ದೇಶ-ವಿದೇಶ ಪ್ರಮುಖ

ಉಪ್ರ ಗಲಭೆ ಹಿನ್ನೆಲೆ: ದಾಂಧಲೆಕೋರರ ಆಸ್ತಿ ಮುಟ್ಟುಗೋಲು ಪ್ರಕ್ರಿಯೆಗೆ ಚಾಲನೆ

ಹೈಕೋರ್ಟ್ ಆದೇಶ ಅನುಸರಿಸಿ ಯೋಗಿ ಸರಕಾರದ ದಿಟ್ಟ ಕ್ರಮ, ಗಲಭೆಕೋರರಿಗೆ ತಕ್ಕ ಪಾಠ

ಚಿತ್ರ ಕೃಪೆ: ಪಿಟಿಐ

ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ವೇಳೆ ಹಿಂಸಾತ್ಮಕ ಕೃತ್ಯಗಳನ್ನು ನಡೆಸಿ ಸಾರ್ವಜನಿಕ ಆಸ್ತಿಗಳಿಗೆ ನಷ್ಟ ಉಂಟುಮಾಡಿದ ದಾಂಧಲೆಕೋರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೆ ಉತ್ತರ ಪ್ರದೇಶ ಸರಕಾರ ಚಾಲನೆ ನೀಡಿದೆ.

ಹಲವು ಜಿಲ್ಲಾಡಳಿತಗಳು ಈಗಾಗಲೇ ಪ್ರಕ್ರಿಯೆ ಆರಂಭಿಸಿವೆ. ಸಾರ್ವಜನಿಕ ಆಸ್ತಿಗಳಿಗೆ ಹಾನಿಯೆಸಗಿದ 300ಕ್ಕೂ ಹೆಚ್ಚು ದಾಂಧಲೆಕೋರರಿಗೆ ಆಸ್ತಿ ಮುಟ್ಟುಗೋಲು ಹಾಕುವ ನಿಟ್ಟಿನಲ್ಲಿ ಶೋಕಾಸ್ ನೋಟೀಸ್ ನೀಡಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಗಲಭೆಕೋರರನ್ನು ಗುರುತಿಸಲಾಗಿದೆ. ಸಾರ್ವಜನಿಕ ಆಸ್ತಿಗಳ ನಷ್ಟಕ್ಕೆ ತಾವು ಕಾರಣರಲ್ಲ ಎಂಬುದಾಗಿ ಸಮರ್ಪಕ ಉತ್ತರ ನೀಡಲಾಗದವರು ತಕ್ಕ ಬೆಲೆ ತೆರಬೇಕಾಗುತ್ತದೆ.

ಲಖನೌ ಜಿಲ್ಲಾಡಳಿತ 100 ಮಂದಿಗೆ ಈ ವರೆಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿಷೇಕ್ ಪ್ರಕಾಶ್ ತಿಳಿಸಿದರು.

ಸಂಪೂರ್ಣ ಪ್ರಕ್ರಿಯೆ 30 ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು ಆ ಬಳಿಕ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ರಾಮ್‌ಪುರ ಜಿಲ್ಲೆಯಲ್ಲೂ ಈ ವರೆಗೆ 28 ಮಂದಿ ಗಲಭೆಕೋರರನ್ನು ಗುರುತಿಸಿ ನೋಟೀಸ್ ನೀಡಲಾಗಿದೆ. ಇಲ್ಲಿ ಒಟ್ಟಾರೆ 25 ಲಕ್ಷ ರೂ.ಗಳ ನಷ್ಟ ಅಂದಾಜಿಸಲಾಗಿದೆ.

ಮೀರತ್‌ನಲ್ಲಿ 141 ಮಂದಿಗೆ ನೋಟಿಸ್ ನೀಡಲಾಗಿದ್ದು, ಇಲ್ಲಿ 14 ಲಕ್ಷ ರೂ.ಗಳ ನಷ್ಟ ಅಂದಾಜಿಸಲಾಗಿದೆ. ಗೋರಖ್‌ಪುರದಲ್ಲಿ 33 ಮಂದಿ ಹಿಂಸಾಚಾರದಲ್ಲಿ ಶಾಮೀಲಾಗಿರುವ ಮಾಹಿತಿ ದೊರೆತಿದೆ. 1000ಕ್ಕೂ ಹೆಚ್ಚು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಹಿಂಸಾಚಾರದಲ್ಲಿ ತೊಡಗಿದವರ ಫೋಟೋಗಳನ್ನು ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುತ್ತಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.

2010ರಲ್ಲಿ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಗಲಭೆಕೋರರ ಆಸ್ತಿ ಮುಟ್ಟುಗೋಲಿಗೆ ಪ್ರಕ್ರಿಯೆ ಆರಂಭಿಸಲಾಗಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

Related posts

ಕರಾವಳಿಯಲ್ಲಿ ತಗ್ಗಿದ ಕೊರೊನಾ ಅಬ್ಬರ: ಮೂರೂ ಜಿಲ್ಲೆಗಳಲ್ಲಿ ಇಂದು ಕೋವಿಡ್ ನೆಗೆಟಿವ್

Upayuktha

ಚಂದ್ರಯಾನ-2 ಇಳಿದಾಣದ ಹೈ ರೆಸೊಲ್ಯೂಷನ್ ಚಿತ್ರ ಬಿಡುಗಡೆ ಮಾಡಿದ ನಾಸಾ

Upayuktha

ವೇತನ ವಿವಾದ: ಬೆಂಗಳೂರಿನ ಐಫೋನ್‌ ತಯಾರಿಕಾ ಘಟಕದಲ್ಲಿ ಹಿಂಸಾತ್ಮಕ ಪ್ರತಿಭಟನೆ

Upayuktha