ಕೃಷಿ ವಾಣಿಜ್ಯ

ಮುಕ್ತ ಮಾರುಕಟ್ಟೆಗೆ ಶ್ರೀ ಮಾಧವ ಗೋಶಾಲೆಯ ಜೈವಿಕ ಗೊಬ್ಬರ

ಕಲಬುರಗಿ: ಶ್ರೀ ಮಾಧವ ಗೋಶಾಲೆಯಲ್ಲಿ ದೇಸಿ ಗೋವಿನ‌ ಸೆಗಣಿಯಿಂದ ತಯಾರಿಸಲಾಗುವ ಉತ್ಕೃಷ್ಟ ಜೈವಿಕ ಗೊಬ್ಬರವನ್ನುಸ್ವದೇಶಿ ಜಾಗರಣ ಆಂದೋಲನದ ಹರಿಕಾರ ದಿವಂಗತ ರಾಜೀವ ದೀಕ್ಷಿತರ ಸ್ಮರಣೀಯ ದಿನವಾದ ಶನಿವಾರ (ನ.30) ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಸದ್ಯ ಒಂದು ಕೆಜಿ ಚೀಲಗಳಲ್ಲಿ ಈ ಗೊಬ್ಬರ ಲಭ್ಯವಿದೆ.

ಶ್ರೀ ಮಾಧವ ಗೋಶಾಲೆಯಲ್ಲಿ ತಯಾರಿಸಲಾಗುವ ಈ ಗೊಬ್ಬರ ಈ ಭಾಗದ ದೇವಣಿ, ಖಿಲ್ಲಾರಿ ಹಾಗೂ ಜವಾರಿ ತಳಿ ಗೋವುಗಳ ಸೆಗಣಿಯಿಂದ ತಯಾರಿಸಲಾಗುತ್ತಿದ್ದು, ಕರ್ನಾಟಕ ಸರಕಾರ, ತೋಟಗಾರಿಕೆ ಇಲಾಖೆಯಿಂದ ಪ್ರಮಾಣೀಕೃತಗೊಂಡಿದೆ.

ಮನೆಯಂಗಳದ ತೋಟ, ಕೈ ತೋಟದವರಿಗೆ, ತುಳಸಿ ಗಿಡಗಳಿಗೆ ಜೈವಿಕ ಗೊಬ್ಬರ ಒದಗಿಸಲು ಕಡಿಮೆ ತೂಕದಲ್ಲಿ ಗೊಬ್ಬರವನ್ನು ಮಾರುಕಟ್ಟೆಗೆ ತರಲಾಗಿದೆ. ಅನೇಕ ಜನ ಮನೆಗಳಲ್ಲೇ ತರಕಾರಿ, ಸೊಪ್ಪುಗಳನ್ನು ಬೆಳೆದುಕೊಳ್ಳುತ್ತಿದ್ದು ವಿಷಮುಕ್ತ ಕೃಷಿ ಹಾಗೂ ರೋಗಮುಕ್ತ ಭಾರತದ ಕನಸು ನನಸಾಗಿಸಲು ಈ ಪ್ರಯತ್ನ ನೆರವಾಗಲಿದೆ.

ಕಲಬುರಗಿಯ ಸ್ವಾಭಿಮಾನ ಸ್ವದೇಶಿ ಕೇಂದ್ರದಲ್ಲಿ ಈ ಜೈವಿಕ ಗೊಬ್ಬರ ಲೋಕಾರ್ಪಣೆಗೊಂಡಿತು.

ಕಲಬುರಗಿಯಲ್ಲಿ ಈ ಜೈವಿಕ ಗೊಬ್ಬರ ಸಿಗುವ ಸ್ಥಳ:

1] ಸ್ವಾಭಿಮಾನ ಸ್ವದೇಶಿ ಕೇಂದ್ರ
ರಾಮೇಶ್ವರ ಸಭಾಗೃಹದ ಎದುರುಗಡೆ, ಎನ್.ವಿ.ಮೈದಾನದ ಹತ್ತಿರ, ಕಲಬುರಗಿ.
ದೂರವಣಿ – 8880080277

2] ಬೆಳಗುಂಪಿ ಸಾವಯವ ಉತ್ಪನ್ನ ಕೇಂದ್ರ
ಅರಣ್ಯ ಇಲಾಖೆ ಕಚೇರಿ, ಶರಣಬಸವೇಶ್ವರ ದೇವಸ್ಥಾನ ರಸ್ತೆ
ದೂರವಾಣಿ – 9449125035

(ಉಪಯುಕ್ತ ನ್ಯೂಸ್ ಸುದ್ದಿಜಾಲ)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (31-12-2020)

Upayuktha

ಭತ್ತದ ಬೆಳೆಗೆ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ: ನೋಂದಣಿಗೆ ಆಗಸ್ಟ್ 14 ಕಡೇ ದಿನ

Upayuktha

ಗ್ರಾಮೀಣ ಪ್ರದೇಶದಲ್ಲಿ ಬಯೋ ಡೀಸೆಲ್‌: ಅಳಕೆಮಜಲಿನಲ್ಲಿ ಪರಿಸರ ಸ್ನೇಹಿ ಇಂಧನ ಕೇಂದ್ರ

Upayuktha