂದು ರಾಸಾಯನಿಕ ಗೊಬ್ಬರಗಳು, ಬೀಜಗಳು ಮತ್ತು ಕೀಟನಾಶಕಗಳನ್ನೇ ಬಹುತೇಕ ರೈತರು ಅವಲಂಬಿಸುವಂತೆ ಮಾಡಿತು. ತಾತ್ಕಾಲಿಕವಾಗಿ ಅದರಿಂದ ಕೃಷಿ ಉತ್ಪಾದನೆಯೂ ಹೆಚ್ಚಿದ್ದು ನಿಜ. ಆದರೆ ಭೂಮಿಯ ಫಲವತ್ತತೆ ನಾಶವಾಗಿದ್ದಷ್ಟೇ ಅಲ್ಲ, ಉತ್ಪಾದಿತ ಬೆಳೆಗಳು ವಿಷಪೂರಿತವಾದವು. ಇಂತಹ ವಿಷಪೂರಿತ ಕೃಷಿ ಉತ್ಪನ್ನ ಮತ್ತು ಆಹಾರವಸ್ತುಗಳನ್ನು ಸೇವಿಸಿ ನಾನಾ ಬಗೆಯ ರೋಗಗಳು ಮತ್ತು ಆರೋಗ್ಯ ಸಮಸ್ಯೆಗಳು ಹೆಚ್ಚಲಾರಂಭಿಸಿದಾಗ ನಾನಾ ವೇದಿಕೆಗಳಲ್ಲಿ ಪ್ರಜ್ಞಾವಂತ ಜನರು ಧ್ವನಿಯೆತ್ತತೊಡಗಿದರು. ಆಗ ಇದೇ ರಾಸಾಯನಿಕ ಲಾಬಿಗಳು ಕಂಡುಕೊಂಡ ಹೊಸ ದಾರಿಯೇ ‘ಸಾವಯವ ಕೃಷಿ’ ಎಂಬ ಹೊಸ ಲೇಬಲ್ ಅಂಟಿಸಿ ವ್ಯವಹಾರ ನಡೆಸುವುದು.

Advertisement
Advertisement

ಈ ವಿಷಯವನ್ನು ಬಹಳ ಕಳಕಳಿಯಿಂದ ಗಮನಿಸಿ ಆಗಾಗ್ಗೆ ತಮ್ಮ ಅನುಭವದ ವಿಚಾರಗಳನ್ನು ತಮ್ಮದೇ ಫೇಸ್‌ಬುಕ್ ಪುಟದಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿದ್ದಾರೆ ಮಣಿಪಾಲದ ನೈಸರ್ಗಿಕ ಕೃಷಿಕ ಶಿವರಾಮ್ ಭಟ್. ಸ್ವತಃ ಹೇಳಿಕೊಂಡಂತೆ ಅವರು ಪಾರಂಪರಿಕ ಕೃಷಿಕರಲ್ಲ. ವೃತ್ತಿಯಲ್ಲಿ ಸಿವಿಲ್‌ ಎಂಜಿನಿಯರ್‌. ಪ್ರವೃತ್ತಿಯಾಗಿ ಆರಂಭಿಸಿದ ಕೃಷಿಯನ್ನು ನೈಸರ್ಗಿಕವಾಗಿಯೇ ನಡೆಸುವ ಮೂಲಕ ಅಪಾರ ಅನುಭವ ಗಳಿಸಿಕೊಂಡಿದ್ದಾರೆ. ಜತೆ ಜತೆಗೇ ಇತರ ಕೃಷಿಕರು ಅನುಸರಿಸುವ ‘ಜನಪ್ರಿಯ’ವಾದ ರಾಸಾಯನಿಕ ಮತ್ತು ‘ಸಾವಯವ’ ಕೃಷಿ ಪದ್ಧತಿಗಳನ್ನು ವಿಮರ್ಶಾತ್ಮಕ ಹಾಗೂ ತುಲನಾತ್ಮಕ ದೃಷ್ಟಿಯಿಂದ ಅಧ್ಯಯನ ನಡೆಸುತ್ತಿದ್ದಾರೆ.

ರಾಸಾಯನಿಕ, ಸಾವಯವ, ನೈಸರ್ಗಿಕ ಕೃಷಿಗಳ ಬಗ್ಗೆ ತಮ್ಮ ವಿಚಾರವನ್ನು ಅವರು ಪ್ರಸ್ತುತ ಪಡಿಸಿದ್ದು ಹೀಗೆ. ಅವರದೇ ಮಾತುಗಳಲ್ಲಿ ಮುಂದೆ ಓದಿ:

********

ಯಾವುದೇ ನೈಸರ್ಗಿಕ ಕೃಷಿ ವಿಧಾನಗಳು ಇರಲಿ,  ಅದರಲ್ಲಿ ಅತೀ ಪ್ರಮುಖವಾದ ಅಂಶ ಅಂದರೆ ಸಾವಯವ ವಸ್ತುಗಳನ್ನು ಒಳಸುರಿ ಆಗಿ ಉಪಯೋಗಿಸುವುದು. ಇದರ ಅರ್ಥ ಸಾವಯವ ವಸ್ತುಗಳಲ್ಲಿ, ಯಾವುದೇ ಗಿಡ/ಮರಗಳಿಗೆ ಬೇಕಿರುವ ಮೂಲ ವಸ್ತುಗಳು ಇರುವುದು. ಸಾವಯವ ವಸ್ತು ಅಂದರೆ- ಯಾವುದೇ ತರಹದ ಗಿಡ, ಮರ, ಬಳ್ಳಿಗಳ- ಸತ್ತ ವಸ್ತುಗಳ ಅವಯವಗಳನ್ನು ಸಾವಯವ ಎನ್ನುವುದು, ಆದರೆ ಕಂಪನಿಯ ವಸ್ತುಗಳನ್ನಲ್ಲ. ಇಂತಹ ಸಾವಯವ ವಸ್ತುಗಳು, ನಮ್ಮ ಕೃಷಿ ಕ್ಷೇತ್ರದಲ್ಲಿ ಉತ್ಪನ್ನ ಆದಂತಹ ವಸ್ತುಗಳು ಆಗಬೇಕು.

ಇದು ಒಂದು ಅತೀ ಮುಖ್ಯವಾದ ವಿಷಯ. ಆದರೆ, ಈಗ, ನಾವು ನೋಡುವಂತೆ, ಸಾವಯವ ಕೃಷಿ ಅಥವಾ organic farming ಎಂದು ರೈತರನ್ನು, ಜನರನ್ನು ಶೋಷಣೆ ಮಾಡುವುದು ಒಂದು ದಂಧೆ ಆಗಿದೆ, ಇದರಲ್ಲಿ ಹೆಚ್ಚಿನವು ನಮ್ಮ ಕೃಷಿಭೂಮಿಯ ಹೊರಗಡೆ ಅಥವಾ ಫ್ಯಾಕ್ಟರಿಗಳಲ್ಲಿ ತಯಾರು ಮಾಡಿದ ವಸ್ತುಗಳನ್ನು ಕೂಡಾ ಸಾವಯವ ಹೆಸರಲ್ಲಿ ಮಾರಾಟ ಮಾಡಿ, ಇದನ್ನು ರೈತರು ಉಪಯೋಗಿಸಿ, ಮೂರ್ಖರಾಗುವುದು ಒಂದು ದುಃಖಕರ ವಿಷಯ.

ಇನ್ನೊಂದು ಪ್ರಮುಖ ಅಂಶ ಅಂದರೆ- ಯಾಕೆ ಸಾವಯವ ಕೃಷಿ ಅಥವಾ organic farming ಪ್ರಾಮುಖ್ಯತೆ ಪಡೆಯಿತು?

1967 ನಂತರ ಬಂದಂತಹ ಹಸಿರು ಕ್ರಾಂತಿ, ಬಹಳಷ್ಟು ಜನರ ಹಸಿವನ್ನು ತೀರಿಸಿತು (ಇದು ಒಂದು ಭ್ರಷ್ಟ ವ್ಯವಸ್ಥೆಯ, ಅತಿರೇಕದ ಒಂದು ವಾದ), ಸ್ವಲ್ಪ ಸಮಯ ಇದರಿಂದ ರೈತರಿಗೆ ಲಾಭ ಬಂತು, ನಂತರ, ಕೃಷಿ ಭೂಮಿಯ, ಭೂಮಿ ತಾಯಿಯ ಫಲವತ್ತತೆ ಕಡಿಮೆ ಆಗುತ್ತಾ ಬಂದು, ರೈತ ಸೋತ, ಆತ್ಮಹತ್ಯೆಗೆ ಶರಣಾದ.

ಇದೇ ಸಮಯದಲ್ಲಿ ಬಂತು, ಇನ್ನೊಂದು ಷಡ್ಯಂತ್ರ, ಅದೇ ಸಾವಯವ ಕೃಷಿ ಅಥವಾ ಆರ್ಗಾನಿಕ್ farming.

ಇದರಲ್ಲಿ ಇದ್ದದ್ದು ಅದೇ ರಾಸಾಯನಿಕ ವಸ್ತುಗಳು, ಇನ್ನೊಂದು ರೂಪದಲ್ಲಿ, ಇನ್ನೊಂದು ಹೆಸರಲ್ಲಿ, ರೈತರನ್ನು, ಜನರನ್ನು ಮೋಸ ಮಾಡಲು. ಇದು ಯಾಕೆ ಹೀಗೆ, ಒಂದು ಅವಲೋಕನ ಮಾಡೋಣ-ಸಾವಯವ ಕೃಷಿ ಎಂಬ ಒಂದು ಮಹಾ ಮೋಸದ ವಂಚನೆ ಜಾಲದ ಬಗ್ಗೆ ತಿಳಿಯೋಣ.

1970 ನಂತರ, ಕ್ಷೀರಕ್ರಾಂತಿ ಎಂಬ ಹೆಸರಲ್ಲಿ, ಇದೇ ನಮ್ಮ ಭ್ರಷ್ಟ ರಾಜಕೀಯ ವ್ಯವಸ್ಥೆ, ಎಲ್ಲರನ್ನು ಮೋಸ ಮಾಡಿತು. ನಮ್ಮ ದೇಸೀ ಹಸುಗಳ ತಳಿಗಳನ್ನು (ಬಾಸ್ indicus) ಸಂಪೂರ್ಣ ನಾಶ ಮಾಡಿ, ವಿದೇಶಿ ತಳಿಗಳನ್ನು (ಬಾಸ್ taurus) ಉತ್ತೇಜಿಸಿತು. ಈ ಪ್ರಾಣಿಗಳಿಗೆ, ಆಹಾರವಾಗಿ ಏನನ್ನೂ ಕೊಡಬಹುದು (ನಿಮ್ಮ ಮಲ, ಮೂತ್ರ, ವ್ಯತ್ಯಾಸ ತಿಳಿಯದ ಒಂದು ಮೂಕ ಪ್ರಾಣಿ), ಇದರಿಂದ ಬರುವ ಲೀಟರ್ ಗಟ್ಟಲೆ ಬಿಳಿ ದ್ರವ, ನಮ್ಮ ಈಗಿನ ಹಾಲು. ಇದನ್ನು ಹಟ್ಟಿಯಲ್ಲಿ ಕಟ್ಟಿ ಹಾಕಿ, ಆಹಾರ ಕೊಡುವುದು. ಆಹಾರ ಅಂದರೆ ಪಶು ಆಹಾರ, ಇದರಲ್ಲಿ ಕನಿಷ್ಠ 40% ಯೂರಿಯ ಅಂತಹ ರಾಸಾಯನಿಕ ವಸ್ತುಗಳು, ಇದರ ಮಲ ಅಂದರೆ ಗೊಬ್ಬರದಲ್ಲಿ ಈ ವಿಷಕಾರಿ ರಾಸಾಯನಿಕ ವಸ್ತುಗಳು, ಹಾಗೆಯೇ ಹೊರಗಡೆ ಬರುವುದು. ಇದನ್ನು, ನಮ್ಮ ಕೃಷಿ ವಿಜ್ಞಾನಿಗಳು ಹೇಳುವುದು – ಹಟ್ಟಿ ಗೊಬ್ಬರ. ಇದೇ ಹಟ್ಟಿ ಗೊಬ್ಬರದಲ್ಲಿ ಬಹಳಷ್ಟು ಹಾನಿಕಾರಕ, ವಿಷ ಪೂರಿತ ರಾಸಾಯನಿಕ ವಸ್ತುಗಳು ಇದೆ. ಇದನ್ನು, ಗೊಬ್ಬರವಾಗಿ ಉಪಯೋಗ ಮಾಡಿದಾಗ, ಇದೇ ವಿಷ ವಸ್ತುಗಳು ನಮಗೆ ಆಹಾರದಲ್ಲಿ ಬರುವುದು.

ಇತ್ತೀಚಿಗೆ, ನಮ್ಮ ಕೃಷಿ ವಿಜ್ಞಾನಿಗಳು recommend ಮಾಡುವ ಇನ್ನೊಂದು ಗೊಬ್ಬರ ಅಂದರೆ vermicompost ಗೊಬ್ಬರ, ನನ್ನ ಪ್ರಕಾರ, ಇದರಷ್ಟು ಮೋಸ, ವಂಚನೆಯ ಜಾಲ ಇನ್ನೊಂದಿಲ್ಲ, ಯಾಕೆ ಅಂದರೆ, ಇದರಲ್ಲಿ ಉಪಯೋಗ ಮಾಡುವುದು ಇದೇ ವಿಷಕಾರಿ ಬಾಸ್ taurus ಜಾತಿಯ ಪ್ರಾಣಿಗಳ ಹಟ್ಟಿ ಗೊಬ್ಬರ ಹಾಗೂ ಒಂದು ಹುಳ (ಅವರು ಇದನ್ನು ಎರೆಹುಳ ಅಂತಾರೆ, ಎರೆ ಅಂದರೆ ಮಣ್ಣು, ಆದರೆ ಈ ಎರೆಹುಳಗಳು, ಮಣ್ಣು ತಿಂದರೆ ಸಾಯುತ್ತವೆ. ಇದು ಕೂಡಾ ಒಂದು ವಿದೇಶಿ ಜೀವಿ), ಇದನ್ನು ಒಂದು ಅತ್ಯುತ್ತಮ ಗೊಬ್ಬರ ಎಂದು ಹೇಳುವ ಮೋಸದ ಜಾಲ.

ಇನ್ನು ಕೆಲವು ಒಳಸುರಿಗಳು – ಸಾವಯವ ಕೃಷಿಯಲ್ಲಿ – ಕೋಳಿ ಗೊಬ್ಬರ (ಇದು ಬರುವುದು poultry ಗಳಿಂದ, ಈ ಎಲ್ಲಾ ಕೋಳಿ ಮರಿಗಳಿಗೆ anti biotics ಅಂದರೆ ರಾಸಾಯನಿಕ ಕೊಟ್ಟು ಬೆಳೆಸುವುದು)- ಇದು ಕೂಡಾ ರಾಸಾಯನಿಕ ಗೊಬ್ಬರ. ಹೀಗೆ, ಕುರಿ ಗೊಬ್ಬರ ಕೂಡಾ.

ಇನ್ನು ಒಂದು ವಿಷಯ ಅಂದರೆ, organic certified manure ಹೆಸರಲ್ಲಿ, ತಯಾರು ಆಗುವಂತಹ, ಫ್ಯಾಕ್ಟರಿಯಲ್ಲಿ ತಯಾರು ಮಾಡಿದ, ಪ್ರತಿಯೊಂದು ಗೊಬ್ಬರ ಕೂಡಾ ರಾಸಾಯನಿಕ ಅಂಶಗಳನ್ನು ಒಳಗೊಂಡಿದೆ.

ಹಾಗಾದರೆ, ಸಾವಯವ ಕೃಷಿ ಎಂಬ ಒಂದು ಮಹಾ ಷಡ್ಯಂತ್ರ ಒಂದು ಘೋರ ಅಪರಾಧ ಅಲ್ಲವೇ?

ಹಾಗಾಗಿ, ನನ್ನ ನಿವೇದನೆ- ಯಾರೂ ಕೂಡಾ, ರಾಸಾಯನಿಕ ಅಥವಾ ಸಾವಯವ ವಸ್ತುಗಳನ್ನು ಖರೀದಿಸಿ ಮೋಸ ಹೋಗಬೇಡಿ.  ಏನು ಇದ್ದರೂ – ನೈಸರ್ಗಿಕ, ವಿಷಮುಕ್ತ ಕೃಷಿ…

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Advertisement
Advertisement

Related posts

ಕೊಕ್ಕೋ ಮಾತ್ರ ಖರೀದಿ, ಅಡಿಕೆ ಖರೀದಿ ದಿನಾಂಕ ಮುಂದೆ ತಿಳಿಸಲಾಗುತ್ತದೆ: ಕ್ಯಾಂಪ್ಕೋ ಸ್ಪಷ್ಟನೆ

Upayuktha

ಮುಜಂಟಿ ಜೇನಿಗೆ ಶತ್ರುಬಾಧೆ ನಿವಾರಣೆ ಹೇಗೆ…?

Upayuktha

ಟೆರೇಸ್ ಗಾರ್ಡನ್: ಮೂಲಂಗಿ ಬೆಳೆಯೋದು ಹೇಗೆ? ಇಲ್ಲಿದೆ ನೋಡಿ ಕೆಲವು ಟಿಪ್ಸ್…

Upayuktha
error: Copying Content is Prohibited !!