ದೇಶ-ವಿದೇಶ ಪ್ರಮುಖ

ಐಎನ್‌ಎಕ್ಸ್‌ ಹಗರಣ: ತನಿಖಾಧಿಕಾರಿಗಳ ವಶಕ್ಕೆ ಪಿ. ಚಿದಂಬರಂ

ನಾನು ತಲೆಮರೆಸಿಕೊಂಡಿಲ್ಲ, ಕಾನೂನು ಗೌರವಿಸುವೆ: ಪಿ. ಚಿದಂಬರಂ

ಹೊಸದಿಲ್ಲಿ: ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇ.ಡಿ ಅಧಿಕಾರಿಗಳು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬುಧವಾರ ಚಿದಂಬರಂ ಸಲ್ಲಿಸಿದ್ದ ಮಧ್ಯಂತರ ಜಾಮೀನು ಕೋರಿಕೆ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಬಳಿಕ ಚಿದಂಬರಂ ನಿವಾಸಕ್ಕೆ ತೆರಳಿದ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಇದಕ್ಕೆ ಮುನ್ನ ರಾತ್ರಿ 8 ಗಂಟೆ ವೇಳೆಗೆ ಪಿ. ಚಿದಂಬರಂ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭ ತಾವು ತಲೆಮರೆಸಿಕೊಂಡಿದ್ದಾಗಿ ಬಂದಿರುವ ಆರೋಪಗಳನ್ನು ನಿರಾಕರಿಸಿದರು.

ಅವರ ಸುದ್ದಿಗೋಷ್ಠಿಯ ಹೈಲೈಟ್ಸ್ ಇಲ್ಲಿವೆ:

ಪ್ರಜಾಪ್ರಭತ್ವದ ಆಧಾರಸ್ಥಂಭವೇ ಸ್ವಾತಂತ್ರ್ಯ ಎಂದು ನಾನು ನಂಬಿದ್ದೇನೆ: ಚಿದಂಬರಂ

ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ನನ್ನ ಮೇಲೆ ಯಾವುದೇ ಅಪರಾಧದ ಆರೋಪ ಇಲ್ಲ. ನನ್ನ ವಿರುದ್ಧ ಸಿಬಿಐ ಅಥವಾ ಇ.ಡಿ ಕೋರ್ಟಿಗೆ ಆರೋಪ ಪಟ್ಟಿ ಸಲ್ಲಿಸಿಲ್ಲ.
ಸತ್ಯಕ್ಕಿಂತ ಹೆಚ್ಚಿನದು ಬೇರೇನೂ ಇಲ್ಲ ಹಸಿ ಹಸಿ ಸುಳ್ಳರು ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. : ಚಿದಂಬರಂ

ಹೈಕೋರ್ಟ್ ನನಗೆ ಮಧ್ಯಂತರ ಜಾಮೀನು ನೀಡಿತ್ತು. ಕಳೆದ 13-15 ತಿಂಗಳುಗಳಿಂದ ನಾನು ಮಧ್ಯಂತರ ಜಾಮೀನಿನ ಮೇಲೆ ಇದ್ದೇನೆ.: ಚಿದಂಬರಂ

7 ತಿಂಗಳ ಬಳಿಕ ಹೈಕೋರ್ಟ್ ನನ್ನ ಮಧ್ಯಂತರ ಜಾಮೀನು ರದ್ದುಪಡಿಸಿತು. ನಾನು ಪಲಾಯನ ಮಾಡಿದ್ದೇನೆ ಎಂದು ಆರೋಪಿಸಲಾಯಿತು. ನಾನು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದೇನೆ ಎಂದೂ ಬಿಂಬಿಸಲಾಯಿತು. ಇದಕ್ಕಿಂತ ದೊಡ್ಡ ಆಘಾತ ಬೇರೆ ಇಲ್ಲ. ಆದರೆ ನಾನು ನನ್ನ ವಕೀಲರ ಜತೆ ಕುಳಿತು ನ್ಯಾಯ ಪಡೆಯುವುದು ಹೇಗೆ ಎಂದು ಚರ್ಚಿಸುತ್ತಿದ್ದೆ.: ಪಿ. ಚಿದಂಬರಂ

ನನ್ನ ಮೇಲೆ ಯಾವುದೇ ಕಾನೂನು ಬಳಸಿದರೂ ನಾನು ಅದನ್ನು ಗೌರವಿಸುತ್ತೇನೆ. ತನಿಖಾ ಸಂಸ್ಥೆಗಳು ಕಾನೂನು ದುರ್ಬಳಕೆ ಮಾಡಿಕೊಂಡರೂ ನಾನು ಗೌರವಿಸುತ್ತೇನೆ.: ಪಿ ಚಿದಂಬರಂ

ಸುಪ್ರೀಂ ಕೋರ್ಟ್ ಆದೇಶಕ್ಕೆ ತಲೆಬಾಗಿದ್ದೇನೆ. ಶುಕ್ರವಾದರ ವರೆಗೂ ಕಾಯುತ್ತೇನೆ. ಅಲ್ಲಿಯ ವರೆಗೂ ತಲೆಯೆತ್ತಿ ನಿಲ್ಲುತ್ತೇನೆ.: ಪಿ. ಚಿದಂಬರಂ

ಶುಕ್ರವಾರದ ವರೆಗೆ ಅಥವಾ ಅದಕ್ಕೂ ಮುಂದೆ ನನ್ನ ಪಾಲಿಗೆ ಸ್ವಾತಂತ್ರ್ಯದ ಬೆಳಕು ಇರುತ್ತದೆ ಎಂದು ಭಾವಿಸುತ್ತೇನೆ. ಆ ಬೆಳಕು ಇಡೀ ದೇಶವನ್ನೇ ಬೆಳಗಲಿದೆ.: ಪಿ ಚಿದಂಬರಂ

ಸುದ್ದಿಗೋಷ್ಠಿ ಮುಗಿಸಿದ ಬಳಿಕ ಚಿದಂಬರಂ ತಮ್ಮ ನಿವಾಸಕ್ಕೆ ತೆರಳಿದರು.

Related posts

ಕಾರ್ಕಳ ಬಳಿ ಭೀಕರ ಅಪಘಾತ: ಬಂಡೆಗೆ ಅಪ್ಪಳಿಸಿದ ಬಸ್, 9 ಪ್ರವಾಸಿಗರ ದಾರುಣ ಸಾವು

Upayuktha

ಆಳ್ವಾಸ್‌ ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ಸ್ಟಾರ್ಟಪ್

Upayuktha

ಮಧ್ಯಾಹ್ನದ ಹೆಲ್ತ್‌ ಬುಲೆಟಿನ್: ರಾಜ್ಯದಲ್ಲಿ 8 ಮಂದಿಗೆ ಕೊರೊನಾ ಸೋಂಕು, ದ.ಕದಲ್ಲಿ ಇಲ್ಲ

Upayuktha

Leave a Comment