ದೇಶ-ವಿದೇಶ

ಸಿಎಎ ವಿರೋಧಿಸಿ 11 ಮುಖ್ಯಮಂತ್ರಿಗಳಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ

ತಿರುವನಂತಪುರಂ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ ಬಳಿಕ ಇದೀಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, 11 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವ ರಕ್ಷಣೆಗೆ ನೆರವಾಗಿ ಎಂದು ಆಗ್ರಹಿಸಿದ್ದಾರೆ.

ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಸೇರಿದಂತೆ 11 ಮುಖ್ಯಮಂತ್ರಿಗಳಿಗೆ ಪಿಣರಾಯಿ ವಿಜಯನ್ ಪತ್ರ ಬರೆದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ 2019ರ ಅಂಗೀಕಾರದ ಬಳಿಕ ಸಮಾಜದ ದೊಡ್ಡ ಗುಂಪುಗಳಲ್ಲಿ ಸಂದೇಹಗಳು ಮೂಡಿವೆ’ ಎಂದು ಅವರು ಹೇಳಿದ್ದಾರೆ.

ಎಲ್ಲ ಭಾರತೀಯರೂ ಒಗ್ಗಟ್ಟಾಗಿದ್ದು ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದೆ ಎಂದು ಪಿಣರಾಯಿ ಹೇಳಿದ್ದಾರೆ.

ಕೇರಳ ವಿಧಾನಸಭೆ ಮಂಗಳವಾರದಂದು ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿತ್ತು. ಸಿಎಎ ವಾಪಸಿಗೆ ಆಗ್ರಹಿಸಿ ಮಂಡಿಸಿದ ನಿರ್ಣಯವನ್ನು ಎಲ್‌ಡಿಎಫ್‌ ನೇತೃತ್ವ ಸರಕಾರದ ಎಲ್ಲ ಸದಸ್ಯರು, ಮತ್ತು ಯುಡಿಎಫ್‌ನ ಎಲ್ಲ ಸದಸ್ಯರೂ ಬೆಂಬಲಿಸಿದ್ದರು. ಬಿಜೆಪಿಯ ಏಕೈಕ ಶಾಸಕ ಓ ರಾಜಗೋಪಾಲ್ ಮಾತ್ರ ಅದನ್ನು ವಿರೋಧಿಸಿದ್ದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿಯವರ ಪುತ್ರ ರೋಹಣ್ ಜೇಟ್ಲಿ ಡಿಡಿಸಿಎ ಅಧ್ಯಕ್ಷ ರಾಗಿ ಅವಿರೋಧ ಆಯ್ಕೆ

Harshitha Harish

ಔರಂಗಾಬಾದ್: ಗೂಡ್ಸ್ ರೈಲು ಚಲಿಸಿ ಹಳಿಗಳ ಮೇಲೆ ಮಲಗಿದ್ದ 16 ವಲಸೆ ಕಾರ್ಮಿಕರ ಸಾವು

Upayuktha

ಅಸ್ಸಾಂ ಎನ್‌ಆರ್‌ಸಿ: ಸಿಜೆಐ ರಂಜನ್‌ ಗೊಗೋಯ್ ಸಮರ್ಥನೆ, ನಿಂದಕರಿಗೆ ಖಂಡನೆ

Upayuktha