ಓದುಗರ ವೇದಿಕೆ

ಅಭಿಮತ: ದುಬೆ ಸಾವು ತಂದ ಸಮಾಧಾನ ಮತ್ತು ಸಂಕಟ

ಎನ್‌ಕೌಂಟರ್‌ನಲ್ಲಿ ಹತನಾದ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ (ಚಿತ್ರ ಕೃಪೆ: ಹಿಂದೂಸ್ಥಾನ್ ಟೈಮ್ಸ್)

ಉತ್ತರ ಪ್ರದೇಶದ ಕುಖ್ಯಾತ ರೌಡಿ ವಿಕಾಸ್ ದುಬೆ ಇಂದು ಮುಂಜಾನೆ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರುವುದರಿಂದ ಸಭ್ಯ ಸಮಾಜ ನಿಟ್ಟುಸಿರು ಬಿಡುವಂತಾಗಿರುವುದು ಮತ್ತು ಕಳೆದ ಏಳೆಂಟು ದಿನಗಳ ಹಿಂದೆ ಈತನ ಸಹಚರರಿಂದ ದುರಂತವಾಗಿ ಹತ್ಯೆಗೀಡಾದ ಎಂಟು ಪೊಲೀಸರ ಆತ್ಮಗಳಿಗೆ ಶಾಂತಿ ದೊರಕುವುದೋ ದುಃಖದಲ್ಲಿರುವ ಅವರ ಕುಟುಂಬಿಕರಿಗೆ ಒಂದಷ್ಟು ಸಾಂತ್ವನವನ್ನೇನೋ ನೀಡಿರಬಹುದು…

ಆದರೆ ಈತನ ಎನ್‌ಕೌಂಟರ್‌ನಿಂದ ಆತ ಮಾತ್ರ ಸಾಯಲಿಲ್ಲ; ಜೊತೆಗೇ ಆತನನ್ನು ಈ ತನಕ ಪೋಷಿಸಿಕೊಂಡು ಬಂದ ಒಂದು ಪ್ರಭಾವಿ ಪಡೆಯ ಬಗೆಗಿನ ಸಾಕ್ಷ್ಯವೂ ಸತ್ತಿರುವುದು ಬೇಸರದ ಸಂಗತಿ‌. ಯಾಕೆಂದ್ರೆ ನಮ್ಮ‌ ನಡುವೆ ಇಂಥಹ ವ್ಯಕ್ತಿಗಳನ್ನು ಪೋಷಿಸಿಕೊಂಡು ತಮ್ಮ ರಾಜಕೀಯ ಅಥವಾ ಔದ್ಯಮಿಕ ಸ್ವಾರ್ಥದ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವ ದೊಡ್ಡ ಜಾಲವೇ ಹರಡಿರುತ್ತದೆ. ಈ ಮೂಲ ಬೇರು ನಾಶವಾಗದೇ ಇಂಥಾ ಡಕಾಯಿತಿ ರೌಡಿಸಮ್ ನ ಅಂತ್ಯ ಅಸಾಧ್ಯ. ಇವತ್ತು ದುಬೆ ಸತ್ತ ನಂತರ ಸಾಕ್ಷ್ಯ ನಾಶದಿಂದ ಆತನ ಈ ಜಾಲಕ್ಕೆ ನೀರೆರೆದು ಪೋಷಿಸುತ್ತಿರುವ ಪ್ರಭಾವಿ ಜನ ಕಾನೂನಿನ‌ ಕುಣಿಕೆಯಿಂದ ಬಚಾವಾಗುವ ಸಂಭವವೇ ಹೆಚ್ಚು. ಈ ನೀಚರು ಆತನ ಸ್ಥಾನಕ್ಕೆ ಮತ್ತೊಬ್ಬನನ್ನು ನೇಮಿಸಿ ಆತನ ಮೂಲಕ ಇಂಥಾ ಕ್ರೌರ್ಯದ ಪೋಷಣೆ ಮಾಡ್ತಾರೆ. ಆತ ಮತ್ತೆ ಸಮಾಜಕ್ಕೆ ಕಂಟಕನಾಗ್ತಾನೆ. ಆದರೆ ಹಿನ್ನೆಲೆಯಲ್ಲಿರುವವರು ರಾಜಾರೋಷವಾಗಿ ದೌಲತ್ತಿನ ಮದದಿಂದ ತೇಲಾಡ್ತಾನೇ ಇರ್ತಾರೆ.

ದುಬೆಯ ಅಂತ್ಯ ಒಂದು ಕಾರಣಕ್ಕೆ ಸಮಾಧಾನ ತಂದಿರುವುದರು ಮಾತ್ರವಲ್ಲದೇ ಪೊಲೀಸರ ಹತ್ಯೆ ನಡೆದ ಅಲ್ಪಾವಧಿಯಲ್ಲಿ ಉ ಪ್ರ ಮತ್ತು ಮ.ಪ್ರ ಸರಕಾರಗಳು ಆತನನ್ನು ಪತ್ತೆಹಚ್ಚಿ ಮುಗಿಸುವಲ್ಲಿ ತೋರಿದ ಸಾಹಸ ದಿಟ್ಟ ನಿರ್ಧಾರ ನಡೆಗಳನ್ನು ಅಭಿನಂದಿಸಲೇ ಬೇಕು. ಆದರೆ ಅದರ ಜೊತೆಗೆ ಆತನ ಸಾವಿನಿಂದ ಕ್ರೌರ್ಯ ಹಿಂಸೆಯ ಪೋಷಕರು ಬಚಾವಾಗಿರುವುದುಇ ವಿಷಾದವನ್ನೂ ತಂದಿದೆ.

– ಜಿ ವಾಸುದೇವ ಭಟ್, ಪೆರಂಪಳ್ಳಿ

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಕೊರೊನಾಘಾತಕ್ಕೆ ಕಾಸರಗೋಡು- ದ.ಕ ನಡುವೆ ಸಂಬಂಧಗಳು ಕಡಿದೇ ಹೋಯ್ತೆ…?

Upayuktha

ಅಭಿಮತ: ಕಾರ್ಪೊರೇಟ್ ಕೃಷಿಗಿಂತ Co-operative ಕೃಷಿ ಉತ್ತಮ

Upayuktha

ಖಾಸಗಿ ಶಾಲಾ ಶಿಕ್ಷಕರ, ಅತಿಥಿ ಶಿಕ್ಷಕರ, ಶಾಲಾ ಸಿಬ್ಬಂದಿ ವರ್ಗದವರ ಬದುಕು ದುರ್ಭರ

Upayuktha