ಓದುಗರ ವೇದಿಕೆ

ಅಭಿಮತ: ಮಾನವೀಯತೆ ಎಲ್ಲಿದೆ?

ಹೆಣ್ಣು ಜಗದ ಕಣ್ಣು, ಹೆಣ್ಣು ಮನುಕುಲದ ಸರ್ವಸ್ವವೇ ಆಗಿದ್ದಾಳೆ; ಆದರೆ ಹೆಣ್ಣು ಎಂದರೆ ಕೀಳರಿಮೆಯಿಂದ ಕಾಣುವ ನಮ್ಮ ಸಮಾಜ ಅವಳನ್ನು ಕೇವಲ ಒಂದು ವಸ್ತುವನ್ನಾಗಿ ಕಾಣುತ್ತ ಹೆಣ್ಣನ್ನು ಅವರ ಇಷ್ಟ ಬಂದ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ.

ಒಂದು ಹೆಣ್ಣು ಜನಿಸಿದಾಗಿನಿಂದಲೂ, ಅಮ್ಮ, ಹೆಂಡತಿ, ಮಗಳಾಗಿ, ಅಕ್ಕ, ಸಹನೆ, ಪ್ರೀತಿ, ಕ್ಷಮಯಾಧರಿತ್ರಿಯಾಗಿ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಕೇವಲ ಒಂದು ಲೈಂಗಿಕ ವಸ್ತುವನ್ನಾಗಿ ಕಾಣುತ್ತ ಅವಳ ಮೇಲೆ ದೌರ್ಜನ್ಯ ದಬ್ಬಾಳಿಕೆಗಳನ್ನು ನಡೆಸುತಿದ್ದಾರೆ. ವಯಸ್ಸು, ಸ್ಥಳ, ಪರಿಸ್ಥಿತಿಯನ್ನು ಗಮನಿಸದೆ ಎಲ್ಲೆಂದರಲ್ಲಿ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಲೇ ಬಂದಿದೆ. ಆಗಷ್ಟೇ ಹದಿಹರೆಯಕ್ಕೆ ಕಾಲಿಟ್ಟು ನವಕನಸುಗಳನ್ನು ಕಾಣುತಿರುವ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಲೇ ಬಂದಿದೆ.

ಪುರುಷ ಸಮಾಜವು ವಯಸ್ಸಾದ ಮುದುಕಿಯರನ್ನೂ ಬಿಡದೇ ಅವಳ ಮೇಲೆ ಅತ್ಯಾಚಾರವಸಗಿ ಕೊಲೆಗಳನ್ನು ಮಾಡುತಿದ್ದಾರೆ. ಇದರಿಂದಾಗಿ ಹೆತ್ತವರು ಮಕ್ಕಳನ್ನು ಹೊರಗೆ ಬಿಡಲು ಭಯ ಪಡುತಿದ್ದಾರೆ. ಅವರ ತಂದೆ-ತಾಯಂದಿರು ಏನೂ ಅರಿಯದ ವಯಸ್ಸಲ್ಲೇ ಮದುವೆ ಮಾಡಿ ಸಾಗಿಸುತಿದ್ದಾರೆ. ಆದಾದ ನಂತರ ಗಂಡನ ಮನೆಯಲ್ಲಿ ಅತ್ತೆ ಮಾವಂದಿರ ಕಿರುಕುಳ ಹೀಗೆ ಹಲವಾರು ಸಮಸ್ಯೆಗಳ್ಳನ್ನು ಎದುರಿಸುತ್ತಿರುವ ಹೆಣ್ಣಿಗೆ ಈ ಸಮಾಜದಲ್ಲಿ ಯಾವುದೇ ರೀತಿಯ ನ್ಯಾಯ ದೊರೆಕಿಲ್ಲ.

ಉದಾಹರಣೆಗೆ: ಒಂದು ಮಹಿಳೆಯ ಅತ್ಯಾಚಾರವಾಗಿ ಹೆಣ್ಣು ಮಗಳು ತೀರಿಹೋದರೆ ನಮ್ಮ ನ್ಯಾಯಾಲಯ ಕೊಡುವ ತೀರ್ಪಾದರೂ ಏನು?  ಒಂದು ವರ್ಷ ಎಲ್ಲ ಎರಡು ವರ್ಷ ಜೈಲು ವಾಸ, ಬಿಟ್ಟಿ ಊಟ ಕೊಟ್ಟು ಅಪರಾಧಿಯನ್ನು ಸಾಕುವಂತ ಪರಿಸ್ಥಿತಿ ನಮ್ಮ ಸಮಾಜದಲ್ಲಿ ಕಾಣಬಹುದು. ಈ ಶಿಕ್ಷೆಯಿಂದಾಗಿ ಅಪರಾಧಿಗಳು ಜಾಸ್ತಿಯಾಗುತ್ತಿದ್ದಾರೆ ವಿನಹ ಕಡಿಮೆಯಂತೂ ಆಗುತ್ತಿಲ್ಲ.

ಹೆಣ್ಣು ದೇವರ ಸೃಷ್ಟಿಯಲ್ಲಿ ತುಂಬಾ ವಿಶೇಷವಾದವಳು. ನಾವು ನೋಡುವ ದೃಷ್ಟಿ ಸರಿಯಾಗಿದ್ದರೆ ಮಾತ್ರ ಹೆಣ್ಣಿನ ನಿಜವಾದ ಮನಸ್ಸು ತಿಳಿಯುತ್ತದೆ. “ಗಾಂಧೀಜಿಯವರು ಹೇಳಿದ ಮಾತಿನಂತೆ ಒಬ್ಬ ಮಹಿಳೆ ಯಾವಾಗ ಮಧ್ಯರಾತ್ರಿಯಲ್ಲಿ ಯಾವುದೇ ಭಯವಿಲ್ಲದೆ ನಡೆಯುತ್ತಾಳೋ ಅಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಹಾಗೆ ಎಂದು”. ಆದರೆ ಇಂದು ರಾತ್ರಿ ಇರಲಿ ಹಾಡ ಹಗಲೇ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿದೆ. ಚಿಕ್ಕ ವಯಸ್ಸಿನ ತೊಟ್ಟಿಲಲ್ಲಿರುವ ಮಗುವಿನ ಮೇಲೆ ಕ್ರೂರತೆಯನ್ನು ನಾವು ಕಾಣುತ್ತಿದ್ದೇವೆ.

ಇದನ್ನೆಲ್ಲ ಅರಿತೂ ಏನೂ ಅರಿಯದಂತೆ ಮೂಕ ಪ್ರೇಕ್ಷಕರಾಗಿರುವ ನಮ್ಮ ಸಮಾಜದಲ್ಲಿ ಆಗಲಿ ಅಥವಾ ನ್ಯಾಯಾಲಯವಾಗಲಿ ಒಮ್ಮೆ ಯೋಚಿಸಿದರೆ ತಿಳಿಯುತ್ತದೆ. ನಮ್ಮ ಹೆಣ್ಣು ಸುರಕ್ಷಿತಳೇ?

-ಸಿಂಧು ಸದಾಶಿವು

ಪತ್ರಿಕೋದ್ಯಮ ವಿಭಾಗ,

ವಿವೇಕಾನಂದ ಪದವಿ ಕಾಲೇಜು ಪುತ್ತೂರು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಈ ಸೋದರಿಗೆ ನೆರವಾಗುವಿರಾ…?

Upayuktha

ಸಾಮರಸ್ಯದ ಸಂಕೇತ ಮೊಹರಂ

Upayuktha

ಅಭಿಮತ: ವೈಮಾನಿಕ ಸಮೀಕ್ಷೆ ಮಾಡಬೇಕಾಗಿರುವುದು ತಜ್ಞರೆ ಹೊರತು ರಾಜಕಾರಣಿಗಳಲ್ಲ…

Upayuktha