ಕೃಷಿ ನಗರ ಪ್ರಮುಖ ಸ್ಥಳೀಯ

ಜ.4-5 : ಪುತ್ತೂರಿನಲ್ಲಿ ‘ವಿಷಮುಕ್ತ ಅನ್ನದ ಬಟ್ಟಲಿಗಾಗಿ’ ಸಾವಯವ ಹಬ್ಬ

ಪುತ್ತೂರು: ನವಚೇತನ ಸ್ನೇಹಸಂಗಮ ಹಾಗೂ ಜೇಸೀಐ ಪುತ್ತೂರು ಇದರ ಆಶ್ರಯದಲ್ಲಿ ಜ.4 ಹಾಗೂ 5 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾವಯವ ಹಬ್ಬ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಾವಯವ ಹಬ್ಬದಲ್ಲಿ ಸಿರಿಧಾನ್ಯ, ದಿನಸಿ ಹಾಗೂ ತರಕಾರಿಗಳಿಗೆ ಆದ್ಯತೆ ನೀಡಲಾಗುತ್ತಿದ್ದು ವಿಷಮುಕ್ತ ಅನ್ನದ ಬಟ್ಟಲು ಈ ಹಬ್ಬದ ಧ್ಯೇಯವಾಗಿದೆ. ಸಾವಯವ ಕೃಷಿಕರಿಂದ ನೇರವಾಗಿ ಗ್ರಾಹಕರಿಗೆ ವಸ್ತುಗಳನ್ನು ಈ ಹಬ್ಬದ ಮೂಲಕ ತಲಪಿಸುವ ಮೂಲಕ ಸಾವಯವ ಜಾಗೃತಿ ಹಾಗೂ ಪ್ರೋತ್ಸಾಹ ನೀಡಲಾಗುತ್ತಿದೆ.

ಎರಡು ದಿನದ ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳು, ಸಾವಯವ ಕೃಷಿ ಮಾತುಕತೆ ನಡೆಯಲಿದೆ. ಸಾವಯವ ಕೃಷಿಯ ಮೂಲಕವೇ ಬೆಳೆದ ವಸ್ತುಗಳನ್ನು ಕೃಷಿಕರು ನೇರವಾಗಿ ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

‘ಹದಿಹರೆಯದ ವರ್ತನೆಗಳು’: ಆಳ್ವಾಸ್‌ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ

Upayuktha

ಯಕ್ಷಗಾನಕ್ಕೂ ತಟ್ಟಿದ ಕೊರೊನಾ ಭೀತಿ: ಎಲ್ಲ ಮೇಳಗಳಿಂದ ಪ್ರದರ್ಶನ ಅನಿರ್ದಿಷ್ಟಾವಧಿ ರದ್ದು

Upayuktha

ರುಡ್‍ಸೆಟ್‌ಗೆ ಡಿ. ಹರ್ಷೇಂದ್ರ ಕುಮಾರ್‌ ಭೇಟಿ

Upayuktha